ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲವೂ ಇದೆ- ವೈದ್ಯರು, ಸಿಬ್ಬಂದಿ ಇಲ್ಲ

Last Updated 20 ಸೆಪ್ಟೆಂಬರ್ 2011, 8:45 IST
ಅಕ್ಷರ ಗಾತ್ರ

ಕೊಟ್ಟೂರು: `ಸುವ್ಯವಸ್ಥಿತ ಆಸ್ಪತ್ರೆ ಇದ್ದಲ್ಲಿ. ಅನಾರೋಗ್ಯಕ್ಕೆ ಪೀಡಿತರ ಸಂಖ್ಯೆಯೂ ಕಮ್ಮಿ~ ಹೀಗೆನ್ನುತ್ತಾಳೆ ದೀಪಧಾರಿಣಿ ದಾದಿ ಫ್ಲಾರೆನ್ಸ್ ನೈಟಿಂಗೆಲ್. ಮಾದರಿ ಆಸ್ಪತ್ರೆಯಾಗುವ ಆರ್ಹತೆ ಇರುವ, ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ, ಸಿಬ್ಬಂದಿ ಕೊರತೆಯಿಂದಾಗಿ ಆನಾರೋಗ್ಯ ಪೀಡಿತವಾಗಿದೆ.

ಸುಸಜ್ಜಿತ ಶಸ್ತ್ರ ಚಿಕಿತ್ಸಾ ವಿಭಾಗವಿದೆ. ಹೆರಿಗೆ ಥೇಟರ್, ಟ್ರಾಮ್ ಸೆಂಟರ್ (ಅಪಘಾತ), ಪ್ರಯೋಗಾಲಯ, ಕಣ್ಣಿನ ಪರೀಕ್ಷಾ ವಿಭಾಗ  ಸೇರಿದಂತೆ ಎಲ್ಲಾ ಸೌಲಭ್ಯಗಳೂ ಇಲ್ಲಿವೆ.

ಆದರೆ ಇಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಕೇವಲ ಮೂವರು ವೈದ್ಯರು. ಈ ಆಸ್ಪತ್ರೆ 42 ಸಾವಿರ ಜನರಿಗೆ ಮಾತ್ರ ಸರ್ಕಾರ ನಿಗದಿಗೊಳಿಸಿದೆ.  ಒಂದು ಲಕ್ಷಕ್ಕೂ ಹೆಚ್ಚು ಜನರು ಇದೇ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ.

ಕೊಟ್ಟೂರುಗೆ ನೂರಾರು ಹಳ್ಳಿಗಳು ಸೇರಿರುವುದರಿಂದ ನಿತ್ಯವೂ ಇಲ್ಲಿ ರೋಗಿಗಳ ಜಾತ್ರೆಯೇ ನೆರೆದಿರುತ್ತದೆ. ಹೆರಿಗೆ, ಅಪಘಾತ, ವಿಷ ಸೇವನೆ, ಹೊರರೋಗಿಗಳು ಹೀಗೆ ಒಂದೆರಡಲ್ಲ ಯಾವುದನ್ನು ಪರೀಕ್ಷಿಸಬೇಕು. ಯಾರನ್ನು ನೋಡಬೇಕು ಅನ್ನುವ ಸ್ಥಿತಿ ಇಲ್ಲಿನ ವೈದ್ಯರ್ದ್ದದಾಗಿರುತ್ತದೆ.

ಕನಿಷ್ಟವೆಂದರೂ ತಿಂಗಳಿಗೆ 50- 60 ಅಪಘಾತದ ಪ್ರಕರಣಗಳು ದಾಖಲಾಗುತ್ತವೆ. ಆದರೆ ಇಲ್ಲಿ ಮೂಳೆ ತಜ್ಞ ವೈದ್ಯರಿಲ್ಲ.

ತಿಂಗಳಿಗೆ 15-20 ವಿಷ ಕುಡಿದವರನ್ನು ಪರೀಕ್ಷಿಸಲು ಫಿಜಿಸಿಯನ್ ಇಲ್ಲ. ಅಗತ್ಯವಾಗಿ ಬೇಕಾದ ಹೆರಿಗೆ ತಜ್ಞರಿಲ್ಲ. ಅರವಳಿಕೆ ತಜ್ಞರಿಲ್ಲ. ಮಕ್ಕಳ ವೈದ್ಯರಿಲ್ಲ. ಇಲ್ಲಿ ಆರು ನುರಿತ ವೈದ್ಯರ ಅಗತ್ಯವಿದೆ.

ಇದು ವೈದ್ಯರ ಕೊರತೆ. ಇತರೆ ಸಿಬ್ಬಂದಿ ಸಮಸ್ಯೆ ಹೇಳತೀರದು. 6-8 ಜನ ಗ್ರೂಫ್ ನೌಕರರು ಇರಬೇಕಾದ ಆಸ್ಪತ್ರೆಯಲ್ಲಿ ಕೇವಲ ನಾಲ್ಕು ಜನರಿದ್ದಾರೆ. ಇಬ್ಬರು ಫಾರ್ಮಸಿಟ್ ಇರಬೇಕು. ಒಬ್ಬರು ಮಾತ್ರ ಇದ್ದಾರೆ. ಒಬ್ಬನೇ ಒಬ್ಬ ಡ್ರೈವರ್ ಇದ್ದಾರೆ.

 ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ಆರಂಭವಾಗಿದ್ದು1998ರಲ್ಲಿ. ವಿಚಿತ್ರವೆಂದರೆ ಆರೋಗ್ಯ ಇಲಾಖೆ ಇಲ್ಲಿಯ ತನಕ ಸಿಬ್ಬಂದಿ ಪಟ್ಟಿಯನ್ನೇ ಪ್ರಕಟಿಸಿಲ್ಲ.

ಇದೇ ಅವಧಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರವಾಗಿ ಆರಂಭವಾದ ಕುರುಗೋಡು, ಉಜ್ಜಿನಿ, ಇಟಗಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಪಟ್ಟಿಯನ್ನು ಪ್ರಕಟಿಸಿದೆ. ಆದರೆ ಕೊಟ್ಟೂರು ಆರೋಗ್ರ ಕೇಂದ್ರಕ್ಕೆ ಯಾಕೆ ಪ್ರಕಟಿಸಿಲ್ಲ ಎಂಬುದು ಅರ್ಥವಾಗದ ಸಂಗತಿ.

ಜಿಲ್ಲೆಯವರೆ ಆದ ಶ್ರೀರಾಮುಲು ಆರೋಗ್ಯ ಸಚಿವರಾದಾಗ. ಇಲ್ಲಿನವರು ಆಸ್ಪತ್ರೆ ಸುಧಾರಣೆ ಕುರಿತು ಮನವಿ ಅರ್ಪಿಸಿ, ಇನ್ನೇನು ಸುಧಾರಿಸಬಹುದು. ಸಿಬ್ಬಂದಿ ಕೊರತೆ ನೀಗಬಹುದು ಎಂದು ಕನಸುಕಂಡಿದ್ದು, ಕನಸಾಗಿಯೇ ಇದೆ. ಶಾಸಕ ಕೆ. ನೇಮಿರಾಜ್ ನಾಯ್ಕ ಖುದ್ದು ಆಸ್ಪತ್ರೆ ಪರಿಶೀಲಿಸಿದ್ದಾರೆ. ಇಲ್ಲಿನ ಸಮಸ್ಯೆಗಳು ಗೊತ್ತಿವೆ. ಆದರೂ ಆಸ್ಪತ್ರೆ ಬದಲಾಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT