ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಾ ಸಖನಿಗಾಗಿ!

Last Updated 12 ಜುಲೈ 2012, 19:30 IST
ಅಕ್ಷರ ಗಾತ್ರ

ಮಾದಕ ಮೈಮಾಟ ಮತ್ತು ಕಂಠದಿಂದ ಸಂಗೀತಪ್ರಿಯರ ಎದೆಗೆ ಕಿಚ್ಚು ಹಚ್ಚುವ ಪಾಪ್ ಗಾಯಕಿ ಮಡೋನ್ನಾ, 53ರ ಹರೆಯದಲ್ಲೂ ಬಾಯ್‌ಫ್ರೆಂಡ್ ಖುಷಿಗಾಗಿ ಮೊನ್ನೆ ಮೊನ್ನೆ ಭರ್ಜರಿ ಟ್ರೀಟ್ ಕೊಟ್ಟರಂತೆ.

ಸಂಗೀತ ಕಾರ್ಯಕ್ರಮ ನೀಡಲು ಆಮ್‌ಸ್ಟರ್‌ಡ್ಯಾಮ್‌ಗೆ ಎರಡು ದಿನಗಳ ಭೇಟಿ ನೀಡಿದ್ದ ಈ ಚಿರಯುವತಿ ಎಡೆಬಿಡದ ಕಾರ್ಯಕ್ರಮಗಳ ನಡುವೆಯೂ ತನ್ನ ಹೊಸ ಸಖ ಬ್ರಾಹಿಮ್ ಜೈಬತ್ ಜೊತೆ ಸಮಯ ಕಳೆಯಲು ನಿರ್ಧರಿಸಿದರಂತೆ.

ಎಲ್ಲಿ ಹೋಗೋದು, ಏನು ಮಾಡೋದು ಅಂತ ಯೋಚಿಸಿದಾಗ, ಸಿನಿಮಾ ವೀಕ್ಷಿಸುವ ಐಡಿಯಾ ಹೊಳೆಯಿತಂತೆ. ಆದರೆ ಎ್ಲ್ಲಲಿ ಹೋದರೂ ಮುತ್ತಿಕೊಳ್ಳುವ ಅಭಿಮಾನಿಗಳಿಂದ ಪಾರಾಗಿ ಸಿನಿಮಾ ನೋಡೋದು ಸಾಧ್ಯವಾ?

ಹಾಗಿದ್ದರೆ? ಚಿತ್ರಮಂದಿರಕ್ಕೆ ಜನ ಬಂದರೆ ತಾನೆ ಈ ಸಮಸ್ಯೆ? ಅದಕ್ಕಾಗಿ  ಇಡೀ ಚಿತ್ರಮಂದಿರವನ್ನೇ ಕಾಯ್ದಿರಿಸಿದ ಮಡೋನಾ, ಹಾಯಾಗಿ ಸಖನೊಂದಿಗೆ ಸಿನಿಮಾ ವೀಕ್ಷಿಸಿದರಂತೆ.

ಶಾಪಿಂಗ್‌ಗೆ ಹೋಗಲಿ, ಹಾಗೇ ಸುಮ್ಮನೆ ಮನೆಯಿಂದಾಚೆ ಕಾಲಿಡಲಿ ಅವರಿಗೆ ಅಭಿಮಾನಿಗಳನ್ನು ಸಂಭಾಳಿಸುವುದೇ ಕಷ್ಟವಾಗುತ್ತದಂತೆ. ಇಂತಿಪ್ಪ ಮಡೋನಾ ಚಿತ್ರಮಂದಿರಕ್ಕೆ ಹೋದರೆಂದರೆ ಬಿಡುತ್ತಾರಾ?

ಅದಿರಲಿ, ಈ ಸಖತ್ ಟ್ರೀಟ್‌ನಿಂದ ಆ ಸಖನ ದಿಲ್‌ಖುಷ್ ಆಗಿರಬೇಕು! ಅಂದಹಾಗೆ ಅವರು ವೀಕ್ಷಿಸಿದ ಸಿನಿಮಾ `ದಿ ಅನ್‌ಟಚಬಲ್~

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT