ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಸಾಹಿತ್ಯ ತರಂಗ

ಮೂರು ದಿನಗಳ ಬೆಂಗಳೂರು ಸಾಹಿತ್ಯೋತ್ಸವಕ್ಕೆ ನಾಳೆ ಚಾಲನೆ
Last Updated 25 ಸೆಪ್ಟೆಂಬರ್ 2013, 20:09 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರು ಲಿಟರೇಚರ್‌ ಫೆಸ್ಟ್’ (ಬಿಎಲ್‌ಎಫ್‌) ವತಿಯಿಂದ ‘ಬೆಂಗಳೂರು ಸಾಹಿತ್ಯೋತ್ಸವ–2013ಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಾಹಿತಿ ತಂತ್ರಜ್ಞಾನ ಸಂಬಂಧಿ ವಿಷಯಗಳಲ್ಲಿ ಸದಾ ಸುದ್ದಿ ಮಾಡುವ ಎಲೆಕ್ಟ್ರಾನಿಕ್‌ ಸಿಟಿ ಈಗ ಸಾಹಿತ್ಯ ಸಂಭ್ರಮಕ್ಕೆ ವೇದಿಕೆ ಒದಗಿಸಲಿದೆ.

ನಗರದ ಪ್ರಮುಖ ಸಾಹಿತ್ಯ ಕಾರ್ಯಕ್ರಮವಾದ ಸಾಹಿತ್ಯೋತ್ಸವದ ಎರಡನೇ ಆವೃತ್ತಿ ಇದೇ 27ರಿಂದ 29ರ ವರೆಗೆ ಎಲೆಕ್ಟ್ರಾನಿಕ್‌ ಸಿಟಿಯ ವೇಲಂಗಣಿ ಪಾರ್ಕ್‌ನ ಕ್ರೌನ್‌್ ಪ್ಲಾಜಾದಲ್ಲಿ ನಡೆಯಲಿದೆ. ಮೂರು ದಿನಗಳಲ್ಲಿ ಸಾಹಿತ್ಯ ವಿಷಯಗಳಲ್ಲದೆ ಈಗಿನ ಸಮಕಾಲಿನ ವಿಷಯಗಳ ಬಗ್ಗೆಯೂ ಚರ್ಚೆಗಳು ನಡೆಯಲಿವೆ.

ಶುಕ್ರವಾರ ಬೆಳಿಗ್ಗೆ 10ರಿಂದ 11 ಗಂಟೆ ವರೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಉದ್ಘಾಟನೆಗೆ ಮುನ್ನ ರಾಜ್ಯದ ಕಲಾ ತಂಡದ ಸದಸ್ಯರಿಂದ ಡೊಳ್ಳು ಕುಣಿತ ಉತ್ಸವಕ್ಕೆ ಮೆರುಗು ನೀಡಲಿದೆ. ಉತ್ಸವವನ್ನು ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಉದ್ಘಾಟಿಸುವರು.

120 ಲೇಖಕರು: ಈ ಸಲ 120 ಲೇಖಕರು ಗೋಷ್ಠಿಗಳಲ್ಲಿ ವಿಷಯ ಮಂಡಿಸಲಿದ್ದಾರೆ. ಇವರಲ್ಲಿ ರಾಜ್ಯದ 20ಕ್ಕೂ ಅಧಿಕ ಲೇಖಕರು, ವಿದ್ವಾಂಸರು ಸೇರಿದ್ದಾರೆ. ಕರ್ನಾಟಕದ ಉಪಭಾಷೆಗಳಾದ ಬ್ಯಾರಿ, ತುಳು, ಕೊಡವ ಹಾಗೂ ಕೊಂಕಣಿ ಭಾಷೆಗಳ ಕುರಿತ ಗೋಷ್ಠಿಗಳನ್ನು ಸಂಘಟಿಸಲಾಗಿದೆ.  ಸಂಸ್ಕೃತ ಭಾಷೆ ಕುರಿತ ‘ದೇವಭಾಷೆಯಿಂದ ಲೋಕಭಾಷೆ’  ಕುರಿತೂ ಗೋಷಿ್ಠ ನಡೆಯಲಿದೆ.

ಬಿಎಲ್‍ಎಫ್ ಕುರಿತು:
ನಗರದ ಸೃಜನಶೀಲ ಉತ್ಸಾಹಕ್ಕೆ ವೇದಿಕೆಯಾಗುವ ಉದ್ದೇಶದಿಂದ ಬಿಎಲ್‌ಎಫ್‌ ಚಾಲನೆ ನೀಡಲಾಗಿತ್ತು. ಬೆಂಗಳೂರಿನ ಕಂಪನ್ನು ಇನ್ನಷ್ಟು ಪಸರಿಸಿ ದೇಶದ ಸಾಹಿತ್ಯ ಕ್ಷೇತ್ರದಲ್ಲಿ ನಗರಕ್ಕೆ ಹೊಸ ಸ್ಥಾನ ಕಲ್ಪಿಸಬೇಕು ಎಂಬ ಉದ್ದೇಶದಿಂದ ನಗರದ ಉದಯೋನ್ಮುಖ ಲೇಖಕರು ಹಾಗೂ ವೃತ್ತಿಪರರು ಪ್ರತಿವರ್ಷ ಬೆಂಗಳೂರು ಸಾಹಿತ್ಯೋತ್ಸವ ಆರಂಭಿಸುವ ತೀರ್ಮಾನಕ್ಕೆ ಬಂದರು. ಇದಕ್ಕಾಗಿ ಒಂದು ಸಂಘಟನೆಯನ್ನೂ ಆರಂಭಿಸಿದರು.

ಹಿರಿಯ ಮತ್ತು ಆಸಕ್ತ ಲೇಖಕರು, ಓದುಗರು ಮತ್ತು ಪ್ರಕಾಶಕರು, ವಿದ್ಯಾರ್ಥಿಗಳು ಮತ್ತು ಯುವ ವೃತ್ತಿಪರರನ್ನು ಒಂದುಗೂಡಿಸುವ ಸಾಹಿತ್ಯಿಕ ಅನುಭವವನ್ನು ನೀಡುವುದು ಬಿಎಲ್‍ಎಫ್‌ನ ಉದ್ದೇಶವಾಗಿದೆ. ಎಲ್ಲರನ್ನೂ ಒಂದೇ ವೇದಿಕೆಯಡಿ ಸೇರಿಸಿ ಚಿಂತನಾಶೀಲ ಚರ್ಚೆಯನ್ನು ಸಾಹಿತ್ಯ ಮತ್ತು ಜೀವನ ಕುರಿತಂತೆ ನಡೆಸುವುದು ಇದರ ಉದ್ದೇಶ. ಇಂಗ್ಲಿಷ್‌ ಹಾಗೂ ಪ್ರಾದೇಶಿಕ ಭಾಷೆಗಳ ನಡುವಿನ ಅಂತರವನ್ನು ತಗ್ಗಿಸಿ ‘ಸಾಹಿತ್ಯ ಸೇತುವೆ’ ನಿರ್ಮಾಣ ಮಾಡಬೇಕು ಎಂಬುದು ಬಿಎಲ್‌ಎಫ್‌ ಉದ್ದೇಶ.

ಈ ವರ್ಷ ಗೋತೆ ಇನ್‌ಸ್ಟಿಟ್ಯೂಟ್‌ ಸಹಭಾಗಿತ್ವದಲ್ಲಿ ಉತ್ಸವ ಆಯೋಜಿಸ­ಲಾಗುತ್ತಿದೆ. ಜರ್ಮನಿಯನ್ನು ಗಮನ ಕೇಂದ್ರೀಕರಿಸಿದ ದೇಶವನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಜರ್ಮನಿಯ ಲೇಖಕರಾದ ಸ್ಲ್ಯಾಮ್ ಪೊಯೆಟ್ ಬಾಸ್ ಬೋಚರ್, ಕ್ರಿಸ್ಟೋಪರ್ ಕ್ಲೋಬೆಲ್, ಸಾಸ್ಕಿಯಾ ಜೈನ್ ಮತ್ತು ಅಬ್ಬಾಸ್ ಕೈದರ್  ಅವರು ಭಾಗವಹಿಸಲಿದ್ದಾರೆ.

ಸಾಹಿತ್ಯ ಪ್ರೇಮಿಗಳಿಗಾಗಿ ಕನ್ನಡ ಮತ್ತು ಭಾರತೀಯ ಭಾಷೆಗಳ ಪುಸ್ತಕಗಳ ಅಂಗಡಿಗಳು ಇಲ್ಲಿ ಲಭ್ಯವಿದ್ದು ಪುಸ್ತಕಗಳ ಬಿಡುಗಡೆ, ಲೇಖಕರ ಸಹಿ ಕಾರ್ಯಕ್ರಮಗಳು, ಸಂವಾದದಿಂದ ಕೂಡಿರುವ ಸಾಹಿತ್ಯಿಕ ಕಾರ್ಯಕ್ರಮ­ಗಳು, ಫಿಲಂ ಪೋಸ್ಟರ್ ಮತ್ತು ನೆನಪಿನ ವಸ್ತುಗಳ ಪ್ರದರ್ಶನಗಳು ಇವುಗಳಲ್ಲಿ ಸೇರಿವೆ. ಜೊತೆಗೆ ಆಹಾರ ಮತ್ತು ಪೇಯದ ಮಳಿಗೆಗಳು, ಸ್ಥಳೀಯ ಮತ್ತು ರಾಷ್ಟ್ರೀಯ–ಅಂತರರಾಷ್ಟ್ರೀಯ ಪಾಕ ಪದಾರ್ಥಗಳು ಎಲ್ಲವೂ ಸೇರಿ ಉದ್ಯಾನದಲ್ಲಿ ಸಾಹಿತ್ಯೋತ್ಸವದ ನಿಜವಾದ ಆಚರಣೆಯಾಗಲಿದೆ ಎಂದು ಸಂಘಟಕರು ಹೇಳುತ್ತಾರೆ.

ಉತ್ಸವದ ಬಗ್ಗೆ ಹೆಚ್ಚಿನ ಮಾಹಿತಿಯನ್ನು www. bangalore literaturefestival.org ನಲ್ಲಿ ಪಡೆಯಬಹುದು.

ಮೂರು ವೇದಿಕೆ
ಮೂರು ದಿನಗಳ ಕಾಲ ಮೂರು ಸಮಾನಾಂತರ ವೇದಿಕೆಗಳಲ್ಲಿ ಗೋಷ್ಠಿ ಆಯೋಜಿಸಲಾಗಿದೆ. ಮೂರು ವೇದಿಕೆಗಳಿಗೆ ಮೂರು ವಿಶಿಷ್ಟ ಹೆಸರು ಇಡಲಾಗಿದೆ.

ಕನ್ನಡದ ಲೇಖಕರು
ಸಾಹಿತ್ಯೋತ್ಸವದಲ್ಲಿ ಇಂಗಿ್ಲಷ್‌ ಲೇಖಕರು ಮತ್ರವಲ್ಲದೆ ಕನ್ನಡದ  ಲೇಖಕರಾದ ಡಾ.ಯು.ಆರ್‌.ಅನಂತಮೂರ್ತಿ, ಡಾ.ಚಂದ್ರಶೇಖರ ಕಂಬಾರ, ಎಂ.ಎಂ. ಕಲಬುರ್ಗಿ, ಕೆ.ಎಸ್‌. ನಿಸಾರ್‌ ಅಹ್ಮದ್‌, ಎಚ್‍.ಎಸ್. ವೆಂಕಟೇಶ್ ಮೂರ್ತಿ, ವೆಂಕಟಾಚಲ ಶಾಸ್ತ್ರಿ, ನರಹಳ್ಳಿ ಬಾಲಸುಬ್ರಹ್ಮಣ್ಯ, ಬಿ.ಎ.ವಿವೇಕ ರೈ, ಸಿ.ಎನ್.ರಾಮಚಂದ್ರನ್, ಗಿರಡ್ಡಿ ಗೋವಿಂದರಾಜು, ಕೆ.ಎಸ್ ಭಗವಾನ್, ಜಯಂತ್ ಕಾಯ್ಕಿಣಿ, ಮಮತಾ ಸಾಗರ್, ಪಾದೇಕಲ್ಲು ವಿಷ್ಣು ಭಟ್ ಮತ್ತಿತರರು ಭಾಗವಹಿಸುವರು.

ಸಾಂಸ್ಕೃತಿಕ ವೈವಿಧ್ಯ
ವಿಚಾರಗೋಷ್ಠಿ, ಸಂವಾದ ಮತ್ತಿತರ ಕಾರ್ಯಕ್ರಮಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಭರಪೂರ ರಂಜನೆ ಇದೆ. ಶುಕ್ರವಾರ ಸಂಜೆ 7ರಿಂದ 9 ರ ವರೆಗೆ ಪ್ರಸಿದ್ಧ ಕಲಾವಿದರಾದ ಮೈಸೂರು ಮಂಜುನಾಥ್‌ ಹಾಗೂ ಮೈಸೂರು ನಾಗರಾಜ್‌ ತಂಡದವರಿಂದ ವಯೊಲಿನ್‌ ವಾದನ, ಶನಿವಾರ ಸಂಜೆ 7.30ರಿಂದ 8.45ರ ವರೆಗೆ ಹರಿಪ್ರಸಾದ್‌ ಚೌರಾಸಿಯಾ ಅವರಿಂದ ಕೊಳಲು ವಾದನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT