ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಡಿಐನಿಂದ ಉತ್ಪಾದಕರಿಗೆ ಬರೆ

Last Updated 17 ಅಕ್ಟೋಬರ್ 2012, 5:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಬಂಡವಾಳಕ್ಕೆ ಅವಕಾಶ ಕಲ್ಪಿಸುವುದರಿಂದ ಗ್ರಾಹಕರಿಗೆ ಕೊಂಚ ಮಟ್ಟಿನ ಅನುಕೂಲವಾಗಬಹುದು. ಆದರೆ ಉತ್ಪಾದಕರು, ವಿತರಕರಿಗೆ ನಷ್ಟವಾಗುವುದು ಖಚಿತ. ಎಫ್‌ಡಿಐನಿಂದ ನೂರಾರು ನಿರುದ್ಯೋಗಿಗಳಿಗೆ ಉದ್ಯೋಗ ಸಿಗಬಹುದು. ಆದರೆ ಅದರಿಂದ ನೂರಾರು ಮಂದಿ ಕೆಲಸ ಕಳೆದುಕೊಳ್ಳುವುದನ್ನು ತಡೆಯಲಾಗದು~ ಎಂದು ಉದ್ಯಮಿ ಡಾ. ಸದಾನಂದ ಮಯ್ಯ ಮಂಗಳವಾರ ಇಲ್ಲಿ ಆತಂಕ ವ್ಯಕ್ತಪಡಿಸಿದರು.

ಪತ್ರಕರ್ತರೊಂದಿಗಿನ ಸಂವಾದದಲ್ಲಿ ಭಾಗವಹಿಸಿದ್ದ ಅವರು, `ಎಫ್‌ಡಿಐನಿಂದಾಗಿ ಗ್ರಾಹಕರಿಗೆ ಹೆಚ್ಚು ವಸ್ತುಗಳು ದೊರೆಯುತ್ತವೆ. ಅವರಿಗೆ ಆಯ್ಕೆಯ ಅವಕಾಶವೂ ಸಿಗಬಹುದು. ಆದರೆ ಉತ್ಪಾದಕರಿಗೆ ಹೊಡೆತ ಬೀಳುತ್ತದೆ.  ಸಣ್ಣ ವ್ಯಾಪಾರಸ್ಥರಿಗೂ ಇದರಿಂದ ನಷ್ಟವಾಗಲಿದೆ.

ಈಗಿರುವ ಸಾಂಪ್ರದಾಯಿಕ ವಿತರಣಾ ವ್ಯವಸ್ಥೆಯೂ ಬದಲಾಗಲಿದೆ~ ಎಂದು ದೇಶದ ಮಾರುಕಟ್ಟೆಯ ಮೇಲಾಗುವ ಪರಿಣಾಮಗಳನ್ನು ವಿಶ್ಲೇಷಿಸಿದರು.

ಸಿದ್ಧ ಆಹಾರ ಅನಿವಾರ್ಯ: “ಈಗ ಸರ್ಕಾರ ಅಡುಗೆ ಅನಿಲ ಸಿಲಿಂಡರ್‌ಗಳ ವಿತರಣೆ ಮೇಲೆ ನಿರ್ಬಂಧ ಹೇರಿರುವುದನ್ನು ನೋಡಿದರೆ, ಮುಂದಿನ ಹತ್ತು ವರ್ಷಗಳಲ್ಲಿ ಸಿಲಿಂಡರ್ ವಿತರಣೆಯೇ ಬಂದ್ ಆಗಬಹುದು ಎಂದೆನಿಸುತ್ತದೆ. ಆಗ  `ಸಿದ್ಧ ಆಹಾರ~ ಜನರಿಗೆ ಅನಿವಾರ್ಯವಾಗಬಹುದು” ಎಂದು ಅವರು ಚಟಾಕಿ ಹಾರಿಸಿದರು.
ಇದೇ 17ರಿಂದ ಉತ್ತರ ಕರ್ನಾಟಕದ ಭಾಗದ ಜನರಿಗೆ ಮಯ್ಯಾಸ್ ಉತ್ಪನ್ನಗಳು ದೊರೆಯಲಿವೆ ಎಂದು ಅವರು ಹೇಳಿದರು.

 `ನಮ್ಮಲ್ಲಿ ಆಹಾರ ಸಂಸ್ಕೃತಿ ಇದ್ದರೂ ಅದನ್ನು ಕಲಿಸುವ ಶಿಕ್ಷಣ ವ್ಯವಸ್ಥೆಯಲ್ಲಿ ಕೊರತೆ ಇದೆ. ಮಯ್ಯಾ ಅವರು ಆಹಾರ ಉತ್ಪಾದನೆ ಜೊತೆಗೆ ಆಹಾರ ತಂತ್ರಜ್ಞಾನ ಶಿಕ್ಷಣದ ಪ್ರಸಾರವನ್ನೂ ಮಾಡುತ್ತಿದ್ದಾರೆ~ ಎಂದು ಕಲಾವಿದ ಯಶವಂತ ಸರದೇಶಪಾಂಡೆ ಹೇಳಿದರು. ಸಾಹಿತ್ಯ ಪ್ರಕಾಶನದ ಪ್ರಕಾಶಕ ಎಂ.ಎ. ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT