ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಎಸ್‌ಡಿ ಡೀಮ್ಡ ವಿ.ವಿ ಮಾನ್ಯತೆ ರದ್ದು

Last Updated 7 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ನಾಟಕ ಶಾಲೆಗೆ ನೀಡಲಾಗಿದ್ದ ಡೀಮ್ಡ ವಿಶ್ವವಿದ್ಯಾಲಯದ ಮಾನ್ಯತೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದುಗೊಳಿಸಲು ಕೇಂದ್ರ ಸಂಸ್ಕೃತಿ ಸಚಿವಾಲಯ ತೀರ್ಮಾನಿಸಿದೆ.

ಡೀಮ್ಡ ವಿಶ್ವವಿದ್ಯಾಲಯಕ್ಕೆ ಬದಲಾಗಿ ಇದನ್ನು ರಾಷ್ಟ್ರೀಯ ಮಾನ್ಯತೆಯುಳ್ಳ ಸಂಸ್ಥೆ ಅಥವಾ ಸಂಸತ್ ಕಾಯ್ದೆ ಅನುಸಾರ ವಿಶೇಷ ವಿಶ್ವವಿದ್ಯಾಲಯ ಎಂದು ಗುರುತಿಸುವಂತೆ ಎನ್‌ಎಸ್‌ಡಿ ಸೊಸೈಟಿ ಶಿಫಾರಸು ಮಾಡಿದ್ದು, ಇದರ ಅನುಸಾರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ವಿವರಿಸಿದ್ದಾರೆ.

ಡೀಮ್ಡ ವಿವಿ ಮಾನ್ಯತೆಯಿಂದ ಶಿಕ್ಷಕರ ನೇಮಕಾತಿ ಹಾಗೂ ವೃತ್ತಿಪರ ತರಬೇತಿಯಂತಹ ವಿಷಯಗಳಲ್ಲಿ ಆಡಳಿತಾತ್ಮಕ ಸ್ವಾಯತ್ತತೆ ಹಲವು ತೊಂದರೆಗಳನ್ನು ಉಂಟು ಮಾಡುತ್ತಿದೆ ಆದ್ದರಿಂದ ಡೀಮ್ಡ ಮಾನ್ಯತೆಯ ಬದಲಾಗಿ ಇದಕ್ಕೆ ವಿಶೇಷ ವಿಶ್ವವಿದ್ಯಾಲಯದ ಅಥವಾ ರಾಷ್ಟ್ರೀಯ ಮಾನ್ಯತೆಯುಳ್ಳ ಸಂಸ್ಥೆ ಎಂದು ಗುರುತಿಸುವುದು ಸೂಕ್ತ ಎಂಬುದು ಎನ್‌ಎಸ್‌ಡಿ ಸೊಸೈಟಿಯ ಅಭಿಪ್ರಾಯವಾಗಿದೆ.

2005ರಿಂದ ರಾಷ್ಟ್ರೀಯ ನಾಟಕ ಶಾಲೆಗೆ ಡೀಮ್ಡ ವಿಶ್ವವಿದ್ಯಾಲಯದ ಮಾನ್ಯತೆ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT