ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಇಟಿಗೆ ಭಾರತದ ಯುವಕರ ನೇಮಕ

ಪಾಕಿಸ್ತಾನ ಭಯೋತ್ಪಾದಕನ ತಪ್ಪೊಪ್ಪಿಗೆ
Last Updated 4 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ಸಂಸತ್ ಬಳಿ ಏಕಾಏಕಿ ಗುಂಡು ಹಾರಿಸಿ, ಆತಂಕದ ವಾತಾವರಣ ಸೃಷ್ಟಿಸಿದ್ದ ಮಲಿಕ್ ಸಿಕಂದರ್ ಹಯಾತ್ (50) ಎಂಬಾತನು, ಲಷ್ಕರ್-ಎ-ತೈಯಬಾ ಉಗ್ರರ ಶಿಬಿರದಲ್ಲಿ ತರಬೇತಿ ಪಡೆದಿದ್ದ ಮತ್ತು ಮಧ್ಯಪೂರ್ವ ಪ್ರಾಂತ್ಯದಲ್ಲಿ ನಿಷೇಧಿತ ಎಲ್‌ಇಟಿ ಉಗ್ರಗಾಮಿ ಸಂಘಟನೆಗೆ ಭಾರತೀಯ ಯುವಕರನ್ನು ನೇಮಿಸುವಲ್ಲಿ ನೆರವಾಗಿದ್ದ ಎಂದು ಗುಪ್ತಚರ ವರದಿಯನ್ನು ಉಲ್ಲೇಖಿಸಿ `ದಿ ನ್ಯೂಸ್ ಡೈಲಿ' ಪ್ರಕಟಿಸಿದೆ.

ಭಾರತೀಯ ಯುವಕರನ್ನು ಉಗ್ರಗಾಮಿ ಚಟುವಟಿಕೆಗಳಿಗೆ ನೇಮಿಸಿ, ನಂತರ ನಕಲಿ ಗುರುತು ಮತ್ತು ಹೆಸರಿನಲ್ಲಿ ಅವರಿಗೆ ತರಬೇತಿಗಾಗಿ ಮುಜಾಫರಾಬಾದ್‌ಗೆ ಪ್ರಯಾಣ ಬೆಳೆಸಲು ವ್ಯವಸ್ಥೆ ಮಾಡುತ್ತಿದ್ದ ಮತ್ತು ಆಮೇಲೆ ಅವರನ್ನು ಭಾರತದಲ್ಲಿ ದಾಳಿ ನಡೆಸಲು ಕಳುಹಿಸುತ್ತಿದ್ದ ಎಂದು ಪಾಕ್ ಅಧಿಕಾರಿಗಳ ಬಳಿ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪತ್ರಿಕೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT