ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಎಎಲ್‌ಗೆ ಮತ್ತೊಂದು ನಿರಾಸೆ

Last Updated 18 ಜನವರಿ 2012, 19:30 IST
ಅಕ್ಷರ ಗಾತ್ರ

ಮಡಗಾಂವ್: ಸತತ ಸೋಲಿನಿಂದ ಸಂಕಷ್ಟಕ್ಕೆ ಸಿಲುಕಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಸ್ಪೋರ್ಟ್ಸ್ ಕ್ಲಬ್ (ಎಚ್‌ಎಎಲ್) ತಂಡಕ್ಕೆ ಮತ್ತೊಂದು ಸೋಲು ಅಪ್ಪಳಿಸಿದೆ.

ಬುಧವಾರ ನಡೆದ 15ನೇ ಸುತ್ತಿನ ಪಂದ್ಯದಲ್ಲಿ ಎಚ್‌ಎಎಲ್ 0-4ರಲ್ಲಿ ಗೋಲುಗಳಿಂದ ಸಲಗಾಂವ್ಕರ್ ಎದುರು ಸೋಲು ಕಂಡಿತು. ಈ ಮೂಲಕ ಆತಿಥೇಯ ತಂಡ ಸತತ ಐದನೇ ಗೆಲುವು ಪಡೆಯಿತು.

ಸಲಗಾಂವ್ಕರ್ ತಂಡ ಒಟ್ಟು 15 ಪಂದ್ಯಗಳಿಂದ 25 ಪಾಯಿಂಟ್ ಗಳಿಸಿದೆ. ಆದರೆ, ಎಚ್‌ಎಎಲ್ ಈ ಹಿಂದೆ ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದು ಮೂರು ಪಾಯಿಂಟ್ ಮಾತ್ರ ಕಲೆ ಹಾಕಿದೆ.
ಎಚ್‌ಎಎಲ್‌ಗೆ ಈ ಋತುವಿನಲ್ಲಿ ಒಂದೂ ಪಂದ್ಯದಲ್ಲಿ ಗೆಲುವು ಪಡೆಯಲು ಸಾಧ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT