ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡಶಕ್ತಿಗಳಿಂದ ಮಾತ್ರ ನೆಮ್ಮದಿ

Last Updated 18 ಜನವರಿ 2011, 12:55 IST
ಅಕ್ಷರ ಗಾತ್ರ

ಸಿಂಧನೂರು:  ಭಾರತ ಕಮ್ಯುನಿಷ್ಟ ಪಕ್ಷ ಸ್ಥಾಪನೆಯಾದಾಗಿನಿಂದ ಬಡ ವರ, ಅಸಹಾಯಕರ ಪರವಾಗಿ ಕೆಲಸ ಮಾಡುತ್ತಾ ಬಂದಿದೆ. ಹಲವು ದಿಟ್ಟ ಹೋರಾಟಗಳನ್ನು ಕೈಗೊಂಡು ನ್ಯಾಯ ಒದಗಿಸಿದ ಹಿರಿಮೆ ಪಕ್ಷಕ್ಕಿದೆ. ಜನಸಾಮಾನ್ಯರು ನೆಮ್ಮದಿ ಕಾಣ ಬೇಕಾದರೆ ಎಡ ಮತ್ತು ಜಾತ್ಯತೀತ ಶಕ್ತಿಗಳೇ ಪರ್ಯಾಯ ಎಂದು ಭಾರತ ಕಮ್ಯುನಿಷ್ಟ ಪಕ್ಷದ ರಾಜ್ಯ ಕಾರ್ಯ ದರ್ಶಿ ಡಾ.ಸಿದ್ಧನಗೌಡ ಪಾಟೀಲ್ ಅಭಿಪ್ರಾಯಪಟ್ಟರು.

ಅವರು ಇತ್ತೀಚೆಗೆ ಇಲ್ಲಿ ಪಕ್ಷ ಏರ್ಪಡಿಸಿದ್ದ 85ನೇ ವರ್ಷಾಚರಣೆ ಹಾಗೂ ಕಾರ್ಯಾಲಯದ ಉದ್ಘಾ ಟನೆ ನೆರವೇರಿಸಿ ಮಾತನಾಡಿದರು. ಬಡವರ, ಅಸಹಾಯಕರ ಪರವಾಗಿ ಭಾರತ ಕಮ್ಯುನಿಷ್ಟ ಪಕ್ಷ ಸ್ಥಾಪನೆ ಯಾದಾಗಿನಿಂದಲೂ ಹೋರಾಟ ಮಾಡುತ್ತ ಬಂದಿದ್ದು, ಜನಸಾ ಮಾನ್ಯರಿಗೆ ನೆಮ್ಮದಿ ಸಿಗಬೇಕಾದರೆ ಎಡಪಂಥೀಯ ರಾಜಕೀಯ ಶಕ್ತಿ ಅಧಿಕಾರಕ್ಕೆ ಬರಬೇಕಾಗಿದೆ ಎಂದರು.

ಜಿಲ್ಲಾ ಮಂಡಳಿ ಸದಸ್ಯ ಅಮೀರ ಅಲಿ ಮಾತನಾಡಿ ರೈತರು, ಕಾರ್ಮಿ ಕರು ಮತ್ತು ನೌಕರ ವರ್ಗದಲ್ಲಿ ರಾಜಕೀಯ ಪ್ರಜ್ಞೆ ಬರಬೇಕಾಗಿದೆ ಎಂದರು. ಜಿಲ್ಲಾ ಕಾರ್ಯದರ್ಶಿ ಬಾಷುಮಿಯಾ ಅಧ್ಯಕ್ಷತೆ ವಹಿಸಿದ್ದರು. ಶರಣಪ್ಪ ಗೋನಾಳ, ಚಿದಾನಂದಪ್ಪ, ಚೆನ್ನಪ್ಪ, ಬೊಮ್ಮಣ್ಣ, ಚಂದ್ರಶೇಖರ ಕ್ಯಾತನಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT