ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ಪೋಪ್ ಪ್ರತಿಮೆ ಅನಾವರಣ

Last Updated 26 ಅಕ್ಟೋಬರ್ 2011, 19:50 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕೆ.ಚನ್ನಸಂದ್ರದಲ್ಲಿರುವ ಚರ್ಚ್‌ನಲ್ಲಿ ನೂತನವಾಗಿ ಪ್ರತಿಷ್ಠಾಪಿಸಲಾದ ಎರಡನೇ ಪೋಪ್ ಜಾನ್ ಪಾಲ್ ಅವರ ಕಂಚಿನ ಪ್ರತಿಮೆಯನ್ನು ಪೋಪ್‌ನ ಭಾರತದ ರಾಯಭಾರಿ ಡಾ.ಸಾಲ್ವತೋರ್ ಪೆನ್ನಾಚಿಯೋ ಅವರು ಮಂಗಳವಾರ ಅನಾವರಣಗೊಳಿಸಿದರು.

ನಂತರ ಮಾತನಾಡಿದ ಸಾಲ್ವತೋರ್ ಪೆನ್ನಾಚಿಯೋ, `ಯೇಸುಕ್ರಿಸ್ತನ ತತ್ವಗಳನ್ನು ಎಲ್ಲರೂ ಅನುಸರಿಸಬೇಕು. ಎಲ್ಲರೂ ಗೌರವಯುತ ಜೀವನ ನಡೆಸಬೇಕು. ಪೋಪ್ ಜಾನ್‌ಪಾಲ್ ಅವರ ಸಂದೇಶಗಳನ್ನು ಪಾಲಿಸಬೇಕು~ ಎಂದು ಕರೆ ನೀಡಿದರು.

ಪ್ರತಿಮೆಯು 375 ಕೆ.ಜಿ. ತೂಕವಿದ್ದು, ಬ್ಯಾಂಕಾಕ್‌ನಲ್ಲಿ ಸಿದ್ಧಪಡಿಸಲಾಗಿದೆ. ಪ್ರತಿಮೆಯ ಕೆಳಭಾಗದಲ್ಲಿ ರಾಷ್ಟ್ರಪಕ್ಷಿ ನವಿಲು ಹಾಗೂ ತಾವರೆಯ ಚಿತ್ರಗಳನ್ನು ಮುದ್ರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಬೆಂಗಳೂರು ಕ್ರೈಸ್ತ ಧರ್ಮಾಧ್ಯಕ್ಷ ಡಾ.ಬರ್ನಾಡ್ ಮೋರಸ್, ಶಾಸಕ ಕೆ.ಜೆ. ಜಾರ್ಜ್, ಧರ್ಮಕೇಂದ್ರದ ಗುರುಗಳಾದ ಸ್ವಾಮಿ ಅಲ್ಫಾನ್ಸೋ ಭಾಸ್ಕರ್, ವಲಯಾಧಿಕಾರಿ ಸ್ವಾಮಿ ಗ್ರೆಗೋರಿ ಮರಿಯಪ್ಪ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT