ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಪಿಜಿ ಸಿಲಿಂಡರ್‌ಗೆ ಮಿತಿ ಪರಿಣಾಮ:ಆಧುನಿಕ ಒಲೆಯತ್ತ ಗೃಹಿಣಿ ಚಿತ್ತ

Last Updated 7 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕೋಲ್ಕತ್ತ (ಐಎಎನ್‌ಎಸ್): ಸಬ್ಸಿಡಿ ದರದಲ್ಲಿ ಪೂರೈಸುವ `ಎಲ್‌ಪಿಜಿ~ ಸಿಲಿಂಡರ್ ಸಂಖ್ಯೆಯನ್ನು ಸರ್ಕಾರ 6ಕ್ಕೆ ಮಿತಿಗೊಳಿಸಿರುವುದರಿಂದ ಅಡುಗೆ ಮನೆಯ ಚಿತ್ರಣ ಬದಲಾಗುವ ಸಾಧ್ಯತೆ ಇದೆ ಎನ್ನುತ್ತದೆ ಹೊಸ ಅಧ್ಯಯನ.
`ಎಲ್‌ಪಿಜಿ~ಗೆ ಬದಲಾಗಿ ಪರ್ಯಾಯ ಇಂಧನ ಬಳಕೆಯತ್ತ ನಗರವಾಸಿಗಳು ಗಮನ ಹರಿಸುತ್ತಿದ್ದಾರೆ.

ಇದರಿಂದ ಮತ್ತೆ ಇಂಡಕ್ಷನ್ ಕುಕ್ಕರ್, ಮೈಕ್ರೊವೇವ್ ಆವೆನ್‌ಗಳಿಗೆ ಬೇಡಿಕೆ ಹೆಚ್ಚುವ ಸಾಧ್ಯತೆ ಇದೆ. ನಗರೀಕರಣ, ಬದಲಾಗುತ್ತಿರುವ ಜೀವನ ಶೈಲಿ ಮತ್ತು ಕೆಲಸಕ್ಕೆ ಹೋಗುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವುರಿಂದ ಪರ್ಯಾಯ ಅಡುಗೆ ಪರಿಕರಗಳಿಗೆ ಬೇಡಿಕೆ ಕುದುರಿದೆ.

ಸದ್ಯ ದೇಶದ ಇಂಡಕ್ಷನ್ ಕುಕ್ಕರ್ ಮಾರುಕಟ್ಟೆ ರೂ1,100 ಕೋಟಿಯಷ್ಟಿದೆ. ಸಬ್ಸಿಡಿ ರಹಿತ `ಎಲ್‌ಪಿಜಿ~ ಸಿಲಿಂಡರ್ ದರಕ್ಕೆ ಹೋಲಿಸಿದರೆ ಇದು ಅಗ್ಗವಾಗಿರುವುದರಿಂದ ಹೆಚ್ಚಿನ ಜನರು ಇದರತ್ತ ಒಲವು ತೋರುತ್ತಿದ್ದಾರೆ ಎನ್ನುತ್ತದೆ  ಇಂಡಕ್ಷನ್ ಕುಕ್ಕರ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಬಜಾಜ್ ಎಲೆಕ್ಟ್ರಾನಿಕ್ಸ್. 

`ಸಬ್ಸಿಡಿ ಸಿಲಿಂಡರ್‌ಗೆ ಸರ್ಕಾರ ಮಿತಿ ವಿಧಿಸಿರುವುದರಿಂದ ನಮ್ಮ ಮಾರುಕಟ್ಟೆ ಈ ವರ್ಷ ಶೇ 50ರಷ್ಟು ಚೇತರಿಕೊಳ್ಳುವ ಸಾಧ್ಯತೆ ಇದೆ. ಇಂಡಕ್ಷನ್ ಕುಕ್ಕರ್‌ನ ವಿದ್ಯುತ್ ಬಳಕೆ ವೆಚ್ಚ ಸಬ್ಸಿಡಿ ರಹಿತ ಸಿಲಿಂಡರ್‌ನ ಅರ್ಧದಷ್ಟೂ ಇರದು. ಒಂದೊಮ್ಮೆ ವಿದ್ಯುತ್ ದರ ಶೇ 30ರಷ್ಟು ಹೆಚ್ಚಿದರೂ ಇದೇ ಅಗ್ಗವಾಗಿರುತ್ತದೆ~ ಎನ್ನುತ್ತಾರೆ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಶೇಖರ್ ಬಜಾಜ್.

`ಸರ್ಕಾರದ ಕ್ರಮದಿಂದ ಇಂಡಕ್ಷನ್ ಕುಕ್ಕರ್, ರೈಸ್ ಕುಕ್ಕರ್ ಮತ್ತು ಏರ್‌ಫ್ರೈಯರ್ಸ್‌ ಮಾರಾಟ ಹೆಚ್ಚುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಮಾರುಕಟ್ಟೆಗೆ ಪರಿಚಯಿಸಿದ ಹೊಸ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. ಆಧುನಿಕ ಜೀವನಶೈಲಿಗೆ ತಕ್ಕಂತೆ  `ಸ್ಮಾರ್ಟ್ ಅಡುಗೆ ಮನೆ~ ಕಲ್ಪನೆಯೂ ನಗರಗಳಲ್ಲಿ ಜನಪ್ರಿಯಗೊಳ್ಳುತ್ತಿದೆ~ ಎನ್ನುತ್ತಾರೆ ಫಿಲಿಫ್ಸ್ ಎಲೆಕ್ಟ್ರಾನಿಕ್ಸ್ ಇಂಡಿಯಾ ಮಾರುಕಟ್ಟೆ ಮುಖ್ಯಸ್ಥೆ ಜಿನೆವಿವ್ ಟೇರ‌್ಲೆ.

ಸಾಂಪ್ರದಾಯಿಕ ಅಡುಗೆ ಉಪಕರಣಗಳಿಗೆ ಹೋಲಿಸಿದರೆ `ಏರ್‌ಫ್ರೈಯ   ರ್ಸ್‌~ನಲ್ಲಿ ಪದಾರ್ಥ ಹುರಿಯಲು ಶೇ 80ರಷ್ಟು ಕಡಿಮೆ ಎಣ್ಣೆ ಸಾಕು. ಸಣ್ಣ ಕುಟುಂಬಗಳು ಇಂತಹ ಆಧುನಿಕ ಅಡುಗೆ ಉಪಕರಣ ಬಳಸಲು ಹೆಚ್ಚು ಇಷ್ಟಪಡುತ್ತವೆ  ಎನ್ನುತ್ತಾರೆ ಅವರು.

`ಎಲ್‌ಪಿಜಿ~ ಬದಲಿಗೆ ಹಣ ಉಳಿಸುವ ಅತ್ಯಾಧುನಿಕ ಅಡುಗೆ ಸಾಧನಗಳತ್ತ ನಗರ ಜನತೆ ಗಮನ ಹರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮೈಕ್ರೊವೇವ್ ಆವೆನ್ ಮಾರಾಟ ಹೆಚ್ಚುವ ನಿರೀಕ್ಷೆ ಇದೆ~ ಎಂದು ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಹೇಳಿದೆ. ಸದ್ಯ ದೇಶದಲ್ಲಿ 15 ಲಕ್ಷ ಮೈಕ್ರೊವೇವ್ ಆವೆನ್ ಬಳಕೆಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT