ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಸಿಸಿಯಿಂದ ತಂಬಾಕುರಹಿತ ದಿನಾಚರಣೆ

Last Updated 1 ಜೂನ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾಜಿಕ ಕಳಕಳಿಯಿಂದ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕರ್ನಾಟಕ ಮತ್ತು ಗೋವಾ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ನಿರ್ದೇಶನಾಲಯವು `ವಿಶ್ವ ತಂಬಾಕು ರಹಿತ ದಿನಾಚರಣೆ~ ಯನ್ನು  ಶುಕ್ರವಾರ ನಗರದಲ್ಲಿ ಆಚರಿಸಿತು.

ತಂಬಾಕು ತಿನ್ನುವ ಅಭ್ಯಾಸವನ್ನು ತಪ್ಪಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಲು ವಿವಿಧ ರೀತಿಯ ಬ್ಯಾನರ್‌ಗಳನ್ನು ಹಿಡಿದು ಮೆರವಣಿಗೆ  ಮತ್ತು ರ‌್ಯಾಲಿಯನ್ನು ನಡೆಸಲಾಯಿತು.

ಎನ್‌ಸಿಸಿ ಕೆಡೆಟ್‌ಗಳು ಕಬ್ಬನ್ ಉದ್ಯಾನವನದಲ್ಲಿ ಸಮ್ಮಿಳಿತಗೊಂಡು ತಂಬಾಕು ಪದಾರ್ಥವನ್ನು ಜೀವನದಿಂದ ದೂರವಿಡುವಂತೆ ಪ್ರತಿಜ್ಞೆ ಕೈಗೊಂಡರು.

`ನಾವು ಮುಂದಿನ ದಿನಗಳಲ್ಲಿ ತಂಬಾಕು ಸೇವಿಸಬೇಕು ಎಂದು ಅನಿಸಿದಾಗ ಈ ದಿನವನ್ನು ನೆನಪಿಸಿಕೊಳ್ಳುತ್ತೇವೆ~ ಎಂದು ಘೋಷಿಸಿದರು.

ಬೇರೆ ಶಾಲಾ ಮತ್ತು ಕಾಲೇಜುಗಳ ಕೆಡೆಟ್‌ಗಳು ಬೀದಿ ನಾಟಕಗಳನ್ನು ಪ್ರದರ್ಶಿಸಿ ಸಾರ್ವಜನಿಕರಲ್ಲಿ ಜಾಗೃತಿ ಉಂಟು ಮಾಡುವ ಕಾರ್ಯವನ್ನು ಮಾಡಿದರು. ತಂಬಾಕಿನಿಂದ ಕ್ಯಾನ್ಸರ್, ಹಲ್ಲುಗಳ ಮೇಲೆ ಕಲೆಗಟ್ಟಿ, ಬಾಯಿಯ ದುರ್ವಾಸನೆ ಬರುವುದು ಹೀಗೆ ನಾನಾ ರೀತಿಯ ಕಾಯಿಲೆಗಳಿಂದ ಬಳಲಬೇಕಾದ ದುಷ್ಟರಿಣಾಮಗಳ ಬಗ್ಗೆ ಅರಿವನ್ನು ಮೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT