ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಎಂಡಿಸಿ ಘಟಕಕ್ಕೆ ನಕ್ಸಲರ ದಾಳಿ

40,000 ಟನ್‌ ಅದಿರು ಸಾಗಣೆಗೆ ತೊಂದರೆ
Last Updated 18 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ರಾಯಪುರ/ಹೈದರಾಬಾದ್‌(ಪಿಟಿಐ): ಛತ್ತೀಸಗಡದ ದಾಂತೆವಾಡ ಜಿಲ್ಲೆ­ಯಲ್ಲಿರುವ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದ (ಎನ್‌ಎಂಡಿಸಿ)  ಘಟಕದ ಮೇಲೆ ಮಂಗಳವಾರ ರಾತ್ರಿ ಎರಗಿದ ನಕ್ಸಲರು ಕನ್ವೇಯರ್‌ ಬೆಲ್ಟ ಅನ್ನು ಸುಟ್ಟುಹಾಕಿದ್ದರಿಂದ 40,­000 ಟನ್‌ ಉತ್ಪಾದನೆ ನಷ್ಟವಾಗಿದೆ.

ಬಹೇಲಿ ಕಬ್ಬಿಣ ಅದಿರು ಗಣಿಗೆ ರಾತ್ರಿ 2.30ರ ವೇಳೆಗೆ ನುಗ್ಗಿದ ನಕ್ಸಲರು 80 ಮೀಟರ್‌ನಷ್ಟು ಉದ್ದದ ಕನ್ವೇಯರ್‌ ಬೆಲ್‌್ಟ ಸುಟ್ಟು ಹಾಕಿದ್ದ­ರಿಂದ ಗಣಿ ಚಟುವಟಿಕೆ ಸ್ಥಗಿತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಶ್ವಕರ್ಮ ಪೂಜೆ ಅಂಗವಾಗಿ ಮಂಗಳವಾರ ಗಣಿ ಘಟಕಕ್ಕೆ ರಜೆ ಇತ್ತು. ಈ ಸಂದರ್ಭವನ್ನು ಬಳಸಿ­ಕೊಂಡ ಮಾವೊವಾದಿಗಳು ರಾತ್ರಿ ಘಟಕಕ್ಕೆ ನುಗ್ಗಿ ಬಹೇಲಿಯ 29ನೇ ನಂಬರಿನ ಕನ್ವೇಯರ್‌ ಬೆಲ್ಟ್‌ನ್ನು ಸುಟ್ಟು ಹಾಕಿದರು ಎಂದು ಎನ್‌ಎಂಡಿಸಿ ಮೂಲಗಳು ಹೇಳಿವೆ.

ಘಟನೆ ನಡೆಯುತ್ತಿದ್ದಂತೆ ಹಲವು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು. ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್‌) ಸಿಬ್ಬಂದಿಯನ್ನೂ ಕಾರ್ಯಾಚರಣೆಗೆ ನಿಯೋಜಿಸಲಾಯಿತು. ಆಮೇಲೆ ಬೇಗನೇ ಪರಿಸ್ಥಿತಿಯನ್ನು ನಿಯಂತ್ರಿಸ­ಲಾ­ಯಿತು ಎಂದು ಪೊಲೀಸ್‌ ವರಿಷ್ಠಾ­ಧಿಕಾರಿ ನರೇಂದ್ರ ಖರೆ ತಿಳಿಸಿದ್ದಾರೆ.

ಕನ್ವೇಯರ್‌ ಬೆಲ್ಟ್ ಸುಟ್ಟು ಹೋಗಿ­ರುವುದರಿಂದ ಇಲ್ಲಿಂದ ವಿವಿಧೆಡೆಗಳಿಗೆ ಆಗುವ ಅದಿರು ಪೂರೈಕೆ ಎರಡು– ಮೂರು ದಿನಗಳ ಕಾಲ ವ್ಯತ್ಯಯ­ವಾಗಲಿದೆ. ಈ ಬೆಲ್ಟ್ ಮೂಲಕ ಪ್ರತಿದಿನ 20,000 ಟನ್‌ ಕಬ್ಬಿಣದ ಅದಿರನ್ನು ಸ್ಥಳಾಂತರಿಸಲಾಗುತ್ತಿತ್ತು. ಬೆಲ್ಟ್ ಸರಿಪಡಿಸಲು ಕನಿಷ್ಠ ಎರಡು ದಿನ ಹಿಡಿಯುವುದರಿಂದ ಕನಿಷ್ಠ 40,000 ಟನ್‌ ಅದಿರು ಪೂರೈಕೆಗೆ ತೊಂದರೆಯಾಗಲಿದೆ.   ಮುಂದಿನ ವಾರ ಈ ಕೊರತೆ ಸರಿದೂಗಿ­ಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಘಟಕದ ಕಾರ್ಯಾಚರಣೆಯು ಶುಕ್ರವಾರದಿಂದ ಭಾಗಶಃ ಆರಂಭವಾ­ಗಲಿದೆ ಎಂದು ಹೇಳಲಾಗಿದೆ.

ಹೋದ ವರ್ಷವೂ ನಡೆದಿತ್ತು: ಮಾವೊವಾದಿಗಳು ಕಳೆದ ವರ್ಷ ದಾಂತೆವಾಡ ಜಿಲ್ಲೆಯ ಕಿರಂದುಲ್‌ನಲ್ಲಿ ಸಾರ್ವಜನಿಕ ಸ್ವಾಮ್ಯದ ಎನ್‌ಎಂಡಿಸಿ ಘಟಕದ ಪಹರೆಗಾಗಿ ನಿಯೋಜಿತ­ವಾಗಿದ್ದ ಸಿಐಎಸ್‌ಎಫ್‌ ತಂಡದ ಮೇಲೆ ಹಠಾತ್‌ ಗುಂಡಿನ ದಾಳಿ ನಡೆಸಿ ಏಳು ಯೋಧರನ್ನು ಹತ್ಯೆ ಮಾಡಿದ್ದರು.

ಎನ್‌ಎಂಡಿಸಿ ಭೀತಿ: ಎನ್‌ಎಂಡಿಸಿ ಘಟಕಗಳ ಮೇಲೆ ಆಗಾಗ  ಇಂತಹ ದಾಳಿ ನಡೆಯುತ್ತಿರು­ವುದರಿಂದ ಬೈಲಾ­ದಿಲ ವಲಯದಿಂದ ಅದಿರು ಪೂರೈ­ಸಲು ಸ್ವಲ್ಪ ತೊಡಕಾ­ಗುತ್ತಿದೆ. ತನ್ನ ಸಿಬ್ಬಂದಿ ಮತ್ತು ಘಟಕ­ಗಳ ಸುರಕ್ಷತೆ­ಗಾಗಿ ನಿಗಮವು ಸರ್ಕಾ­ರದ ವಿವಿಧ ಇಲಾಖೆಗಳ ಜತೆ ಸತತ ಸಂಪರ್ಕ­ದಲ್ಲಿದೆ. ಛತ್ತೀಸಗಡ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಆರಂಭಿಸಿ­ರುವ ಪ್ರಯತ್ನಗಳಿಂದಾಗಿ ಶೀಘ್ರವೇ ಸಮಸ್ಯೆ ಪರಿಹಾರವಾಗಬಹುದು ಎಂದು ಎನ್‌ಎಂ­ಡಿಸಿ  ವರದಿಯಲ್ಲಿ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT