ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡ್ಯುಕ್ಯಾಂಪ್ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ

Last Updated 13 ಜನವರಿ 2012, 8:50 IST
ಅಕ್ಷರ ಗಾತ್ರ

ರಾಯಚೂರು: ಎಡ್ಯುಕ್ಯಾಂಪ್ ಸ್ಮಾರ್ಟ್ ಕ್ಲಾಸ್ ಸಂಸ್ಥೆಯು ಭಾರತದ ದೊಡ್ಡ ಡಿಜಿಟಲ್ ತಂತ್ರಜ್ಞಾನ ಆಧಾರದ ಮೂಲಕ ಶಿಕ್ಷಣ ನೀಡುವ ಶೈಕ್ಷಣಿಕ ಕಂಪೆನಿಯಾಗಿದೆ. ಈ ಸಂಸ್ಥೆಯು ಈಗ ರಾಯಚೂರು ಜಿಲ್ಲೆಯ ನಿರ್ದಿಷ್ಟ ಖಾಸಗಿ ಶಿಕ್ಷಣ ಸಂಸ್ಥೆಗಳ ಶಾಲೆಗಳಿಗೆ ಡಿಜಿಟಲ್ ತಂತ್ರಜ್ಞಾನ ಆಧಾರಿಯ ಶಿಕ್ಷಣ ಕಲ್ಪಿಸುವ ವ್ಯವಸ್ಥೆ ಅನುಷ್ಠಾನಗೊಳಿಸಿದೆ ಎಂದು ಎಡ್ಯುಕ್ಯಾಂಪ್ ಸ್ಮಾರ್ಟ್ ಕ್ಲಾಸ್ ಸಂಸ್ಥೆಯ ಉಪ ಪ್ರಧಾನ ವ್ಯವಸ್ಥಾಪಕ ಪಿ.ವಿ.ವಿ ಸತ್ಯನಾರಾಯಣ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್‌ಸಿಇಆರ್‌ಟಿ ಸಂಸ್ಥೆಯಿಂದ ಮಾನ್ಯತೆ ಪಡೆದ ಸಂಸ್ಥೆಯಾಗಿದೆ. ಇಂಟೆಲ್ ಸಹಭಾಗಿತ್ವದಲ್ಲಿ ಎಡ್ಯುಕ್ಯಾಂಪ್ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ, ತರಗತಿಯಲ್ಲಿ ಮಕ್ಕಳಿಗೆ ಕಲಿಕೆಗೆ ಪೂರಕವಾದ ಸಿಟಿಎಸ್ ವಿಧಾನದ ಬಗ್ಗೆ ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಮತ್ತು ಶಿಕ್ಷಕರಿಗೆ ವಿಚಾರ ಸಂಕಿರಣ ಮೂಲಕ ತಿಳಿಸಿಕೊಡಲಾಗಿದೆ ಎಂದು ಹೇಳಿದರು.

ಎಡ್ಯುಕ್ಯಾಂಪ್ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಯನ್ನು ಈಗಾಗಲೇ ದೇಶದಲ್ಲಿ 8000ಕ್ಕೂ ಹೆಚ್ಚು ಖಾಸಗಿ ಶಾಲೆಗಳು ಅಳವಡಿಸಿಕೊಂಡಿವೆ. ಕರ್ನಾಟಕದಲ್ಲಿ 1,000 ಶಾಲೆಗಳು ಅಳವಡಿಸಿಕೊಂಡಿವೆ. ರಾಯಚೂರು ನಗರ ಮತ್ತು ಜಿಲ್ಲೆಯ ವಿವಿಧ ಭಾಗದಲ್ಲಿ ಒಟ್ಟು 15 ಶಾಲೆಗಳು ಈ ಪದ್ಧತಿ ಅಳವಡಿಸಿಕೊಂಡಿವೆ. ತರಗತಿಯಲ್ಲಿ ಮಕ್ಕಳ ಕಲಿಕೆಗೆ ಪೂರಕವಾದ ಬೋಧನಾ ವಿಧಾನವಾದ ಸಿಟಿಎಸ್ ( ಕ್ಲಾಸ್ ಟ್ರಾನ್ಸ್‌ಫೋರ್ಮೆಸನ್ ಸಿಸ್ಟಮ್) ರೂಪಿಸಿದೆ. ಇದು ಶಾಲೆಯ ಶೈಕ್ಷಣಿಕ ಫಲಿತಾಂಶ ಉತ್ತಮ ಪಡಿಸಲು ಸಹಕಾರಿಯಾಗಿದೆ ಎಂದು ವಿವರಿಸಿದರು.

ಎಡ್ಯುಕ್ಯಾಂಪ್ ಸ್ಮಾರ್ಟ್ ಕ್ಲಾಸ್ ಎಂಬ ನೂತನ ತಾಂತ್ರಿಕತೆಯು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿಯಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ವೃದ್ಧಿಸುತ್ತದೆ. ಬೋಧಕರಿಗೆ ಸಹಕಾರಿಯಾಗುತ್ತದೆ. ಸಾಂಪ್ರದಾಯಿಕ ಬೋಧನಾ ವಿಧಾನಕ್ಕಿಂತ ವಿಭಿನ್ನ ರೀತಿಯಲ್ಲಿ ಎಡ್ಯುಕ್ಯಾಂಪ್ ಸ್ಮಾರ್ಟ್ ಕ್ಲಾಸ್ ಬೋಧನಾ ವಿಧಾನ ಪರಿಣಾಮಕಾರಿಯಾಗಿರುತ್ತದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಕಲಿಯಬಹುದು. ಸಿಟಿಎಸ್ ಸಮಗ್ರ ಡಿಜಿಟಲ್ ತಂತ್ರಜ್ಞಾನ ಎಂಬುದು ಭಾರತೀಯ ತರಗತಿಗಳಿಗರ ಸೂಕ್ತವಾಗಿದೆ. ಇಂಗ್ಲಿಷ್, ಕನ್ನಡ ಸೇರಿದಂತೆ ಆಯಾ ಪ್ರಾದೇಶಿಕ ಭಾಷೆಯಲ್ಲಿಯೇ ಮಕ್ಕಳಿಗೆ ಪಠ್ಯ ಇಲ್ಲಿ ಲಭ್ಯ ಆಗಲಿವೆ. ಶಿಕ್ಷಕರಿಗೂ ತರಬೇತಿ ನೀಡಲಾಗಿರುತ್ತದೆ.ಆನಿಮೇಷನ್, ಮೈಂಡ್ ಮ್ಯಾಪ್, ವೆಬ್ ಲಿಂಕ್, ಗ್ರಾಫಿಕ್ಸ್, ಡಯಾಗ್ರಾಮ್ ಮೇಕರ್ ಹೀಗೆ ಬೋಧನೆಗೆ ಪೂರಕವಾದ ಡಿಜಿಟಲ್ ತಂತ್ರಜ್ಞಾನ ಆಧಾರಿತ  ಸಿದ್ಧ ಪ್ರದರ್ಶನಾ ವ್ಯವಸ್ಥೆ ಸಂಪನ್ಮೂಲ ಕಲ್ಪಿಸಲಾಗಿರುತ್ತದೆ ಎಂದು ತಿಳಿಸಿದರು.

ಎಡ್ಯುಕ್ಯಾಂಪ್ ಸ್ಮಾರ್ಟ್ ಕ್ಲಾಸ್ ಸಂಸ್ಥೆಯು ಕೆ.ಜಿಯಿಂದ 12ನೇಯ ತರಗತಿಯವರೆಗಿನ ಮಕ್ಕಳಿಗೆ ಶಿಕ್ಷಣ ದೊರಕಿಸಲಾಗಿದೆ. ಈ ವ್ಯವಸ್ಥೆ ಅಳವಡಿಸಿಕೊಳ್ಳುವ ಸಂಸ್ಥೆಯು ಕನಿಷ್ಠ 30 ಸಾವಿರದಿಂದ 1 ಲಕ್ಷ ಪಾವತಿಸಬೇಕಾಗುತ್ತದೆ. ಹೊಸದಾಗಿ ಎಡ್ಯುಕ್ಯಾಂಪ್ ಸ್ಮಾರ್ಟ್ ಕ್ಲಾಸ್ `ತ್ರಿ-ಡಿ ಲ್ಯಾಬ್~ ಅನುಷ್ಠಾನಗೊಳಿಸುತ್ತಿದೆ  ಎಂದು ಹೇಳಿದರು.

ಎಡ್ಯುಕ್ಯಾಂಪ್ ಸೊಲ್ಯುಷನ್ಸ್ ಕಂಪೆನಿಯ ಹಿರಿಯ ವ್ಯವಸ್ಥಾಪಕ ಗಿರೀಶ ದುರ್ಗದಮಠ, ವಲಯ ವ್ಯವಸ್ಥಾಪಕ ರವಿ ರಾಥೋಡ್  ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT