ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಪಿಜಿ ಸೋರಿಕೆ: ಅಪಾರ ಹಾನಿ

Last Updated 4 ಫೆಬ್ರುವರಿ 2011, 8:25 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಅಡುಗೆ ಅನಿಲ ಸೋರಿಕೆ ಸಂದರ್ಭದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕೂಡ ಸಂಭವಿಸಿ  ಅಡುಗೆ ಮನೆ ಹಾಗೂ ಇತರ ಸಾಮಾಗ್ರಿಗಳು ಸುಟ್ಟು ಭಾರಿ ನಷ್ಟವಾಗಿರುವ ಘಟನೆ ಇಲ್ಲಿಗೆ ಸಮೀಪದ  ಕಳತ್‌ಮಾಡುವಿನಲ್ಲಿ ಗುರುವಾರ ನಡೆದಿದೆ.

 ಕಳತ್‌ಮಾಡುವಿನ ಜಪ್ಪೆಕೊಲ್ಲಿ ಉತ್ತಪ್ಪ ಎಂಬವರ ಅಡುಗೆ ಮನೆಯಲ್ಲಿ ಮಧ್ಯಾಹ್ನ 2.30ರ ವೇಳೆಗೆ ಅಡುಗೆ ಅನಿಲ ಸೋರುತಿತ್ತು ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ವಿದ್ಯುತ್ ಅವಘಡವೂ ಸಂಭವಿಸಿ ಅಡುಗೆ ಕೋಣೆಯಲ್ಲಿ  ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಗಾಬರಿಗೊಂಡ ಉತ್ತಪ್ಪ ಪತ್ನಿ ಶೋಭಾ ತಮ್ಮ ವೃದ್ಧ ತಂದೆ ಅಯ್ಯಪ್ಪ ಹಾಗೂ ತಾಯಿ ಅಕ್ಕಮ್ಮ ಅವರನ್ನು ಹೊರಗೆ ಕರೆತರುವಾಗ ಗಾಳಿಬೀಬಿಸಿ ಬೆಂಕಿ ಮತ್ತಷ್ಟು ಬಿರುಸುಗೊಂಡಿದೆ.

ಇದರಿಂದ ಅಡುಗೆ ಮನೆಯಲ್ಲಿದ್ದ ರೆಫ್ರಜಿರೇಟರ್, ಮಿಕ್ಸಿ, ಅಡುಗೆ ಪಾತ್ರೆ ಹಾಗೂ ಇತರ ಬೆಲೆಬಾಳುವ  ಸಾಮಾಗ್ರಿಗಳು ಸುಟ್ಟುಕರಲಾಗಿವೆ. ಜತೆಗೆ ಕಿಟಕಿ, ಬಾಗಿಲುಗಳು, ವಿದ್ಯುತ್ ಬೋರ್ಡ್, ತಂತಿ ಕೂಡ ಸುಟ್ಟು  ಹೋಗಿವೆ. ಬೆಂಕಿಯ ಶಾಖಕ್ಕೆ ಮನೆಯ ಗೋಡೆ ಬಿರುಕುಬಿಟ್ಟಿದೆ. ಅರ್‌ಸಿಸಿ ಮನೆಯಾದ್ದರಿಂದ ಬೆಂಕಿ ಇತರ  ಭಾಗಗಳಿಗೆ ಹರಡದೆ ಸಂಭವಿಸಬಹುದಾಗಿದ್ದ ಹೆಚ್ಚಿನ ಅನಾಹುತ ತಪ್ಪಿದೆ. ಆದರೂ ಸುಮಾರು ರೂ.15 ಲಕ್ಷ  ನಷ್ಟವಾಗಿದೆ ಎಂದು ಉತ್ತಪ್ಪ ತಿಳಿಸಿದ್ದಾರೆ. 

 ವಿಷಯ ತಿಳಿದ ವಿಧಾನಸಭಾ ಅಧ್ಯಕ್ಷ ಕೆ.ಜಿ. ಬೋಪಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೂಡಲೆ  ತಹಶೀಲ್ದಾರ್ ನಷ್ಟದ ಅಂದಾಜಿನ ವರದಿ ನೀಡಿದರೆ ಸರ್ಕಾರಕ್ಕೆ ಸಲ್ಲಿಸಿ ಸೂಕ್ತ ಪರಿಹಾರ ನೀಡಲು  ಕ್ರಮ ಕೈಗೊಳ್ಳ ಲಾಗುವುದು ಎಂದು ಹೇಳಿದರು. ಬಳಿಕ ತಹಶೀ ಲ್ದಾರ್ ಹನುಮಂತರಾಯಪ್ಪ ಭೇಟಿ ನೀಡಿ ಪರಿಶೀಲಿಸಿ ಅಂದಾಜಿನ ನಷ್ಟವನ್ನು ದಾಖಲಿಸಿಕೊಂಡರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT