ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಜುಯುನಿವರ್ಸಲ್‌ ವಿಶ್ವ ಸಮ್ಮೇಳನ 9ರಿಂದ

Last Updated 18 ಸೆಪ್ಟೆಂಬರ್ 2013, 19:41 IST
ಅಕ್ಷರ ಗಾತ್ರ

ಬೆಂಗಳೂರು: ಶಿಕ್ಷಣ ಕ್ಷೇತ್ರದಲ್ಲಿನ ಆವಿಷ್ಕಾರಗಳು ಹಾಗೂ ಸವಾಲುಗಳ ಬಗ್ಗೆ ಬೆಳಕು ಚೆಲ್ಲಲು ನಗರದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ (ಐಐಎಂ) ಆಶ್ರಯದಲ್ಲಿ ಆರನೇ ಎಜುಯೂ­ನಿ­ವರ್ಸಲ್‌ ವಿಶ್ವ ಸಮ್ಮೇಳನ ಅ. 9ರಿಂದ 12ರ ವರೆಗೆ ನಗರದಲ್ಲಿ ನಡೆಯಲಿದೆ.

ಸಮ್ಮೇಳನವನ್ನು ಐಐಎಂನ ನಿರ್ದೇಶಕ ದೇವನಾಥ್‌ ತಿರುಪತಿ ಉದ್ಘಾಟಿಸುವರು. ಎಜು­ಯುನಿ­ವ­ರ್ಸಲ್ ಸಂಸ್ಥಾಪಕ ಮಾರ್ಟಿಯಲ್‌ ಗಯೆಟ್‌ ಸಮ್ಮೇಳನದ ಅಧ್ಯಕ್ಷತೆ ವಹಿಸುವರು. ಸಮ್ಮೇಳನದಲ್ಲಿ ಶಿಕ್ಷಕ ತಜ್ಞರು, ಡೀನ್‌ಗಳು, ವೃತ್ತಿಪರರನ್ನು ಒಂದೇ ವೇದಿಕೆಯಡಿ ತಂದು ಶಿಕ್ಷಕ ಕ್ಷೇತ್ರದ ಸವಾಲುಗಳ ಬಗ್ಗೆ ಚರ್ಚಿ­ಸಲು ಅನುವು ಮಾಡಿಕೊಡಲಾ­ಗುವುದು. ಭಾರತ­ದಲ್ಲಿ ಶಿಕ್ಷಣ ಕ್ಷೇತ್ರದ ಮೇಲಾಗಿರುವ ಆರ್ಥಿಕ ಪ್ರಭಾವ ಹಾಗೂ ಸಾಮಾಜಿಕ ಸವಾಲುಗಳು, ಏಷ್ಯಾದ ಉನ್ನತ ಶಿಕ್ಷಣ–ಸವಾಲು­ಗಳು, ಏಕಕಾಲಕ್ಕೆ ಎರಡು ಪದವಿ ಕಲಿಕೆ– ಸವಾಲುಗಳು ವಿಷಯಗಳ ಕುರಿತು ಚರ್ಚೆ ಆಯೋಜಿಸಲಾಗಿದೆ.

ಮಾಹಿತಿಗಾಗಿ ವೆಬ್‌ಸೈಟ್‌ (http:convention.eduuniversal.com) ಅಥವಾ ರಾಕೇಶ್‌
ಗೋದ್ವಾನಿ (Rakesh. Godhwani@iibm.ernet.in) ಅವರನ್ನು ಸಂಪರ್ಕಿ­ಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT