ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಾ ಝಳ ಝಳ!

Last Updated 9 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಆಸ್ತಿಯ ಬಗ್ಗೆ ವಿವರಗಳನ್ನು ಮಾಧ್ಯಮದ ಮೂಲಕ ಹೊರಗೆಡಹಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಸಲ್ಲಿಸಿರುವ ವಿವರಗಳ ಪ್ರತಿ ಇದು ಎಂದು ಹೇಳಲಾಗಿದೆ. ಚುನಾವಣೆಯ (2008) ವೇಳೆಗೂ ಈಗಿಗೂ ಇವರ ಬಳಿಯಲ್ಲಿ ಈಗ ಹೆಚ್ಚಾಗಿರುವ ಚಿನ್ನದ ಪ್ರಮಾಣ (0.9 ಕೆ.ಜಿ.), ಬೆಳ್ಳಿಯ ಪ್ರಮಾಣ 51 ಕೆ.ಜಿ., ಠೇವಣಿಗಳಲ್ಲಿ ಹೆಚ್ಚಾಗಿರುವುದು ಒಟ್ಟಾರೆ ಸುಮಾರು ಶೇ 25 ಲಕ್ಷದಷ್ಟು, ಹೆಚ್ಚವರಿ ಚಿನ್ನ ಮತ್ತು ಬೆಳ್ಳಿ ಪ್ರಮಾಣ 2008 ರಿಂದ ಕಾಲಕಾಲಕ್ಕೆ ಎಷ್ಟೆಷ್ಟು ಹೆಚ್ಚಿತೆಂಬುದು ಪತ್ರಿಕೆಗಳಿಂದ ಗೊತ್ತಾಗುವುದಿಲ್ಲ.

ಈ ಹೆಚ್ಚಳ ಪೂರ್ತಿಯಾಗಿ ಕೊಡುಗೆಗಳಿಂದಾದುದು ಎಂದು ಮುಖ್ಯಮಂತ್ರಿಗಳ ಅಭಿಪ್ರಾಯವೇ? ಇರಬಹುದು. ಠೇವಣಿಗಳಲ್ಲಾದ ಹೆಚ್ಚಳ (ಮೂರು ವರ್ಷಗಳ ಅವಧಿಯಲ್ಲಿ) ಸುಮಾರು 25 ಲಕ್ಷ. ಈ ಹೆಚ್ಚಳದ ಮೂಲಗಳು ಯಾವುವೆಂಬುದನ್ನೂ ವಿವರವಾಗಿ ತಿಳಿಸಬಹುದಿತ್ತು.
ಕೃಷಿಯಿಂದ ಬಂದುದು 2.19 ಲಕ್ಷ ಎನ್ನುತ್ತಾರೆ. ಇದು ವಾರ್ಷಿಕವೊ ಅಥವಾ ಮೂರು ವರ್ಷಗಳ ಮೊತ್ತವೊ ತಿಳಿಯದು.

 ಆದಾಯ ತೆರಿಗೆ ವಿವರಗಳಲ್ಲಿ ಕೃಷಿಯಿಂದ ಬಂದ ಆದಾಯವನ್ನೂ ಇವರು ತೋರಿಸಿದ್ದಾರೆಂದು ಭಾವಿಸಬಹುದಲ್ಲವೇ. ಇವರ ವಿರುದ್ಧದ ಅಪಪ್ರಚಾರದ ಅಬ್ಬರದ ಹಿನ್ನೆಲೆಯಲ್ಲಿ ಯಡಿಯೂರಪ್ಪನವರ ಗಳಿಕೆ ತೀರ ಸಪ್ಪೆ!

ಮಕ್ಕಳ ಗಳಿಕೆಯ ಬಗ್ಗೆ ತಲೆ ಬಿಸಿ ಮಾಡಿಕೊಂಡಿಲ್ಲ. ಅವರೆಲ್ಲ ಪ್ರತ್ಯೇಕವಾಗಿದ್ದಾರೆ; ಅವರ ದುಡಿಮೆ ಗಳಿಕೆ ಅವರವರದೆಂಬ ತಟಸ್ಥ ಭಾವ ಯಡಿಯೂರಪ್ಪನವರದು. ಇದು  ಸರಿಯೆ. ಮಕ್ಕಳು, ಅಳಿಯನ ಗಳಿಕೆಗೆ ಇವರ ಕೊಡುಗೆ ಇದೆಯೆಂಬುದೇ ಇವರ ಮೇಲಿನ ಆಪಾದನೆಯ ಪ್ರಮುಖ ಅಂಶ.

ಇದರ ಹೊರತಾಗಿ ಇವರ ವ್ಯವಹಾರ ಎಲ್ಲಾ ಝಳ ಝಳ; ತಿಳಿನೀರಿನಷ್ಟು ಪಾರದರ್ಶಕ ಎನ್ನಬಹುದಲ್ಲವೇ!

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT