ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಪಿಎಸ್‌ಗೆ ಶಿಫಾರಸು

Last Updated 8 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ನೌಕರರ ಭವಿಷ್ಯನಿಧಿ ಯೋಜನೆಯಲ್ಲಿ (ಇಪಿಎಫ್‌ಒ) ನೀಡುತ್ತಿರುವಷ್ಟೇ ಕನಿಷ್ಠ ಬಡ್ಡಿ ದರವನ್ನು ಹೊಸ ಪಿಂಚಣಿ ವ್ಯವಸ್ಥೆಯ (ಎನ್‌ಪಿಎಸ್) ಚಂದಾದಾರಿಗೂ ನೀಡಬೇಕು ಎಂದು ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ.

`ಪಿಂಚಣಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಮಸೂದೆ-2011ಕ್ಕೆ ಸಂಬಂಧಿಸಿದಂತೆ ಶಿಫಾರಸು ಸಲ್ಲಿಸಿರುವ ಯಶವಂತ ಸಿನ್ಹಾ ಅವರನ್ನೊಳಗೊಂಡ  ಸಂಸದೀಯ ಸ್ಥಾಯಿ ಸಮಿತಿ, ಪಿಂಚಣಿ ಯೋಜನೆಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಗರಿಷ್ಠ ಮಿತಿ  ಶೇ 26ರಷ್ಟು ಇರಬೇಕು ಎಂದೂ ಹೇಳಿದೆ.

ಕಳೆದ ಮಾರ್ಚ್ ತಿಂಗಳಲ್ಲಿ ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿತ್ತು. ಆದರೆ, ಪಿಂಚಣಿ ಯೋಜನೆಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಮಿತಿಗೆ ಸಂಬಂಧಿಸಿದ ವಿವಾದ ಇನ್ನೂ ಇತ್ಯರ್ಥಗೊಂಡಿಲ್ಲ. ಸದ್ಯ ಪಿಂಚಣಿ ಯೋಜನೆಗಳ ಮೇಲೆ  ವಿದೇಶಿ ನೇರ ಬಂಡವಾಳ ಹೂಡಿಕೆಗೆ ಸರ್ಕಾರ ಅವಕಾಶ ಕಲ್ಪಿಸಿಲ್ಲ.

`ಇಪಿಎಫ್‌ಒ~ ನೌಕರರ ಭವಿಷ್ಯ ನಿಧಿಗೆ ಶೇ 9.5ರಷ್ಟು ಬಡ್ಡಿ ದರ ನೀಡುತ್ತಿದೆ. `ಎನ್‌ಪಿಎಸ್~ ಚಂದಾದಾರರಿಗೆ ಇದಕ್ಕಿಂತ ಕಡಿಮೆ ಬಡ್ಡಿ ದೊರೆಯಬಾರದು ಎಂದೂ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ.

`ಎನ್‌ಪಿಎಸ್~ ಯೋಜನೆ 2004ರಲ್ಲಿ ಜಾರಿಗೆ ಬಂದಿದ್ದು, ಸುಮಾರು 24 ಲಕ್ಷ ಕೇಂದ್ರ ಸರ್ಕಾರಿ ಉದ್ಯೋಗಿಗಳು ಇದರ ವ್ಯಾಪ್ತಿಯಲ್ಲಿ ಬರುತ್ತಾರೆ. ಈ ಯೋಜನೆಯನ್ನು ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಕ್ಕೂ ವಿಸ್ತರಿಸಬೇಕು ಎಂದು ಸಮಿತಿ ಸೂಚಿಸಿದೆ.

ಸದ್ಯ ಪಿಂಚಣಿ ಯೋಜನೆಗಳನ್ನು ಭವಿಷ್ಯನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಎಫ್‌ಆರ್‌ಡಿಎ) ನಿರ್ವಹಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT