ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಕ್ಕೂ ಸಿದ್ಧ- ಇರಾನ್‌ಗೆ ಅಮೆರಿಕ ಎಚ್ಚರಿಕೆ

Last Updated 18 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ):  ಇರಾನ್ ಪರಮಾಣು ಚಟುವಟಿಕೆ ಮುಂದುವರಿಸಿದ್ದೇ ಆದರೆ, ಇಲ್ಲವೇ ಹರ್ಮುಜ್ ಜಲಸಂಧಿ ಮುಚ್ಚುವ ಪ್ರಯತ್ನ ಮಾಡಿದರೆ ತಾನು ಕೂಡ ಎಲ್ಲದಕ್ಕೂ ಸಿದ್ಧ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.
`ಇರಾನ್ ಅಣ್ವಸ್ತ್ರ ಹೊಂದುವುದನ್ನು ತಮ್ಮ ರಾಷ್ಟ್ರ ಸಹಿಸುವುದಿಲ್ಲ~ ಎಂದೂ ರಕ್ಷಣಾ ಇಲಾಖೆ ಕಾರ್ಯದರ್ಶಿ ಲಿಯೊನ್ ಪೆನೆಟ್ಟ ಸ್ಪಷ್ಟಪಡಿಸಿದ್ದಾರೆ.

`ಹರ್ಮುಜ್ ಜಲಸಂಧಿ ಮುಚ್ಚುವುದು ಕೂಡ ಅಸಹನೀಯ. ಒಟ್ಟಾರೆ ಜಾಗತಿಕ ತೈಲ ಸಾಗಣೆಯಲ್ಲಿ ಶೇ 20ರಷ್ಟು ತೈಲ ಸಾಗಣೆ ಈ ಮಾರ್ಗದಲ್ಲಿ ಆಗುತ್ತದೆ. ಇಂತಹ ಪ್ರಮುಖ ಮಾರ್ಗವನ್ನು ಮುಚ್ಚುವುದಕ್ಕೆ ಅವಕಾಶ ಕೊಡುವುದಿಲ್ಲ~ ಎಂದು ಕಟುವಾಗಿ ಹೇಳಿದ್ದಾರೆ.

`ಇರಾನ್ ಏನಾದರೂ ಜಲ ಮಾರ್ಗ ಮುಚ್ಚುವ, ಇಲ್ಲವೇ ಪರಮಾಣು ಕಾರ್ಯಕ್ರಮ ಮುಂದುವರಿಸುವ ಧೈರ್ಯ ತೋರಿದರೆ ನಮಗೂ ಎಲ್ಲಾ ಆಯ್ಕೆಗಳು ಮುಕ್ತವಾಗಿಯೇ ಇವೆ. ಆದರೆ, ಇಸ್ರೇಲ್ ಪ್ರಧಾನಿ ಹೇಳಿಕೆಯಂತೆ ಶಿಕ್ಷಿಸುವುದು ಕಟ್ಟಕಡೆಯ ಆಯ್ಕೆಯಾಗಿರುತ್ತದೆ~ ಎಂದು ಪೆನೆಟ್ಟ ಹೇಳಿದ್ದಾರೆ.

`ಭಯೋತ್ಪಾದಕ ಚಟುವಟಿಕೆಗೆ ಬೆಂಬಲ ನೀಡುವ ಇರಾನ್, ವಿಶ್ವದಾದ್ಯಂತ ಹಿಂಸಾಚಾರ ಹಬ್ಬಲಿ ಎಂದೇ ಆಶಿಸುತ್ತದೆ. ಅಮೆರಿಕದಲ್ಲಿರುವ ಬೇರೆ ಬೇರೆ ದೇಶಗಳ ರಾಯಭಾರಿಗಳ ಮೇಲೂ ದಾಳಿ ನಡೆಸಲು ಆ ರಾಷ್ಟ್ರ ಸಂಚು ಮಾಡಿತ್ತು. ಆದರೆ ನಾವು ಇಂತಹ ಹಿಂಸಾಚಾರಕ್ಕೆ ಅವಕಾಶ ಕೊಡುವುದಿಲ್ಲ~ ಎಂದಿದ್ದಾರೆ.

`ಹಿಂಸಾಚಾರ ತಡೆಯುವ ದೃಷ್ಟಿಯಿಂದಲೇ ಅಂತರರಾಷ್ಟ್ರೀಯ ಸಮುದಾಯ ಒಮ್ಮತದಿಂದ ಇದೆ. ಇರಾನ್ ಮೇಲೆ ರಾಜತಾಂತ್ರಿಕ ನಿರ್ಬಂಧ ಮತ್ತು ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರಲಾಗಿದೆ. ಆ ರಾಷ್ಟ್ರ ತಂಟೆ- ತಕರಾರು ನಿಲ್ಲಿಸಿದ್ದರೆ ನಿರ್ಬಂಧಗಳು ಮುಂದುವರಿಯಲಿವೆ. ನಿರ್ಬಂಧಗಳಿಂದಾಗಿ ಆ ರಾಷ್ಟ್ರದ ಆರ್ಥಿಕ ಸ್ಥಿತಿ ಶೋಚನೀಯವಾಗಿದೆ. ಇರಾನಿನ ನಡೆನುಡಿ ಬದಲಾಗಬೇಕು ಎಂಬುದಷ್ಟೇ ನಿರ್ಬಂಧದ ಉದ್ದೇಶ~ ಎಂದು ಸ್ಪಷ್ಟಪಡಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT