ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಪಿಎ ಜಾಗೃತಿ; ಬ್ಯಾಂಕ್‌ ನೌಕರರಿಂದ ಬೇಡಿಕೆ ದಿನ

Last Updated 4 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): ದೇಶದ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ‘ವಸೂಲಾಗದ ಸಾಲ’ (ಎನ್‌ಪಿಎ) ಪ್ರಮಾಣ ಹೆಚ್ಚುತ್ತಿರುವತ್ತ ಗಮನ ಸೆಳೆಯಲು ದೇಶಾದ್ಯಂತ ಗುರು ವಾರ ‘ಬೇಡಿಕೆ ದಿನ’ ಆಚರಿಸಲಾಗು ತ್ತಿದೆ ಎಂದು ‘ಅಖಿಲ ಭಾರತ ಬ್ಯಾಂಕ್‌ ನೌಕರರ ಸಂಘ’(ಎಐಬಿಇಎ) ಬುಧವಾರ ತಿಳಿಸಿದೆ.

₨1 ಕೋಟಿ ಮತ್ತು ಅದಕ್ಕೂ ಹೆಚ್ಚಿನ ಮೊತ್ತದ ಸುಸ್ತಿದಾರರ ಪಟ್ಟಿಯನ್ನು ಬ್ಯಾಂಕ್‌ಗಳು ತಕ್ಷಣ ಪ್ರಕಟಿಸಬೇಕು. ಸಾಲ ವಿತರಣೆ ವಹಿವಾಟಿನಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಉನ್ನತ ಅಧಿಕಾರಿ ಗಳು ಮತ್ತು ಕಾರ್ಪೊರೇಟ್ ಕಂಪೆನಿಗಳ ನಡುವಿನ ಅಪವಿತ್ರ ಮೈತ್ರಿ ಕುರಿತೂ ತನಿ ಖೆಯಾಗಬೇಕು. ಅದಕ್ಕಾಗಿ ವಿಶೇಷ ತನಿ ಖಾಧಿಕಾರಿಗಳ ತಂಡವನ್ನೂ ರಚಿಸಬೇಕು ಎಂದೂ ಸಂಘ ಆಗ್ರಹಿಸಿದೆ.

ಇದೇ ವೇಳೆ ಅತ್ಯಧಿಕ ಮೊತ್ತದ ಸುಸ್ತಿ ದಾರರಾದ 50 ಮಂದಿಯ ಹೆಸರುಗಳ ಪಟ್ಟಿಯನ್ನೂ ಸಂಘ ಬಿಡುಗಡೆ ಮಾಡಿದೆ.
ಭಾರತೀಯ ರಿಸರ್ವ್ ಬ್ಯಾಂಕ್‌ ಅಂಕಿ ಅಂಶ ಪ್ರಕಾರ 2013ನೇ ಹಣಕಾಸು ವರ್ಷದಲ್ಲಿ ದೇಶದ ಬ್ಯಾಂಕಿಂಗ್‌ ಕ್ಷೇತ್ರದ ಎನ್‌ಪಿಎ ₨1.94ಲಕ್ಷ ಕೋಟಿಯಷ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT