ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಆರ್‌ಐ ಮಹಿಳೆಗೆ ಏಕಪಕ್ಷೀಯ ವಿಚ್ಛೇದನ: ಪರಿಣತರ ವಿರೋಧ

Last Updated 15 ಫೆಬ್ರುವರಿ 2011, 18:15 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಸಐ): ಆರೋಪಿ ಹಸ್ತಾಂತರ ಒಪ್ಪಂದಗಳ ವ್ಯಾಪ್ತಿಗೆ ಮನೆ ಜಗಳ ಪ್ರಕರಣ ಸೇರ್ಪಡೆ, ವಿದೇಶಗಳಲ್ಲಿ ದೂರೀಕರಿಸಲ್ಪಟ್ಟ ಮಹಿಳೆಯರಿಗೆ ವಿದೇಶಿ ನ್ಯಾಯಾಲಯಗಳು ನೀಡುವ ಏಕಪಕ್ಷೀಯ ವಿಚ್ಛೇದನವನ್ನು ನಿಷೇಧಿಸುವುದು ಹಾಗೂ ದಾರಿತಪ್ಪಿದ ಪತಿಯರ ಹಸ್ತಾಂತರ ನಿಯಮವನ್ನು ಸಡಿಲಿಸುವುದು ಸೇರಿದಂತೆ ಅನಿವಾಸಿ ಭಾರತೀಯರನ್ನು ವಿವಾಹವಾಗುವ ಮಹಿಳೆಯರು ಎದುರಿಸುವ ಸಮಸ್ಯೆಗಳಿಗೆ ಪರಿಣತರು ಹಲವು ಪರಿಹಾರ ಸೂಚಿಸಿದ್ದಾರೆ.

ಅನಿವಾಸಿಗಳ (ಎನ್‌ಆರ್‌ಐ) ಮದುವೆಯಲ್ಲಿ ಈಗಿರುವ ಶಾಸನಗಳ ಅನಾನುಕೂಲತೆ ಕುರಿತು ಮಂಗಳವಾರ ಇಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಕೆಲವು ಪರಿಣತರು ಮಾತನಾಡಿದ್ದಾರೆ.

‘ಅಂತರರಾಷ್ಟ್ರೀಯ ನಿಯಮಮತ್ತು ನ್ಯಾಯಾಂಗ ವಿಷಯಗಳಲ್ಲಿ ಕೆಲವು ಕಾನೂನುಗಳು ಅವಶ್ಯಕವಾಗಿವೆ’ ಎಂಬುದಾಗಿ ಅವರು ಅಭಿಪ್ರಾಯಪಟ್ಟಿದ್ದಾರೆ.
ವಿದೇಶ ನೆಲದಲ್ಲಿ ಎನ್‌ಆರ್‌ಐ ಪತಿ ಸಲ್ಲಿಸುವ ವಿಚ್ಛೇದನ ಅರ್ಜಿಗೆ ಸಂಬಂಧಿಸಿದಂತೆ ಕಾನೂನು ಹೋರಾಟ ನಡೆಸಲು ಮಹಿಳೆಯರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಭಾರತದಲ್ಲಿರುವ ವಿದೇಶಿ ದೂತಾವಾಸಗಳಿಂದ ತ್ವರಿತಗತಿಯಲ್ಲಿ ವೀಸಾ ಮಂಜೂರು ಮಾಡಿಸುವಂತೆ ನಿಯಮಗಳನ್ನು ಸರಳಗೊಳಿಸಲು ಕೂಡಾ ಅವರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT