ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ದಶಕಗಳ ನಾದಸೇವೆ

Last Updated 26 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಆರ್.ಟಿ.ನಗರ ಕಲ್ಚರಲ್ ಅಸೋಸಿಯೇಶನ್   ಶುಕ್ರವಾರದಿಂದ ಭಾನುವಾರದವರೆಗೆ (ಸೆ.27ರಿಂದ ಸೆ.29ವರೆಗೆ) ಆರ್.ಟಿ.ನಗರದ ವಿನಾಯಕ ಗುಡಿಯಲ್ಲಿ ಸಂಗೀತೋತ್ಸವ ಏರ್ಪಡಿಸಿದೆ. ಈಚೆಗೆ ನಿಧನರಾದ ಲಾಲ್‌ಗುಡಿ ಜಯರಾಮನ್, ಭೀಮಸೇನ ಜೋಶಿ ಮತ್ತು ಎಂ.ಎಸ್. ಗೋಪಾಲಕೃಷ್ಣನ್ ಅವರಿಗೆ ಈ ವರ್ಷದ ಸಂಗೀತೋತ್ಸವ ಸಮರ್ಪಣೆ ಮಾಡಲಾಗಿದೆ. ಜೊತೆಗೆ ಉದಯೋನ್ಮುಖ ಕಲಾವಿದರಿಗೂ ವೇದಿಕೆ ನೀಡಲಾಗಿದೆ. ಎಲ್ಲ ಕಾರ್ಯಕ್ರಮಗಳೂ ವಿನಾಯಕ ಗುಡಿಯ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದ್ದು ಪ್ರವೇಶ ಉಚಿತ.

ಈ ವರ್ಷದ ಸಂಗೀತೋತ್ಸವ
ಶುಕ್ರವಾರ (ಸೆ. 27) ಸಂಜೆ 5: ಪುದುಕೋಟೆಯ ವಿದ್ವಾಂಸ ಪಂಡಿತ್ ಮಲೈಯಪ್ಪನ್‌ರಿಂದ ಸಂಗೀತೋತ್ಸವದ ಉದ್ಘಾಟನೆ. ಶ್ರೀರಾಮ್‌ ಪ್ರಾಪರ್ಟೀಸ್‌ನ ಎಂ. ಮುರಳಿ ಅವರ ಅಧ್ಯಕ್ಷತೆ. 5-30 ಮನೋಹರ ಪಟವರ್ಧನ್‌ರಿಂದ ಹಿಂದೂಸ್ತಾನಿ ಗಾಯನ ಹಾಗೂ ಡಾ. ಪಂಚಾಕ್ಷರಿ ಹಿರೇಮಠ ಅವರ ಹಾರ್ಮೊನಿಯಂ ಮತ್ತು ಗುರು ಸಂಗಪ್ಪ ಹೂಗಾರ್‌ ಅವರ ತಬಲಾ ಸಾಥಿ. 6.30ಕ್ಕೆ ಗಾಯತ್ರಿ ವೆಂಕಟರಾಘವನ್‌ ಅವರಿಂದ ಗಾಯನ, ಚಾರುಮತಿ ರಾಮಾನುಜನ್‌ (ಪಿಟೀಲು), ಎನ್. ಮನೋಜ್ ಶಿವ (ಮೃದಂಗ), ಎ.ವಿ. ಕಾಶೀನಾಥರಿಂದ ಖಂಜರಿ.

ಸೆ. 28 ಶನಿವಾರ ಸಂಜೆ 5: ಮೀನಾ ಮೂರ್ತಿ ಅವರ ವೀಣೆಗೆ ಎಸ್.ವಿ. ಗಿರಿಧರ್ ಮತ್ತು ಲಕ್ಷ್ಮೀನಾರಾಯಣ್ ಅವರ ಲಯ ವಾದ್ಯಗಳ ಪಕ್ಕವಾದ್ಯ. ಸಂಜೆ 6.30 ಮೈಸೂರು ನಾಗರಾಜ್ ಮತ್ತು ಮೈಸೂರು ಮಂಜುನಾಥ್ ಅವರ ಯುಗಳ ಪಿಟೀಲಿಗೆ ಮುಷ್ಣಂ ರಾಜಾರಾಯರ ಮೃದಂಗ ಹಾಗೂ ಗುರುಪ್ರಸನ್ನ ಅವರ ಖಂಜರಿ.

ಭಾನುವಾರ (ಸೆ. 29) ಬೆ. 10: ಸಚಿವ ಆರ್.ವಿ. ದೇಶಪಾಂಡೆ ಅವರು ವಿದುಷಿ ಲಾಲ್‌ಗುಡಿ ರಾಜಲಕ್ಷ್ಮಿ ಅವರನ್ನು ಸನ್ಮಾನಿಸುವರು. ಉತ್ಸವ ಸಮಿತಿಯ ಸಿ.ಎಂ. ರಾಜು ಅಧ್ಯಕ್ಷತೆ ವಹಿಸುವರು. ಡಾ. ವಿದ್ಯಾಭೂಷಣ ಅವರಿಂದ ಸಂಗೀತೋಪನ್ಯಾಸ. ಸಂಜೆ 5ಕ್ಕೆ ವಂಶೀಧರ್ ಅವರ ಕೊಳಲಿಗೆ ವಿಠಲರಂಗನ್ ಪಿಟೀಲು ಹಾಗೂ ಬಿ.ಎಸ್. ಪ್ರಶಾಂತ್‌ರ ಮೃದಂಗ ಪಕ್ಕವಾದ್ಯ. ಸಂಜೆ 6.30ಕ್ಕೆ ಶ್ರೀಕೃಷ್ಣ ಮತ್ತು ರಾಂಕುಮಾರ್ ಮೋಹನ್‌ರ ದ್ವಂದ್ವ ಗಾಯನ. ಎಂ.ಎ. ಸುಂದರೇಶ್ವರನ್‌ರ ಪಿಟೀಲು, ತ್ರಿಚೂರು ಮೋಹನ್‌ ಅವರ ಮೃದಂಗ ಹಾಗೂ ವೆಂಕಟಸುಬ್ರಹ್ಮಣ್ಯ ಅವರ ಘಟದ ಸಹಕಾರವಿದೆ.
-ಮೈವಿಸು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT