ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಬಿಸಿ-ಗೃಹ ಖರೀದಿ

Last Updated 18 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಮನೆ ಖರೀದಿಸುವ ವರು ಮತ್ತು ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವ ಪುಣೆಯ ಹೋಮ್ ಬೈಯರ್ಸ್  ಕಂಬೈನ್(ಎಚ್‌ಬಿಸಿ) `ಸಾಮೂಹಿಕ ಗೃಹ ಖರೀದಿ~ ಪರಿಕಲ್ಪನೆ  ಪ್ರಕಟಿಸಿದೆ.

ನಗರದಲ್ಲಿ ಮನೆ ಖರೀದಿಸಲಿಚ್ಚಿಸುವವರು www.homebu yerscombine.com  ಗೆ ನೋಂದಾಯಿಸಿಕೊಂಡು ಶೇ 15-20ರಷ್ಟು ಹಣ ಉಳಿಸಬಹುದು. ಸಾಮೂಹಿಕವಾಗಿ ಗೃಹ ಖರೀದಿ ನಡೆಯುವುದರಿಂದ ಖರೀದಿದಾರರಿಗೆ ಹಣ ಉಳಿಯುತ್ತದೆ.  ಈ ಯೋಜನೆಗೆ ಭೂ ಸ್ವಾಧೀನ ಹಂತದಲ್ಲಿಯೇ ಹೂಡಿಕೆ ಮಾಡಬೇಕಾಗುತ್ತದೆ ಎಂದು ಕಂಪೆನಿಯ  ವ್ಯವಸ್ಥಾಪಕ ನಿರ್ದೇಶಕ ನಿತಿನ್ ಡಿಗಾಂನ್ಕೋರ್ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಬೆಂಗಳೂರಿನಲ್ಲಿ ವೆಂಕಟೇಶ್ವರ ಹೌಸಿಂಗ್ ಸಮೂಹದ ಜತೆ ಒಪ್ಪಂದವಾಗಿದೆ. ಗ್ರಾಹಕರಿಂದ ನಿವೇಶನ ಮೌಲ್ಯದ ಶೇ 0.5 ಮತ್ತು ನಿರ್ಮಾಣಗಾರರಿಂದ ಶೇ 2-4ರಷ್ಟು ಹಣವನ್ನು ಸೇವಾ ಶುಲ್ಕವಾಗಿ ಪಡೆಯುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT