ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಬಿಐ, ಅಮೆರಿಕದ ಆಂತರಿಕ ಭದ್ರತಾ ಇಲಾಖೆ ಎಚ್ಚರಿಕೆ....

Last Updated 4 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಎಪಿ): ಅಮೆರಿಕದ ಅವಳಿ ವಿಶ್ವ ವಾಣಿಜ್ಯ ಕೇಂದ್ರ ಮತ್ತು ಪೆಂಟಗನ್ ಮೇಲೆ ನಡೆದ ಭಯೋತ್ಪಾದನಾ ದಾಳಿಯ 10ನೇ ವರ್ಷಾಚರಣೆಗೆ ಕೆಲವೇ ದಿನಗಳು ಇರುವಂತೆಯೇ ಉಗ್ರರ ಸಂಘಟನೆಯಾದ ಅಲ್-ಖೈದಾವು ಸಣ್ಣ ವಿಮಾನಗಳನ್ನು ಬಳಸಿಕೊಂಡು ದಾಳಿ ನಡೆಸಬಹುದು ಎಂದು ಎಫ್‌ಬಿಐ ಮತ್ತು ಅಮೆರಿಕದ ಆಂತರಿಕ ಭದ್ರತಾ ಇಲಾಖೆ ಎಚ್ಚರಿಸಿವೆ.

ನಿರ್ದಿಷ್ಟವಾಗಿ 9/11 ದಾಳಿಯ 10ನೇ ವರ್ಷಾಚರಣೆಯನ್ನು  ಗುರಿಯಾಗಿಸಿಕೊಂಡು ಭಯೋತ್ಪಾದನಾ ದಾಳಿ ನಡೆಯುವ ಸಾಧ್ಯತೆ ಇಲ್ಲದಿದ್ದರೂ ಮುಂಜಾಗ್ರತಾ ಕ್ರಮವಾಗಿ ದೇಶದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ಅಲ್-ಖೈದಾ ಸಂಘಟನೆಯು ಸಣ್ಣ ವಿಮಾನಗಳನ್ನು ಬಳಸಿ ದಾಳಿ ನಡೆಸುವ ಮಾರ್ಗಗಳನ್ನು ಚಿಂತಿಸುತ್ತಿತ್ತು ಎಂದು ಬಿಡುಗಡೆಗೊಳಿಸಿರುವ ಐದು ಪುಟಗಳ ಕಾನೂನು ಪಾಲನಾ ಪ್ರಕಟಣೆ ತಿಳಿಸಿದೆ.

ಸಣ್ಣ ವಿಮಾನಗಳನ್ನು ಬಾಡಿಗೆಗೆ ಪಡೆದು ಅದರಲ್ಲಿ ಸ್ಫೋಟಕಗಳನ್ನು ತುಂಬಿ ದಾಳಿ ನಡೆಸುವ ಯೋಚನೆಯಲ್ಲಿ ಭಯೋತ್ಪಾದಕರು ಇದ್ದಾರೆ ಎಂದೂ ಪ್ರಕಟಣೆ ತಿಳಿಸಿದೆ.`ವೈಮಾನಿಕ ತರಬೇತಿ, ಅದರಲ್ಲೂ ಮುಖ್ಯವಾಗಿ ಸಣ್ಣ ವಿಮಾನಗಳ ತರಬೇತಿ  ಪಡೆಯಲು ಅಲ್-ಖೈದಾ ಮತ್ತು ಅದರ ಮಿತ್ರ ಸಂಘಟನೆಗಳು ಬಯಸಿವೆ.

ಯೂರೋಪ್ ಅಥವಾ ಅಮೆರಿಕದಲ್ಲಿ ತರಬೇತಿ ನೀಡುವುದಕ್ಕಾಗಿ ಪಾಶ್ಚಿಮಾತ್ಯ ರಾಷ್ಟ್ರಗಳ ನಾಗರಿಕರನ್ನು ನೇಮಿಸಿಕೊಳ್ಳುತ್ತಿವೆ. ಆದಾಗ್ಯೂ, ತಕ್ಷಣಕ್ಕೆ ದಾಳಿ ನಡೆಸುವ ಕುರಿತು ಈ ಸಂಘಟನೆಗಳು ಯೋಜನೆ ರೂಪಿಸಿರುವ ಬಗ್ಗೆ ನಮ್ಮಲ್ಲಿ ನಂಬಲರ್ಹ ಮಾಹಿತಿಗಳಿಲ್ಲ~ ಎಂದು ಪ್ರಕಟಣೆ ತಿಳಿಸಿದೆ.ಈ ಮಧ್ಯೆ, ಇದು ಎಂದಿನಂತೆ ಬಿಡುಗಡೆ ಮಾಡಿರುವ ಪ್ರಕಟಣೆ ಎಂದು ಆಂತರಿಕ  ಭದ್ರತಾ ಇಲಾಖೆ ವಕ್ತಾರ ಮಾಥ್ಯೂ ಚಾಂಡ್ಲರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT