ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಮಿಲಿ ನಸ್ರುಲ್ಲ

Last Updated 19 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಎಮಿಲಿ ನಸ್ರುಲ್ಲ ಲೆಬನಾನ್ ದೇಶದ ಬರಹಗಾರ್ತಿ. ದಕ್ಷಿಣ ಲೆಬನಾನ್‌ನ ಕ್ ಫೈರ್ ಎನ್ನುವ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಆಕೆ, ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದು ಬೈರೂತ್‌ನ ವಿ.ವಿಯೊಂದರಲ್ಲಿ ಪದವಿ ಪಡೆದರು. ಸಮಕಾಲೀನ ಅರಬ್ ಸಾಹಿತ್ಯದ ಪ್ರಮುಖ ಬರಹಗಾರರಲ್ಲಿ ಎಮಿಲಿಯೂ ಒಬ್ಬರು. ಈಕೆಯ ಬರಹಗಳು ಅರಬ್ ದೇಶಗಳಲ್ಲಿ ಮಾತ್ರವಲ್ಲದೆ ಯುರೋಪ್, ಅಮೇರಿಕಾಗಳಲ್ಲೂ ಸಂಚಲನ ಮೂಡಿಸಿವೆ. ಅಮೇರಿಕಾದ ಟೆಕ್ಸಾಸ್ ವಿಶ್ವವಿದ್ಯಾಲಯ ಈಕೆಯ ಕಾದಂಬರಿಯನ್ನು ಇಂಗ್ಲೀಷ್‌ಗೆ ಭಾಷಾಂತರಿಸಿದೆ.

ಬರಹಗಾರ್ತಿ, ಅಂಕಣಕಾರ್ತಿ, ಉಪನ್ಯಾಸಕಿ, ಸ್ತ್ರೀವಾದಿ, ಮಕ್ಕಳ ಸಾಹಿತಿ- ಹೀಗೆ ಎಮಿಲಿ ಪ್ರತಿಭೆ ಅನೇಕ ಪ್ರಕಾರಗಳಲ್ಲಿ ಬೆಳಗಿದೆ. ಈಕೆಯನ್ನು ಲೆಬನಾನ್, ಈಜಿಪ್ಟ್, ಆಸ್ಟ್ರೇಲಿಯಾ, ಕೆನಡಾ ದೇಶಗಳು ಪ್ರಶಸ್ತಿ ನೀಡಿ ಗೌರವಿಸಿವೆ. ಈಕೆಯ ‘Flight against Time’ ಎನ್ನುವ ಕಾದಂಬರಿ ಪ್ರಸಿದ್ಧಿ ಪಡೆದಿದೆ. ಲೆಬನಾನ್‌ನಲ್ಲಿ ನಡೆದ ಹದಿನೇಳು ವರ್ಷಗಳ ನಿರಂತರ ಅಂತಃಕಲಹಗಳ ಅನುಭವಗಳನ್ನು ಅಕ್ಷರಗಳಲ್ಲಿ ತಂದ ಬರಹಗಾರರಲ್ಲಿ ಎಮಿಲಿ ನಸ್ರುಲ್ಲ ಮೊದಲಿಗರಾಗಿ ನಿಲ್ಲುತ್ತಾರೆ. ಅವರ ‘Explosion: Bearing Witness’ ಎನ್ನುವ ಕತೆಯೇ ಇಲ್ಲಿನ ‘ಮಾಯಾಲೋಕ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT