ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಅಧ್ಯಯನಗಳೂ ಮಾನವ ಸಂಬಂಧಿ

Last Updated 22 ಸೆಪ್ಟೆಂಬರ್ 2011, 6:20 IST
ಅಕ್ಷರ ಗಾತ್ರ

ವೆುಸೂರು: ಜಗತ್ತಿನ ಎಲ್ಲ ಕ್ಷೇತ್ರಗಳ ಅಧ್ಯಯನಗಳೂ ಮಾನವನ ಜೀವನ ದೊಂದಿಗೆ ಬೆಸೆದುಕೊಂಡಿವೆ. ಪ್ರತಿಯೊಂದು ಜನಾಂಗದ ಕುರಿತು ಅಧ್ಯಯನ ಮಾಡುವಾಗ ಅಧ್ಯಯನ ಪದ್ಧತಿಗಳು ಭಿನ್ನವಾಗುತ್ತವೆ ಎಂದು ಬೆಂಗಳೂರಿನ ದಕ್ಷಿಣ ಪ್ರಾದೇಶಿಕ ಕೇಂದ್ರ, ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ನಿರ್ದೇಶಕ ಪ್ರೊ. ಎಸ್. ಶೆಟ್ಟರ ಹೇಳಿದರು.

ಕೋಲ್ಕತ್ತದ ಭಾರತೀಯ ಮಾನವ ಸರ್ವೇಕ್ಷಣಾಲಯ, ಮೈಸೂರಿನ ದಕ್ಷಿಣ ಪ್ರಾದೇಶಿಕ ಕೇಂದ್ರದ ಆಶ್ರಯದಲ್ಲಿ ಬುಧವಾರ ಆಯೋಜಿಸಲಾಗಿದ್ದ `ಆಹಾರ ಸಂಗ್ರಹಣೆ ಯಿಂದ ಸೈಬರ್ ಸಂಸ್ಕೃತಿಯವರೆಗೆ ಮಾನವ ವಿಕಾಸ~ ಕುರಿತ ರಾಷ್ಟ್ರಮಟ್ಟ ವಿಚಾರ ಸಂಕಿರಣ ಉದ್ಘಾಟಿಸಿದ ಅವರು ಮಾತನಾಡಿದರು.

`ಇತಿಹಾಸ, ಸಮಾಜಶಾಸ್ತ್ರ, ಮಾನವ ಶಾಸ್ತ್ರ ಯಾವುದನ್ನೇ ತೆಗೆದುಕೊಂಡರೂ ಅದು ಮಾನ
ವ ಜೀವನ ಸಂಬಂಧಿ ವಿಷಯವಾಗಿರುತ್ತದೆ. ಮಾನವನ ವಿಕಾಸ ರೋಚಕವಾಗಿದೆ. ಪ್ರತಿಯೊಂದು ಬುಡಕಟ್ಟುಗಳಲ್ಲಿಯೂ ವಿಭಿನ್ನ ಪರಿಸರವಿದೆ. ಜೀವನಶೈಲಿ, ಆಚಾರ, ವಿಚಾರಗಳು ಭಿನ್ನವಾಗಿರುತ್ತವೆ~ ಎಂದು ಹೇಳಿದರು.

ದೇವದಾಸಿಯರ ಕುರಿತು ಅಧ್ಯಯನ ನಡೆಸಿದ ಅನುಭವ ಹೇಳಿದ ಅವರು, `ಅವರು ದೇವರಿಗೆ ಸಮರ್ಪಣೆ ಯಾಗಿರುತ್ತಾರೆ. ಆದರೆ ಅವರು ಆ ಗುಡಿಯ ಭಕ್ತವೃಂದವಾಗಿರುವುದಿಲ್ಲ. ಅವರ ಹಲವು ಕುಟುಂಬಗಳಲ್ಲಿ ವಿಭಿನ್ನವಾದ ಆಚರಣೆಗಳಿರುತ್ತವೆ. ಅವರು ಪೂಜಿಸುವ ದೇವರುಗಳು ಬೇರೆ ಬೇರೆ ಇದ್ದವು. ಇಲ್ಲಿ ನಮ್ಮ ಸಂಶೋಧನೆಯೂ ವಿಭಿನ್ನ ರೀತಿಯ ಮಾದರಿಯನ್ನು ಅನುಸರಿಸ ಬೇಕಾಗುತ್ತದೆ~ ಎಂದು ಹೇಳಿದರು.

`ಇಂದು ಸಂಶೋಧಕರು ಇತಿಹಾಸ ಅರಿಯಲು ಗೆಸೆಟಿಯರ್‌ಗಳು ಉತ್ತಮ ಮೂಲ. ಆದರೆ ಈಗ ಸರ್ಕಾರಿ ಅಧಿಕಾರಿಗಳು ನೀಡುವ ಅಂಕಿ, ಸಂಖ್ಯೆಗಳನ್ನು ಆಧರಿಸಿ ಸಂಶೋಧನೆ ನಡೆಸಲಾಗುತ್ತಿದೆ. ಇದರಿಂದ ಗಟ್ಟಿಯಾದ ಸಂಶೋಧನೆ ಸಿಗುವುದು ಕಷ್ಟ~ ಎಂದು ಹೇಳಿದರು.

ಕಾರ್ಯಕ್ರಮ ಮುಖ್ಯ ಅತಿಥಿ, ಭುವನೇಶ್ವರದ ಉತ್ಕಲ್ ವಿವಿಯ ಮಾನವಶಾಸ್ತ್ರದ ಪ್ರೊ. ಪಿ.ಕೆ. ದಾಸ್, `ಮಾನವನು ಎಲ್ಲ ಪ್ರಾಣಿಗಳಿಗಿಂತಲೂ ಭಿನ್ನ. ಆದ್ದರಿಂದ ಆಹಾರ ಸಂಗ್ರಹ ಕಾಲದಿಂದ ಸೈಬರ್ ವಿಜ್ಞಾನದವರೆಗೆ ಬೆಳೆದಿದ್ದಾನೆ. ಮಾನವ ಧ್ಯಾನಸ್ಥ ಪ್ರಾಣಿ. ಆದ್ದರಿಂದಲೇ ದಿಗಂತವನ್ನೂ ಮೀರಿ ಬೆಳೆಯಬಲ್ಲ. ಚಿಂತಿಸಬಲ್ಲ~ ಎಂದು ಹೇಳಿದರು.

ಕಾರ್ಯಕರಮದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪ್ರೊ. ಸಿ.ಜಿ. ಹುಸೇನಖಾನ್, ಮೈಸೂರು ಮಾನವ ಸರ್ವೇಕ್ಷಣಾಲಯದ ಮುಖ್ಯಸ್ಥ ಡಾ. ಬಿ. ಫ್ರಾನ್ಸಿಸ್ ಕುಲಿರಾಣಿ, ಕೊಲ್ಕತ್ತದ ಪ್ರೊ. ಕೆ.ಕೆ. ಮಿಶ್ರಾ ಮತ್ತಿತರರು ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT