ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಕೋರ್, ಮಿನಾಕ್ಸ್ ಒಪ್ಪಂದ

Last Updated 15 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಉದ್ದಿಮೆ- ವಹಿವಾಟಿಗೆ ಸಂಬಂಧಿಸಿದ ಸಾಫ್ಟ್‌ವೇರ್ ಉತ್ಪಾದನೆ, ವಿತರಣೆ ಮತ್ತಿತರ ಸೇವೆ ಒದಗಿಸುವ ಎಪಿಕೋರ್ ಸಾಫ್ಟ್‌ವೇರ್ ಕಾರ್ಪೊರೇಷನ್, ಆದಿತ್ಯ ಬಿರ್ಲಾ  ಮಿನಾಕ್ಸ್ ಜತೆ ಒಪ್ಪಂದ ಮಾಡಿಕೊಂಡಿದೆ.

ಎಪಿಕೋರ್ `ಹೊಸ ತಲೆಮಾರಿನ ಉದ್ದಿಮೆಗಳ ಸಂಪನ್ಮೂಲ ಯೋಜನೆ ಸೇವೆ~ಯನ್ನು ಭಾರತ ಮತ್ತು ಮಧ್ಯಪ್ರಾಚ್ಯ ದೇಶಗಳಿಗೆ  ಮಾರಾಟ ಮಾಡಿ, ಜಾರಿಗೆ ತರುವುದು ಸೇರಿದಂತೆ ಮತ್ತಿತರ ಬಗೆಯಲ್ಲಿ ಸೇವೆ  ಒದಗಿಸಲು ಈ ಒಪ್ಪಂದ ನೆರವಾಗಲಿದೆ.

ಸರಕುಗಳ ತಯಾರಿಕೆ, ವಿತರಣೆ, ಚಿಲ್ಲರೆ ವಹಿವಾಟು ಮತ್ತು ಸೇವಾ ಸಂಘಟನೆಗಳಿಗೆ ನೆರವಾಗುವ ಈ ಸಾಫ್ಟ್‌ವೇರ್‌ನ ಮರು ಮಾರಾಟಕ್ಕೆ ಮಿನಾಕ್ಸ್ ಅನ್ನು ನೇಮಕ ಮಾಡಲಾಗಿದೆ ಎಂದು ಎಪಿಕೋರ್‌ನ ಮಾರಾಟ ವಿಭಾಗದ ಉಪಾಧ್ಯಕ್ಷ ಬಸಿಲ್ ಡೇನಿಯಲ್ಸ್, ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಾರುಕಟ್ಟೆಯಲ್ಲಿನ ಮಿನಾಕ್ಸ್‌ನ ವ್ಯಾಪಕ ಅನುಭವ ಮತ್ತು ಗ್ರಾಹಕರಿಗೆ ಅತ್ಯುತ್ತಮ ಸೇವೆ ಒದಗಿಸುತ್ತಿರುವುದು ಎಪಿಕೋರ್‌ನ ಹೊಸ ಗ್ರಾಹಕರಿಗೆ ನೆರವಾಗಲಿದೆ. ಈ ಪಾಲುದಾರಿಕೆಯಿಂದ  ಎರಡೂ ಸಂಸ್ಥೆಗಳಿಗೆ ಪ್ರಯೋಜನವಾಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT