ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಡಿಎ ವಿದೇಶಾಂಗ ನೀತಿ ತರಾಟೆಗೆ

ಮೋದಿ ಟೀಕೆಗೆ ಕಾಂಗ್ರೆಸ್‌ ತಿರುಗೇಟು
Last Updated 16 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಗಡಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮಾಡಿ­ರುವ ಟೀಕೆಗೆ ಉತ್ತರ ನೀಡಿ­ರುವ  ಕಾಂಗ್ರೆಸ್‌, ಎನ್‌ಡಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಆಗಿರುವ ವಿದೇಶಾಂಗ ನೀತಿಯ ಲೋಪಗಳನ್ನು  ಪ್ರಸ್ತಾಪಿಸಿದೆ.

‘ಗಡಿಯಲ್ಲಿ ಉಂಟಾಗುತ್ತಿರುವ ಸಮಸ್ಯೆ­ಗಳಿಗೆ ಸೇನೆ ಕಾರಣವಲ್ಲ ಬದಲಿಗೆ ತೊಂದರೆ ಇರುವುದು ದೆಹಲಿಯಲ್ಲಿ’ ಎಂದು ಹರಿಯಾಣದ ರೇವಾರಿಯಲ್ಲಿ ನಡೆದ ಸಭೆಯಲ್ಲಿ ಮೋದಿ ಆರೋ­ಪಿಸುವ ಮೂಲಕ ಯುಪಿಎ ಸರ್ಕಾರದ ವಿದೇಶಾಂಗ ನೀತಿಯನ್ನು ಕಟುವಾಗಿ ಟೀಕಿಸಿದ್ದನ್ನು ಪ್ರಸ್ತಾಪಿಸಿದ ಕೇಂದ್ರ ವಾರ್ತಾ ಸಚಿವ ಮನಿಷ್‌ ತಿವಾರಿ, ಎನ್‌ಡಿಎ ಅಧಿಕಾರಾವಧಿಯಲ್ಲಿ ನಡೆದ ಅವಾಂತರಗಳನ್ನು ಟ್ವೀಟ್‌ ಮಾಡಿದ್ದಾರೆ.

‘ಕಾರ್ಗಿಲ್‌ ಕದನ, ಕಂದಹಾರ್‌ ಅಪ­ಹರಣ, ಸಂಸತ್ತಿನ ಮೇಲೆ ದಾಳಿ­ಯಂತಹ ಪ್ರಕರಣಗಳು ನಡೆದದ್ದು ಎನ್‌ಡಿಎ ಅಧಿಕಾರಾವಧಿಯಲ್ಲೇ’ ಎಂದು ತಿವಾರಿ ಟೀಕಿಸಿದ್ದಾರೆ.

ವಿದೇಶಾಂಗ ನೀತಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕೆ ಅಟಲ್‌­ಬಿಹಾರಿ ವಾಜಪೇಯಿ ಸರ್ಕಾರ ತೆಗೆದು­ಕೊಂಡ ಕ್ರಮಗಳನ್ನು ಮೋದಿ ರೇವಾರಿಯ ಸಭೆಯಲ್ಲಿ ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT