ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಅಡಿ ಹೆಪ್ಪುಗಟ್ಟಿದ್ದ ರಕ್ತ

Last Updated 20 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಕ್ಯಾಲಿ­ಫೋರ್ನಿ­ಯಾದ ಟಾಡ್‌ ಡನ್‌­ಲ್ಯಾಪ್‌ ಎಂಬ 62 ವರ್ಷದ ವ್ಯಕ್ತಿಯ ರಕ್ತ­ನಾಳಗಳಲ್ಲಿ ಹೆಪ್ಪು­ಗಟ್ಟಿದ್ದ ಸುಮಾರು ಎರಡು ಅಡಿಯಷ್ಟು ರಕ್ತವನ್ನು ತೆಗೆಯುವಲ್ಲಿ ಅಮೆರಿಕದ ವೈದ್ಯರು ಯಶಸ್ವಿಯಾಗಿದ್ದಾರೆ.

ವ್ಯಕ್ತಿಯ ಹೃದಯ, ಶ್ವಾಸಕೋಶ­ದಿಂದ ಕಾಲುಗಳವರೆಗೂ ರಕ್ತ ಹೆಪ್ಪುಗಟ್ಟಿರುವುದು  ಸಿಟಿ ಸ್ಕ್ಯಾನ್‌ನಲ್ಲಿ ಪತ್ತೆಯಾಗಿತ್ತು.

ರೋನಾಲ್ಡ್‌ ರೇಗನ್‌ ವೈದ್ಯಕೀಯ ಕೇಂದ್ರದ ವೈದ್ಯರು ತೆರೆದ ಹೃದಯ ಶಸ್ತ್ರಚಿಕಿತ್ಸೆ ಅಥವಾ ಎಂಜಿಯೋ ವ್ಯಾಕ್‌ ಎಂಬ ಹೊಸ ವಿಧಾನದ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಸಲಹೆ ನೀಡಿದರು.

ಮೊದಲ ಬಾರಿಗೆ ಕಡಿಮೆ ರಕ್ತ­ಸ್ರಾವದ ಮತ್ತು ಕಡಿಮೆ ಪ್ರಮಾಣದ ಗಾಯದ ಎಂಜಿಯೋ ವ್ಯಾಕ್‌ ಯಂತ್ರ ಬಳಸಿ ಹೆಪ್ಪುಗಟ್ಟಿದ ರಕ್ತವನ್ನು ಯಶಸ್ವಿಯಾಗಿ ಹೊರ ತೆಗೆಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT