ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎ,ಬಿ,ಸಿ,ಡಿಯಲ್ಲಿ ಹಗರಣ ಬಿಡಿಸಿಟ್ಟ ಮೋದಿ

Last Updated 10 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಜೈಪುರ(ಪಿಟಿಐ): ದೇಶವನ್ನು  ಭ್ರಷ್ಟಾ­ಚಾ­­ರ­­ಮುಕ್ತ­ವನ್ನಾಗಿಸಲು ಕಾಂಗ್ರೆಸ್‌ನ್ನುಅಧಿಕಾರದಿಂದ ಕಿತ್ತೊಗೆ­ಯಬೇಕು ಎಂದು ಗುಜರಾತ್‌ ಮುಖ್ಯಮಂತ್ರಿ ನರೇಂದ್ರ  ಮೋದಿ ಅವರು ಮಂಗಳವಾರ ಇಲ್ಲಿ ಕರೆ ನೀಡಿದರು.

ಪ್ರಧಾನಿ ಮನಮೋಹನ್‌ ಸಿಂಗ್‌ ಮತ್ತು ಗಾಂಧಿ ಕುಟುಂಬವನ್ನುಕಟುವಾಗಿ ಟೀಕಿಸಿದ ಅವರು, ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರವನ್ನು ಟೀಕಿ­ಸಲು  ಇಂಗ್ಲಿಷ್‌ ವರ್ಣಮಾಲೆಯನ್ನುಬಳಸಿದರು.

ಮೋದಿ ಅವರ ಪ್ರಕಾರ ‘ಎ’ ಅಂದರೆ ಆದರ್ಶ ಹಗರಣ, ‘ಬಿ’ ಅಂದರೆ ಬೊಫೋರ್ಸ ಹಗರಣ, ‘ಸಿ’ ಅಂದರೆ ಕೋಲ್‌ (ಕಲ್ಲಿದ್ದಲು) ಹಗರಣ ‘ಡಿ’ ಅಂದರೆ ದಾಮಾದ್‌ನ (ಅಳಿಯ) ಹಗರಣ. ಕಾಂಗ್ರೆಸ್‌ ಪಕ್ಷವು ಮಕ್ಕಳಿಗೆ ಈ ಹೊಸ ಎಬಿಸಿಡಿ ವರ್ಣಮಾಲೆ ಪುಸ್ತಕವನ್ನುನೀಡಿದೆ ಎಂದು ವ್ಯಂಗ್ಯವಾ­ಡಿದರು.

ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಘಟಕ ಹಮ್ಮಿಕೊಂಡಿದ್ದ ಸಂಕಲ್ಪ ಯಾತ್ರೆಯ ಮುಕ್ತಾಯ ಸಮಾರಂಭದ ಬೃಹತ್‌ ರ್‍ಯಾಲಿಯನ್ನುಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ದೇಶವನ್ನುಮುನ್ನಡೆಸುವ ಮುಖಂಡರೇ ಇಲ್ಲ ಮತ್ತು ಮಹತ್ವದ ನಿರ್ಧಾರ ತೆಗೆದುಕೊಳ್ಳುವಲ್ಲಿ ಎಡುವುತ್ತಿರುವ ಕೇಂದ್ರ ಸರ್ಕಾ­ರಕ್ಕೆ ಹೊಣೆಗಾರಿಕೆ ಎಂಬುದು ಗೊತ್ತಿಲ್ಲ ಎಂದು ಲೇವಡಿ ಮಾಡಿದರು.

ಭ್ರಷ್ಟಾಚಾರ ಎನ್ನುವುದು ಕಾಂಗ್ರೆಸ್‌ಗೆ ‘ಆಭ­ರಣ’­ವಿದ್ದಂತೆ. ಹೆಚ್ಚು ಹೆಚ್ಚು ಭ್ರಷ್ಟಾಚಾರ ಮಾಡಿ­ದವರಿಗೆ ಪಕ್ಷದಲ್ಲಿ ಬಡ್ತಿ ನೀಡಲಾಗುತ್ತದೆ ಎಂದು ಟೀಕಿಸಿದ ಮೋದಿ, ಭ್ರಷ್ಟಾಚಾರವೆಂಬ ರೋಗ ಇಡೀ ದೇಶಕ್ಕೆ ಹಬ್ಬುತ್ತಿದೆ, ಆದ್ದರಿಂದ ಭಾರತವನ್ನು ಭ್ರಷ್ಟಾ­ಚಾರದಿಂದ ಮುಕ್ತಗೊಳಿ­ಸಬೇಕಾದರೆ ಕಾಂಗ್ರೆಸ್‌ನ್ನುತೊಲಗಿಸಬೇಕು ಎಂದು ಹೇಳಿದರು.

ಸ್ವಾತಂತ್ರ್ಯ ಪೂರ್ವದ ಕಾಂಗ್ರೆಸ್‌ಗೂ ನಂತರದ ಕಾಂಗ್ರೆಸ್‌ಗೂ ಬಹಳ ವ್ಯತ್ಯಾಸವಿದೆ. ಸ್ವಾತಂತ್ರ್ಯಾ ನಂತರ ಪಕ್ಷವು ಒಂದು ಕುಟುಂಬದ ಭಕ್ತಿಯಲಿ್ಲ ಮುಳುಗಿದೆ ಎಂದು ಟೀಕಿಸಿದರು.

ಬಿಜೆಪಿ ಭಾರತ ಭಕ್ತಿಯಲ್ಲಿ ಮುಳುಗಿದ್ದು, 125 ಕೋಟಿ ಜನತೆಯ ಹಿತ ಕಾಪಾಡುವ ಕಾಳಜಿ ಹೊಂದಿದೆ ಎಂದು ಹೇಳಿದರು. ಜಿ20 ಶೃಂಗಸಭೆಯಿಂದ ಹಿಂತಿರು­ಗಿದ ನಂತರ ಪ್ರಧಾನಿ ಅವರು ತಮ್ಮ ಹೊಸ ನಾಯಕನ ಹೆಸರನ್ನುಬಹಿರಂ­ಗಪಡಿಸಿ ಮುಂದಿನ ಲೋಕಸಭಾ ಚುನಾ­ವಣೆಯಲ್ಲಿ ಹೊಸ ನಾಯಕನ ಅಧೀನ­ದಲ್ಲಿ ಕೆಲಸ ಮಾಡಲಿದ್ದಾರೆ ಎಂದು ಮೋದಿ ವ್ಯಂಗ್ಯವಾಡಿದರು.

ಯುವಕರನ್ನು ಓಲೈಸುವ ಪ್ರಯತ್ನ ಮಾಡಿದ ಅವರು, ಕಾಂಗ್ರೆಸ್‌ಗೆ ಯುವಕರು ಮತ ಬ್ಯಾಂಕ್‌, ಆದರೆ ಯುವಕರು ಬಿಜೆಪಿಗೆ ಮತ್ತು ದೇಶಕ್ಕೆ ಶಕ್ತಿ ಎಂದು ಹೇಳಿದರು.

ಇದೇ ಸಂದಭರ್ದಲ್ಲಿ ವಾಜಪೇಯಿ ಮತ್ತು ಅಡ್ವಾಣಿ ಅವರನ್ನುಹೊಗಳಿದ ಅವರು, ಜೈಪುರ–ದೆಹಲಿ ಹೆದ್ದಾರಿ ನೋಡಿದಾಗಲೆಲ್ಲ ವಾಜಪೇಯಿ ನೆನಪಾ­ಗುತ್ತಾರೆ, ಆದರೆ ಯುಪಿಎ ಇಂತಹ ಒಂದಾ­ದರೂ ಉತ್ತಮ ಕೆಲಸ ಮಾಡಿದೆಯೇ ಎಂದು ಪ್ರಶ್ನಿಸಿದರು.

ಮೋದಿ ಪ್ರಧಾನಿ ಅಭ್ಯರ್ಥಿ– ಆರ್‌ಎಸ್‌ಎಸ್
ನವದೆಹಲಿ (ಪಿಟಿಐ):
ನರೇಂದ್ರ ಮೋದಿ ಅವರಿಗೆ ಜನ ಬೆಂಬಲ ಮತ್ತು ಗೌರವ ಇರುವುದರಿಂದ ಅವರೇ ಪ್ರಧಾನಿ ಹುದ್ದೆಯ ಅಭ್ಯರ್ಥಿ. ಬಿಜೆಪಿ ಇದನ್ನುಅಧಿಕೃತವಾಗಿ ಘೋಷಿಸಬೇಕಾಗಿದೆ ಎಂದು ಆರ್‌ಎಸ್‌ಎಸ್‌ ತಿಳಿಸಿದೆ.

ದೇಶದ ವಿವಿಧ ಭಾಗಗಳಲ್ಲಿ ನಡೆಸಿದ ಸಭೆಯಲ್ಲಿ ಜನರು ದೇಶದಲ್ಲಿ ಬದಲಾವಣೆ ಆಗಬೇಕು ಎಂದು ಬಯಸಿದ್ದಾರೆ ಎಂಬ ವಿಚಾರವನ್ನುಸಂಘದ ಸದಸ್ಯರು ಎರಡು ದಿನಗಳ ಸಭೆಯಲ್ಲಿ ತಿಳಿಸಿದ್ದಾರೆ. ಆದ್ದರಿಂದ ಮೋದಿಯೇ ಪ್ರಧಾನಿ ಅಭ್ಯರ್ಥಿ ಆಗಬೇಕು ಎಂದು ತೀಮಾರ್ನಿಸಲಾಗಿದ್ದು, ಈ ವಿಚಾರವನ್ನುಬಿಜೆಪಿ ಮುಖಂಡರಿಗೆ ತಿಳಿಸಲಾಗಿದೆ ಎಂದು ಆರ್‌ಎಸ್‌ಎಸ್‌ ಮುಖಂಡ ರಾಮ್‌ ಮಾಧವ್‌ ಪತ್ರಕರ್ತರಿಗೆ ತಿಳಿಸಿದರು.

‘ಮೋದಿ ಅವರು ಪ್ರಧಾನಿ ಅಭ್ಯರ್ಥಿ ಎಂದು ತೀರ್ಮಾನಿಸುವ ಮೂಲಕ ದೇಶ ಬದಲಾವಣೆ ಬಯಸಿದೆ ಎಂಬ ಸಂದೇಶವನ್ನು ನಾವು ಮತದಾರರಿಗೆ ರವಾನಿಸಿದ್ದೇವೆ’ ಎಂದು ಅವರು ಹೇಳಿದರು.

‘ಪ್ರಧಾನಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಆರ್‌ಎಸ್‌ಎಸ್‌  ನಿಲುವನ್ನು ಸ್ಪಷ್ಟಪಡಿಸಲಾಗಿದೆ. ಆದ್ದರಿಂದ ಬಿಜೆಪಿ ಈಗ ಅಂತಿಮವಾಗಿ ಇದನ್ನು ಪ್ರಕಟಿಸಬೇಕು ಎಂಬುದು ನಮ್ಮ ಬಯಕೆಯಾಗಿದೆ’ ಎಂದು ಮಾಧವ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT