ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಐಸಿಯಿಂದ ಜೀವನ್ ಆರೋಗ್ಯ ವಿಮೆ ಸೌಲಭ್ಯ

Last Updated 1 ಜೂನ್ 2011, 10:50 IST
ಅಕ್ಷರ ಗಾತ್ರ

ಮೈಸೂರು:ಭಾರತೀಯ ಜೀವ ವಿಮಾ ನಿಗಮ ಜೂ.1ರಿಂದ `ಜೀವನ್ ಆರೋಗ್ಯ~ ಎಂಬ ನೂತನ ಆರೋಗ್ಯ ವಿಮಾ ಯೋಜನೆ ಪರಿಚಯಿಸಲಿದೆ ಎಂದು ಹಿರಿಯ ಪ್ರಬಂಧಕ ವಿ.ಕೆ. ಅಲೆಕ್ಸಾಂಡರ್ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಹಕರಿಗೆ ಆರೋಗ್ಯ ಸೇವೆ ಒದಗಿಸುವುದು ಯೋಜನೆ ಉದ್ದೇಶ. ಈ ವಿಮಾ ಯೋಜನೆ ಪಾಲಿಸಿದಾರನ ಆಸ್ಪತ್ರೆ ಖರ್ಚು- ವೆಚ್ಚಗಳನ್ನು ನೋಡಿಕೊಳ್ಳಲು ನೆರವಾಗಲಿದೆ ಎಂದರು.

 ನೂತನ ವಿಮೆ ರೂ. 1000ದಿಂದ 4000 ವರೆಗೆ ವಾರ್ಷಿಕ ಕಂತು ಹೊಂದಿದೆ. ಗ್ರಾಹಕರು ತಮ್ಮ ಕುಟುಂಬ ಸದಸ್ಯರ ಸಂಖ್ಯೆ ಅನುಸಾರ ಪಾಲಿಸಿ ಮಾಡಿಸಿಕೊಳ್ಳಬಹುದು. ಪಾಲಿಸಿದಾರ ತನ್ನ ತಾಯಿ- ತಂದೆ, ಅತ್ತೆ- ಮಾವ ಹಾಗೂ ಮಕ್ಕಳನ್ನು ವಿಮೆ ವ್ಯಾಪ್ತಿಗೆ ತರಬಹುದು. ಕುಟುಂಬಕ್ಕೆ ಸೇರ್ಪಡೆಗೊಳ್ಳುವ ಹೊಸ ಸದಸ್ಯರನ್ನು ನಂತರದ ದಿನಗಳಲ್ಲಿ ಸೇರಿಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.

ಪಾಲಿಸಿ ಪಡೆದವರಿಗೆ ಆಸ್ಪತ್ರೆ ನಗದು ವೆಚ್ಚ ಪ್ರತಿದಿನ ರೂ.1000ರಿಂದ ರೂ. 4000 ವರೆಗೆ ಭರಿಸಲಾಗುತ್ತದೆ. ತುರ್ತು ವಾಹನದ ವೆಚ್ಚವೂ ಪಾಲಿಸಿ ವ್ಯಾಪ್ತಿಗೆ ಸೇರುತ್ತದೆ. ಖರ್ಚಿನ ಮಿತಿಗೆ ಒಳಪಡದೆ ವಿಮಾ ಮೊತ್ತ ಪಾವತಿ ಮಾಡುವುದು ಯೋಜನೆ ವೈಶಿಷ್ಟ್ಯವಾಗಿದೆ. ಯೋಜನೆಯ ಹೆಚ್ಚಿನ ವಿವರಗಳನ್ನು ಎಲ್‌ಐಸಿಯ ಯಾವುದೇ ಕಚೇರಿಯಲ್ಲಿ ಪಡೆಯಬಹುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥ ಸಿ.ಕೆ.ರವಿ, ಬಿ.ಪಿ.ರವಿ,  ಟಿ. ಕೃಷ್ಣ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT