ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಭಾಷೆಗಳಿಗೂ ಕನ್ನಡ ರಾಣಿ ಇದ್ದಂತೆ

ಭಾಷಾ ತಜ್ಞ ಕೈಪ ಶೇಷಾದ್ರಿ ಅಭಿಮತ
Last Updated 23 ಡಿಸೆಂಬರ್ 2013, 10:19 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಕನ್ನಡ ತನ್ನ ಅಕ್ಷರ ಸೌಂದರ್ಯ ಹಾಗೂ ಶ್ರೀಮಂತವಾದ ಸಾಹಿತ್ಯ ಸಂಪತ್ತಿನಿಂದ ಇತರ ಎಲ್ಲಾ ಭಾಷೆಗಳಿಗೂ ರಾಣಿ ಭಾಷೆಯಾಗಿ ಕಂಗೊಳಿಸುತ್ತದೆ ಎಂದು ಭಾಷಾ ಸಂಶೋಧಕ ಮತ್ತು ಭಾಷಾ ತಜ್ಞ ಕೈಪ ಶೇಷಾದ್ರಿ ಹೇಳಿದರು.

ತಾಲ್ಲೂಕು ವಕೀಲರ ಸಂಘದ ವತಿಯಿಂದ ಇಲ್ಲಿನ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶ್ವದ ಎಲ್ಲಾ ಬಾಷೆಗಳಿಗೆ ಹೋಲಿಸಿದಲ್ಲಿ ಕನ್ನಡವು ಅತ್ಯಂತ ವಿಪುಲವಾದ ಪದ ಸಂಪತ್ತು ಮತ್ತು ಭಾಷಾ ಸೌಂದರ್ಯವನ್ನು ಅಡಗಿಸಿಕೊಂಡಿದೆ. ವೇದಗಳು, ಮಹಾಭಾರತ, ರಾಮಾಯಣ ಕನ್ನಡ ಮತ್ತು ತೆಲುಗು ಭಾಷೆಗಳ ಅಕ್ಷರ ಶಾಸ್ತ್ರಗಳಲ್ಲಿ ರೂಪುಗೊಂಡಿರುವುದು ನಮಗೆ ಕಾಣಸಿಗುತ್ತದೆ. ಹೀಗಾಗಿ ಕನ್ನಡ ಮತ್ತು ತೆಲುಗು ಪರಿಪೂರ್ಣ ಭಾಷೆ ಎನ್ನಬಹುದು ಎಂದರು.

ಕನ್ನಡ ಭಾಷೆಗೆ ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದ್ದರೆ, ತೆಲುಗು ಭಾಷೆಗೆ ಒಂದು ಸಾವಿರ ವರ್ಷ ಇತಿಹಾಸವಷ್ಟೇ ಇದೆ. ಹಿಂದಿ, ಮಲಯಾಳ, ಮರಾಠಿ ಇತರೆ ಭಾಷೆಗಳು ನಂತರದ ದಿನಗಳಲ್ಲಿ ಉದಯಿಸಿವೆ. ಕನ್ನಡವು ಒಂದು ಕಾಲದಲ್ಲಿ ಇಲ್ಲಿಂದ ನೇಪಾಳದವರೆಗೂ ಹರಡಿತ್ತು ಎಂದು ಸ್ಮರಿಸಿದರು.

ಇತಿಹಾಸದ ಉದ್ದಕ್ಕೂ ಕನ್ನಡ ತನ್ನ ಜೀವಂತಿಕೆಯನ್ನು ಉಳಿಸಿಕೊಂಡು ಬಂದಿದೆ. ಸ್ವಾತಂತ್ರ್ಯ ಪೂರ್ವದ   ವರ್ಷ ಗಳಲ್ಲಿ ಮರಾಠಿ ಮತ್ತು ಇತತರೆ ಕೆಲವು ಭಾಷೆಗಳ ಮಿಶ್ರಣ ಕನ್ನಡಕ್ಕೆ ಆಗಿದೆ ಎಂದು ಅವರು ಕನ್ನಡದ ಶ್ರೀಮಂತಿ ಕೆಯ ಕುರಿತು ವಿವಿಧ ಮಜಲುಗಳನ್ನು ಅನಾವರಣ ಗೊಳಿಸಿ ದರು. ಮಹಾಭಾರತದ ಉದಾಹರಣೆ ಯೊಂದಿಗೆ ನಮ್ಮ ದೇಹದ ರಚನೆಯನ್ನು ಹೋಲಿಸಿದ ಅವರು ಮಹಾ ಭಾರತ ವನ್ನು ಎಲ್ಲಾ ವರ್ಗದ ಜನ ಅಧ್ಯಯನ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾ ನ್ಯಾಯಾದೀಶ ಕೆ.ಎನ್‌.ಲಕ್ಷ್ಮಿನಾರಾಯಣ, ಹಿರಿಯ ವಿಭಾಗದ ನ್ಯಾಯಾ ಧೀಶ ಕುಮಾರಸ್ವಾಮಿ, ಪ್ರಥಮ ದರ್ಜೆ ನ್ಯಾಯಾದೀಶ ನಾಗೀರೆಡ್ಡಿ, ಅಪರ ನ್ಯಾಯಾಧೀಶ ಗಣಪತಿ ಪ್ರಶಾಂತ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಬಿ.ಸಿ.ಜನಾರ್ದನ್, ಉಪಾಧ್ಯಕ್ಷ ಎಂ.ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ಎಂ.ಬೈರೇಗೌಡ,ಖಜಾಂಚಿ ರೇಣುಕಾಮೂರ್ತಿ  ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT