ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್.ಡಿ.ಕೋಟೆ: ಚಿಕಿತ್ಸೆಗೆ ಸ್ಪಂದಿಸದೆ ಆನೆ ಸಾವು

Last Updated 19 ಏಪ್ರಿಲ್ 2011, 5:30 IST
ಅಕ್ಷರ ಗಾತ್ರ

ಎಚ್.ಡಿ. ಕೋಟೆ: ತಾಲ್ಲೂಕಿನ ಮೇಟಿಕುಪ್ಪೆ ವ್ಯಾಪ್ತಿಯ ನಾಗರಹೊಳೆ ಅಭಯಾರಣ್ಯದ ತಾರಕ ಹಿನ್ನೀರಿನಲ್ಲಿ ಕಾಲು ನೋವಿನಿಂದ ಬಳಲುತ್ತಿದ್ದ ಕಾಡು ಗಂಡಾನೆ ಸೋಮವಾರ ಮೃತಪಟ್ಟಿದೆ. ಕಳೆದ ಎರಡು ತಿಂಗಳ ಹಿಂದೆ ಆನೆಯ ಬಲಭಾಗದ ಮುಂದಿನ ಕಾಲಿಗೆ ಗಾಯವಾಗಿದ್ದು, ಕುಂಟುತ್ತ ನೀರನ್ನು ಕುಡಿಯಲು ತಾರಕ ಹಿನ್ನೀರಿಗೆ ಬಂದಾಗ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದರು.

ಪತ್ರಿಕಾ ವರಧಿ ಆಧರಿಸಿ ಅಧಿಕಾರಿಗಳು ಆನೆಗೆ ಚಿಕಿತ್ಸೆ ಆರಂಭಿಸಿದ್ದರು. ಕೆಲವು ದಿನ ಚಿಕಿತ್ಸೆ ಪಡೆದ ಆನೆ ಕಾಡು ಸೇರಿಕೊಂಡಿತ್ತು. 25 ದಿನಗಳ ನಂತರ ತಾರಕ ಹಿನ್ನೀರಿನಲ್ಲಿ ಅರ್ಧಕ್ಕೆ ಮುಳುಗಿಕೊಂಡು ಹೊರಬರಲು ಸಾಧ್ಯವಾಗದೆ ನರಳುತ್ತಿರ್ದುವುದನ್ನು ಗಮನಿಸಿದ ಸಿಬ್ಬಂದಿ ಮತ್ತು ಅಧಿಕಾರಿಗಳು ಚಿಕಿತ್ಸೆ ಪ್ರಾರಂಭಿಸಿದ್ದರು. ಅಲ್ಲದೆ ದಸರಾ ಆನೆ ಅರ್ಜುನನ ಸಹಾಯದಿಂದ ನೀರಿನಿಂದ ಹೊರಕ್ಕೆ ತಂದು, 6 ಜನರ ವೈದ್ಯರ ತಂಡ ಭೇಟಿಕೊಟ್ಟು, ಕಾಲಿನಲ್ಲಿದ್ದ ಕೀವನ್ನು ಆಪರೇಷನ್ ಮೂಲಕ ಹೊರತೆಗೆದು ಚಿಕಿತ್ಸೆ ನೀಡಿ, ನಂತರ ಆನೆಯ ರಕ್ತ ಮತ್ತು ಕೀವನ್ನು ಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದರು.

ಸೋಮವಾರ ಮಧ್ಯಾಹ್ನ ಡಾ.ಶ್ರೀನಿವಾಸ್ ಎಂದಿನಂತೆ ಚಿಕಿತ್ಸೆ ಮುಂದುವರೆಸಿದ್ದರು. ತೀವ್ರ ಅಸ್ವಸ್ಥವಾಗಿದ್ದ ಆನೆಯು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದೆ ಎಂದು ತಿಳಿಸಿದ್ದಾರೆ. ನಂತರ ಮರಣೋತ್ತರ ಪರೀಕ್ಷೆ ನಡೆಸಿದರು. ಸ್ಥಳಕ್ಕೆ ಎಸಿಎಫ್ ಚಂದ್ರಶೇಖರ್, ಆರ್‌ಎಫ್‌ಒ ಸಂತೋಷ ನಾಯಕ, ಫಾರೆಸ್ಟ್ ನಂದೀಶ್ ಹಾಗೂ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT