ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲಿಫೆಂಟ್ ಹಕ್ಕಿ ಮತ್ತು ಡೊಡೊ

Last Updated 2 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಆಫ್ರಿಕಾ ಬಳಿ ಇರುವ ಮಡಗಾಸ್ಕರ್ ದ್ವೀಪದಲ್ಲಿ ನೆಲೆಸಿದ್ದ ಮೂರು ಮೀಟರ್ ಉದ್ದದ ಹಕ್ಕಿಯ ಹೆಸರು ಎಲಿಫೆಂಟ್ ಬರ್ಡ್. ಇದು ಫುಟ್‌ಬಾಲ್ ಗಾತ್ರದ ಮೊಟ್ಟೆ ಇಡುತ್ತಿತ್ತು. ನಿಧಾನವಾಗಿ ನಡೆಯುತ್ತಿದ್ದ ಹಾರಲಾಗದ ದೊಡ್ಡ ಗಾತ್ರದ ಈ ಹಕ್ಕಿಯು ದ್ವೀಪದಲ್ಲಿ ಜನ ಬಂದು ನೆಲೆಸಿದ ನಂತರ ಅವನತಿ ಹೊಂದಿತು. ಜನ ಅದರ ಮಾಂಸದ ರುಚಿಗೆ ಮನಸೋತು ಅವುಗಳನ್ನು ಅವ್ಯಾಹತವಾಗಿ ಬೇಟೆಯಾಡತೊಡಗಿದರು.

300 ವರ್ಷಗಳ ಹಿಂದೆ ಎಲಿಫೆಂಟ್ ಹಕ್ಕಿಯ ಕೊನೆಯ ಸಂತತಿ ಕಣ್ಮರೆಯಾಯಿತು ಎನ್ನಲಾಗಿದೆ. ಇದನ್ನೇ ಹೋಲುವ ಮತ್ತೊಂದು ಹಕ್ಕಿ ಮೊವಾ. ಇದು ಕೊಂಚ ಆಸ್ಟ್ರಿಚ್ ಪಕ್ಷಿಯನ್ನೂ ಹೋಲುತ್ತಿತ್ತು. ನ್ಯೂಜಿಲೆಂಡ್‌ನಲ್ಲಿ ನೆಲೆಸಿದ್ದ ಇದನ್ನು ಕೂಡ ಅಲ್ಲಿನ ಜನ ಆಹಾರಕ್ಕಾಗಿ ಕೊಂದರು. ಹಾರಲಾಗದ ಪಕ್ಷಿಯಾಗಿದ್ದ ಇದಕ್ಕೆ ರೆಕ್ಕೆಗಳನ್ನೂ ಬಡಿಯಲು ಆಗುತ್ತಿರಲಿಲ್ಲ. ಆದರೆ ಬಲಿಷ್ಠ ಕಾಲುಗಳಿದ್ದವು.

ಡೊಡೊ

ಈ ಡುಮ್ಮ ಪಕ್ಷಿಗಳು ಮರೆಯಾಗಿ ಶತಮಾನಗಳೇ ಕಳೆದುಹೋಗಿವೆ. ಮಾರಿಷನ್ ದ್ವೀಪದಲ್ಲಿ ನೆಲೆಸಿದ್ದವು ಎನ್ನಲಾಗುವ ಇವು ದುಂಡ ದುಂಡಗಿದ್ದವು. ಅವುಗಳಿಗಿದ್ದ ಮಂದವಾದ ತುಂಡು ರೆಕ್ಕೆಗಳಿಂದ ಅವುಗಳಿಗೆ ಹಾರಲು ಸಾಧ್ಯವಾಗುತ್ತಿರಲಿಲ್ಲ. ಕಾಲುಗಳು ಗಿಡ್ಡಗಿದ್ದ ಕಾರಣ ಡೊಡೊಗಳಿಗೆ ಓಡಲೂ ಆಗುತ್ತಿರಲಿಲ್ಲ. ತೂಗಾಡುತ್ತಾ ನಡೆಯುತ್ತಿದ್ದ ಅವು 1507ಕ್ಕಿಂತ ಮುಂಚೆ ಹಿಂದುಮಹಾಸಾಗರದ ಬಳಿ ಇರುವ ಮಾರಿಷಸ್ ದ್ವೀಪದಲ್ಲಿ ಬಹುಸಂಖ್ಯೆಯಲ್ಲಿ ಬದುಕಿದ್ದವು.

ಮಾರಿಷಸ್ ದ್ವೀಪಕ್ಕೆ ಜನರು ಬರತೊಡಗಿದರು ಅವರು ಆಹಾರಕ್ಕಾಗಿ ಡೊಡೊಗಳನ್ನು ತಿನ್ನ ತೊಡಗಿದರು. ಹಾಗೆಯೇ ಬೇರೆ ದೇಶಗಳಿಗೂ ಅವುಗಳನ್ನು ಸಾಗಿಸಲಾಯಿತು. 1600ರಲ್ಲಿ ದ್ವೀಪದಲ್ಲಿಯೇ ಬಂದು ಜನ ವಾಸಿಸಲು ಆರಂಭಿಸಿದರು. ಅವರು ಕೂಡ ಈ ಡೊಡೊಗಳನ್ನು ತಿಂದು ಮುಗಿಸಿದರು. 1681ರ ವೇಳೆಗೆ ಇಡೀ ದ್ವೀಪದಲ್ಲಿ ಒಂದೇ ಒಂದು ಡೊಡೊ ಕೂಡ ಬದುಕುಳಿಯಲಿಲ್ಲ. ಹಾಗೆ ಅವುಗಳ ಸಂತತಿ ಸಂಪೂರ್ಣವಾಗಿ ಅವನತಿ ಹೊಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT