ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಹೊಸ ರೈಲು ಸಂಚಾರ ಆರಂಭ

Last Updated 10 ಅಕ್ಟೋಬರ್ 2012, 5:05 IST
ಅಕ್ಷರ ಗಾತ್ರ

ದಾವಣಗೆರೆ: ರೈಲ್ವೆ ಇಲಾಖೆಯು ದಾವಣಗೆರೆ ಮಾರ್ಗವಾಗಿ ಎರಡು ಹೊಸ ರೈಲು ಸಂಚಾರ ಆರಂಭಿಸಿದೆ.
ಚಳಿಗಾಲದ ವಿಶೇಷ ರೈಲು ಹುಬ್ಬಳ್ಳಿ - ಚೆನ್ನೈ ಎಕ್ಸ್‌ಪ್ರೆಸ್ ಹಾಗೂ ಮೀರಜ್-ಯಶವಂತಪುರ ರೈಲು ಈ ಮಾರ್ಗದಲ್ಲಿ ಓಡಾಟ ಆರಂಭಿಸಿವೆ.

ಗಾಡಿ ಸಂಖ್ಯೆ-07314 (ಹುಬ್ಬಳ್ಳಿ - ಚೆನ್ನೈ ಎಕ್ಸ್‌ಪ್ರೆಸ್ ) ಭಾನುವಾರ, ಬುಧವಾರ ಮತ್ತು ಶುಕ್ರವಾರ ಸಂಚರಿಸುತ್ತಿದೆ. ಈ ಗಾಡಿ ರಾತ್ರಿ 10.45ಕ್ಕೆ ನಗರದಿಂದ ನಿರ್ಗಮಿಸಲಿದೆ. ಮುಂಜಾನೆ 5.30ಕ್ಕೆ ಯಶವಂತಪುರ ತಲುಪಲಿದೆ. ಬೆಳಿಗ್ಗೆ 11.55ಕ್ಕೆ ಚೆನ್ನೈ ತಲುಪಲಿದೆ.

ಗಾಡಿ ಸಂಖ್ಯೆ- 07313 ಚೆನ್ನೈ-ಹುಬ್ಬಳ್ಳಿ ಎಕ್ಸ್‌ಪ್ರೆಸ್ ಚೆನ್ನೈನಲ್ಲಿ ಮಧ್ಯಾಹ್ನ 2.10ಕ್ಕೆ ಹೊರಡಲಿದೆ. ರಾತ್ರಿ 8.10ಕ್ಕೆ ಯಶವಂತಪುರದಿಂದ ಹೊರಡಲಿದೆ. ಬೆಳಗಿನ ಜಾವ 3.25ಕ್ಕೆ ನಗರದಿಂದ ನಿರ್ಗಮಿಸಿ ಬೆಳಿಗ್ಗೆ 6.30ಕ್ಕೆ ಹುಬ್ಬಳ್ಳಿ ತಲುಪುತ್ತಿದೆ. ಚಳಿಗಾಲದ ಈ ವಿಶೇಷ ರೈಲು ಡಿ. 1ರವರೆಗೆ ಕಾರ್ಯಾಚರಿಸಲಿದೆ.

ಗಾಡಿ ಸಂಖ್ಯೆ -16517 ಯಶವಂತಪುರ - ಮೀರಜ್ ನಡುವೆ ಸಂಚರಿಸಲಿದೆ. ಭಾನುವಾರ, ಮಂಗಳವಾರ ಮತ್ತು ಗುರುವಾರ ಈ ರೈಲು ಸಂಚರಿಸುತ್ತಿದೆ. ಯಶವಂತಪುರದಿಂದ ರಾತ್ರಿ 8.40ಕ್ಕೆ ಹೊರಟು ದಾವಣಗೆರೆಗೆ ಮಧ್ಯರಾತ್ರಿ 12.12ಕ್ಕೆ ಆಗಮಿಸಲಿದೆ. 12.15ಕ್ಕೆ ನಿರ್ಗಮಿಸಿ ಬೆಳಿಗ್ಗೆ 10.15ಕ್ಕೆ ಮೀರಜ್ ತಲುಪುತ್ತದೆ.

ಗಾಡಿ ಸಂಖ್ಯೆ-16518 ಮೀರಜ್ -ಯಶವಂತಪುರ ರೈಲು ಸಂಜೆ 4.45ಕ್ಕೆ ಮೀರಜ್‌ನಿಂದ ಹೊರಡುತ್ತದೆ. ಮಧ್ಯರಾತ್ರಿ 12.12ಕ್ಕೆ ನಗರಕ್ಕಾಗಮಿಸುತ್ತಿದೆ. 12.15ಕ್ಕೆ ಇಲ್ಲಿಂದ ನಿರ್ಗಮಿಸಿ ಬೆಳಿಗ್ಗೆ 6.10ಕ್ಕೆ ಯಶವಂತಪುರ ತಲುಪುತ್ತದೆ. ಈ ರೈಲು ಮುಂದಿನ ವರ್ಷ ಜೂನ್ 30ರವರೆಗೆ ಸಂಚರಿಸಲಿದೆ. (ಮಧ್ಯರಾತ್ರಿ ವೇಳೆ ಬದಲಾವಣೆಗೆ ಅನುಗುಣವಾಗಿ ರೈಲುಗಳು ದಾವಣಗೆರೆಗೆ ಆಗಮಿಸುವ ಸಮಯವು ಒಂದು ದಿನದ ವ್ಯತ್ಯಾಸ ಕಾಣಬಹುದು. ಉದಾ: ಚೆನ್ನೈ-ಹುಬ್ಬಳ್ಳಿ ಎಕ್ಸ್‌ಪ್ರೆಸ್ 8.10ಕ್ಕೆ ಯಶವಂತಪುರದಿಂದ ಹೊರಟು ಬೆಳಗಿನ ಜಾವ 3.25ಕ್ಕೆ ನಗರ ತಲುಪುವುದು)

ಗರೀಬ್ ರಥ್: ಯಶವಂತಪುರ - ಜೈಪುರ ನಡುವೆ ಗರೀಬ್‌ರಥ್ ಹವಾನಿಯಂತ್ರಿತ ರೈಲು ಸೆ. 30ರಿಂದ ಆರಂಭವಾಗಿದ್ದು, 06511 ಸಂಖ್ಯೆಯ ರೈಲು ಬೆಳಿಗ್ಗೆ 5.20ಕ್ಕೆ ಯಶವಂತಪುರದಿಂದ ಹೊರಟು ಬೆಳಿಗ್ಗೆ 11.40ರ ವೇಳೆಗೆ ನಗರಕ್ಕಾಗಮಿಸುತ್ತಿದೆ. ಭಾನುವಾರ ಮತ್ತು ಶುಕ್ರವಾರ ಈ ರೈಲು ಸಂಚರಿಸುತ್ತಿದೆ.
06512 ಸಂಖ್ಯೆಯ ರೈಲು ಗುರುವಾರ ಮಧ್ಯಾಹ್ನ 3.30ಕ್ಕೆ ಜೈಪುರದಿಂದ ಹೊರಟು ಮರುದಿನ ಬೆಳಿಗ್ಗೆ 9.05ಕ್ಕೆ ನಗರಕ್ಕಾಗಮಿಸಲಿದೆ. ಮಧ್ಯಾಹ್ನ 3.10ಕ್ಕೆ  ಯಶವಂತಪುರ ತಲುಪಲಿದೆ. ನ. 25ರವರೆಗೆ ಈ ರೈಲು ಓಡಾಡಲಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT