ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಐವಿ ನಿರ್ಮೂಲನೆಗೆ ಹೊಸ ಲಸಿಕೆ

Last Updated 14 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಎಚ್‌ಐವಿ ನಿರ್ಮೂಲನೆಗೆ ನೂತನ ಏಡ್ಸ್ ಲಸಿಕೆ ಅಭಿವೃದ್ಧಿ ಪಡಿಸಲಾಗಿದ್ದು, ಇದು, ಎಚ್‌ಐವಿ ಸೋಂಕನ್ನು ದೇಹದಿಂದ ಹೊರಹಾಕುತ್ತದೆ ಎಂದು ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.

ಒರೆಗಾನ್‌ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾಲಯ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಸಸ್ತನಿಗಳ ಮೇಲೆ  ಪ್ರಯೋಗಿಸಲಾಗಿದೆ. ಈ ಪ್ರಯೋಗದಲ್ಲಿ  ಏಡ್ಸ್‌ಗೆ ಕಾರಣವಾಗುವ ವೈರಸ್‌ ಅನ್ನು  ಲಸಿಕೆ ಸಂಪೂರ್ಣವಾಗಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ ಎನ್ನಲಾಗಿದೆ.

ಮಂಗಗಳಲ್ಲಿ ಏಡ್ಸ್‌ಗೆ ಕಾರಣವಾಗುವ ಎಸ್‌ಐವಿ (ಸಿಮನ್‌ ಇಮು್ನೊಡಿಫಿಷಿಯೆನ್ಸಿ ವೈರಸ್‌) ಮೇಲೆ ನೂತನ ಲಸಿಕೆ ಪ್ರಯೋಗಿಸಿದಾಗ ಸಿವ್‌ ವೈರಸ್‌ ಅನ್ನು ನಿರ್ಮೂಲನೆ ಮಾಡುವಲ್ಲಿ ಲಸಿಕೆ ಯಶಸ್ವಿಯಾಗಿದೆ. ಮನುಷ್ಯನಲ್ಲಿ ಕಂಡು ಬರುವ ಎಚ್ಐವಿಯಂತೆಯೇ ಸಸ್ತನಿ (ಮನುಷ್ಯನನ್ನು ಹೊರತುಪಡಿಸಿ)ಗಳಲ್ಲಿ ಎಸ್‌ಐವಿ ವೈರಸ್‌ ಏಡ್ಸ್‌ಗೆ ಕಾರಣವಾಗುತ್ತದೆ. ಸಸ್ತನಿಗಳಲ್ಲಿ ಯಶಸ್ವಿಯಾಗಿರುವ

ನೂತನ ಲಸಿಕೆ ಮನುಷ್ಯನಲ್ಲೂ ಯಶಸ್ವಿಯಾಗುವ ಭರವಸೆಯನ್ನು ವಿಜ್ಞಾನಿಗಳು ಹೊಂದಿದ್ದು, ಶೀಘ್ರದಲ್ಲೇ ಈ ಲಸಿಕೆಯನ್ನು ಮನುಷ್ಯರ ಮೇಲೂ ಪ್ರಯೋಗಿಸಲಾಗುವುದು ಎಂದು ಒರೆಗಾನ್‌ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾಲಯದ ಸಹಾಯಕ ನಿರ್ದೇಶಕ ಲೂಯಿಸ್‌ ಪಿಕರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT