ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತುಗಳ ಮಾರಾಟಕ್ಕೆ ಅಣಿಯಾದ ರೈತರು

Last Updated 4 ಜುಲೈ 2012, 5:55 IST
ಅಕ್ಷರ ಗಾತ್ರ

ಧಾರವಾಡ: ಮುಂಗಾರು ತಡವಾಗಿ ಆರಂಭವಾಗಿರುವುದರಿಂದ ಮೇವಿನ ಕೊರತೆ ಉಂಟಾದ ಹಿನ್ನೆಲೆಯಲ್ಲಿ ತಾಲ್ಲೂಕಿನ ರೈತರು ತಮ್ಮ ಎತ್ತುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾ ಡಲು ಮುಂದಾಗಿದ್ದಾರೆ.
ನಗರದಲ್ಲಿ ಮಂಗಳವಾರ ನಡೆದ ದನದ ಸಂತೆಗೆ ತಂದಿದ್ದ ಹಲವು ಬಲಿಷ್ಠ ಎತ್ತುಗಳಲ್ಲಿ ಮೇವಿನ ಕೊರತೆಯಿಂದ ತಂದವುಗಳೇ ಅಧಿಕ ಸಂಖ್ಯೆಯಲ್ಲಿದ್ದವು.

18 ಸಾವಿರಕ್ಕೆ ಖರೀದಿ ಮಾಡಿದ್ದ ಗರಗ ಬಳಿಯ ದುಮ್ಮನಮಡ್ಡಿಯ ರೈತ ರೊಬ್ಬರ ಎತ್ತನ್ನು 12 ಸಾವಿರಕ್ಕೂ ಕೇಳು ವವರು ಗತಿ ಇರಲಿಲ್ಲ. ಇದೇ ಸಮಯ ವನ್ನು ಕಾಯುತ್ತಿದ್ದ ಕಟುಕರು ಬಾಯಿಗೆ ಬಂದಷ್ಟು ಬೆಲೆಗೆ ಕೇಳುತ್ತಿದ್ದರು.

“ರೈತರಂತೂ ಎತ್ತುಗಳ ಖರೀದಿಗಾಗಿ ಬರುತ್ತಲೇ ಇಲ್ಲ” ಎಂದು ಗ್ರಾಮದ ಸುರೇಶ ಜುಟ್ಟಪ್ಪನವರ ಅಲವತ್ತು ಕೊಂಡರು. ಇನ್ನು ಮುಗದ ಗ್ರಾಮದ ಪಾರ್ವತಿ ಎಂಬ ರೈತ ಮಹಿಳೆ ತಂದಿದ್ದ ಎತ್ತಿನ ಕಥೆಯೂ ಇದೇ ಆಗಿತ್ತು.
ಅತ್ಯಂತ ಬಲಿಷ್ಠವಾದ ಆ ಎತ್ತನ್ನು ಕೊಳ್ಳುವವರೂ ಅಲ್ಲಿರಲಿಲ್ಲ. ಬೆಳಿಗ್ಗೆಯೇ ಬಂದವರು ಮಧ್ಯಾಹ್ನದವರೆಗೂ ಗಿರಾಕಿ ಗಳಿಗಾಗಿ ಕಾಯುತ್ತಾ ನಿಂತಿದ್ದರು.

ಜೂನ್ ಮೊದಲ ವಾರದಲ್ಲಿ ಆರಂಭ ವಾಗಬೇಕಿದ್ದ ಮಳೆ ಜುಲೈ ತಿಂಗಳು ಕಾಲಿಟ್ಟರೂ ಪೂರ್ಣ ಪ್ರಮಾಣ ದಲ್ಲಿ ಆಗದೇ ಇರುವುದರಿಂದ ಹಸಿರು ಮೇವು ಜಮೀನುಗಳಲ್ಲಿ ಕಾಣುತ್ತಿಲ್ಲ.ಎತ್ತುಗಳನ್ನು ಹಸಿವಿನಿಂದ ಬಳಲಿಸುವ ಬದಲು ಮಾರಾಟ ಮಾಡಿದರಾಯಿತು ಎಂದು ಹಲವು ರೈತರು ತಮ್ಮ ಜಾನುವಾರುಗಳನ್ನು ತಂದಿದ್ದರು.
ಸುಮಾರು 40 ಸಾವಿರ ಬೆಲೆ ಬಾಳ ಬಹುದಾದ ಜೋಡೆತ್ತು ಗಳನ್ನು ಕೇವಲ 28 ಸಾವಿರಕ್ಕೆ ಕೇಳುತ್ತಿದ್ದ ದೃಶ್ಯವೂ ಅಲ್ಲಿ ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT