ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ಚುನಾವಣೆ ಫಲಿತಾಂಶ

Last Updated 3 ಜೂನ್ 2011, 6:45 IST
ಅಕ್ಷರ ಗಾತ್ರ

ಕೂಡ್ಲಿಗಿ: ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ 10 ಕ್ಷೇತ್ರಗಳಿಗೆ ಮಂಗಳವಾರ ನಡೆದ ಚುನಾವಣೆಯ ಫಲಿತಾಂಶ ಗುರುವಾರ ಮತ ಎಣಿಕೆಯ ನಂತರ ಪ್ರಕಟಗೊಂಡಿದೆ. ಒಟ್ಟು 13 ಕ್ಷೇತ್ರಗಳಲ್ಲಿ 3 ಕ್ಷೇತ್ರಗಳು ಅವಿರೋಧವಾಗಿ ಆಯ್ಕೆಯಾಗಿ 10 ಕ್ಷೇತ್ರಗಳಿಗಾಗಿ ಚುನಾವಣೆ ನಡೆದಿತ್ತು.

ಫಲಿತಾಂಶದಲ್ಲಿ ಒಟ್ಟು 13 ಕ್ಷೇತ್ರ ಗಳಲ್ಲಿ 11 ಸ್ಥಾನಗಳು ಬಿಜೆಪಿ ಬೆಂಬ ಲಿತ ಅಭ್ಯರ್ಥಿಗಳಿಗೆ, 2 ಕ್ಷೇತ್ರಗಳು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪಾಲಾಗಿವೆ. ಗುರುವಾರ ನಡೆದ ಮತ ಎಣಿಕೆಯ ನಂತರ ವಿವಿಧ ಕ್ಷೇತ್ರಗಳ ಆಯ್ಕೆಯಾದ ಅಭ್ಯರ್ಥಿಗಳ ಫಲಿತಾಂಶ ಹಾಗೂ ಮತಗಳ ವಿವರ ಈ ಕೆಳಗಿ ನಂತಿದೆ.

ಕೊಟ್ಟೂರು ಕ್ಷೇತ್ರ (ಮಹಿಳೆ)-ಲತಾ ಪಾಟೀಲ್(1,249), ಶಿವಪುರ ಕ್ಷೇತ್ರ (ಸಾಮಾನ್ಯ)-ಎಂ.ನಿಂಗಪ್ಪ(1,155), ಉಜ್ಜಿನಿ ಕ್ಷೇತ್ರ (ಹಿಂದುಳಿದ ವರ್ಗ ಅ)- ಜೆ.ಸಿ.ಶಶಿಧರ್(3,159), ಹೊಸಹಳ್ಳಿ ಕ್ಷೇತ್ರ(ಸಾಮಾನ್ಯ)-ಎಚ್.ಕೆ.ಕಲ್ಲಪ್ಪ(1,760), ಹೂಡೇಂ ಕ್ಷೇತ್ರ(ಹಿಂದುಳಿದ ವರ್ಗ ಬ)-ಎಚ್.ಗಂಗಾಧರಪ್ಪ

(1,726), ಬಣವಿಕಲ್ಲು (ಸಾಮಾನ್ಯ)-ಕೆ.ನಾಗರಾಜ(1,857), ಕೂಡ್ಲಿಗಿ ಕ್ಷೇತ್ರ (ಸಾಮಾನ್ಯ)- ಸಿ.ಕೊಟ್ರೇಶಪ್ಪ (1,018),  ಗುಡೇ ಕೋಟೆ ಕ್ಷೇತ್ರ(ಅನುಸೂಚಿತ ಪಂಗಡ)- ಬಿ.ಗಂಗಮ್ಮ(1,366), ಬೆಳ್ಳಿಗಟ್ಟ ಕ್ಷೇತ್ರ (ಸಾಮಾನ್ಯ)- ಡಿ.ವೆಂಕಟ ಸ್ವಾಮಿ (559), ಗುಂಡುಮುಣುಗು ಕ್ಷೇತ್ರ (ಸಾಮಾನ್ಯ)-ಎಚ್. ರೇವಣ್ಣ (1,928).

ತಿಮ್ಮಲಾಪುರ ಕ್ಷೇತ್ರ (ಅನುಸೂಚಿತ ಜಾತಿ) ಪಿ.ಎಚ್.ಪಂಪಣ್ಣ, ಕೂಡ್ಲಿಗಿ ಕೃಷಿ ಉತ್ಪನ್ನ ಸಮಿತಿ ಕಮೀಷನ್ ಏಜೆಂಟ್ ಹಾಗೂ ವ್ಯಾಪಾರಿಗಳ ಕ್ಷೇತ್ರದಿಂದ(ಸಾಮಾನ್ಯ) ಎಸ್.ಗುರು ಶಾಂತಪ್ಪ, ಕೂಡ್ಲಿಗಿ ತಾಲ್ಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘ ಕ್ಷೇತ್ರ(ಸಾಮಾನ್ಯ) ಎಂ.ಎಂ.ಜೆ.ಸ್ವರೂಪಾನಂದ ಅವಿ ರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಾಲ್ಲೂಕು ಆಡಳಿತ ತಿಳಿಸಿದೆ.

ಮತಗಳ ಎಣಿಕೆ ಕಾರ್ಯವು ಗುರುವಾರ ಸಂತ ಮೈಕೆಲ್ ಶಾಲೆಯಲ್ಲಿ ಬೆಳಿಗ್ಗೆ 8ರಿಂದ ಆರಂಭಗೊಂಡು ಮಧ್ಯಾಹ್ನ 12ಕ್ಕೆ ಪೂರ್ಣಗೊಂಡಿತು. ಗೆಲುವು ಸಾಧಿಸಿದ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.

ಮತಗಳ ಎಣಿಕೆ ಕಾರ್ಯದ ಸಂಪೂರ್ಣ ಉಸ್ತುವಾರಿಯನ್ನು ತಹಸೀಲ್ದಾರ್ ವೀರಮಲ್ಲಪ್ಪ ಪೂಜಾರ್ ನಿರ್ವಹಿ ಸಿದರು. ಮತ ಎಣಿಕೆ ಕೇಂದ್ರದ ಸುತ್ತಲೂ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT