ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಪಿಜಿಗೆ ‘ಆಧಾರ್‌’ ಕಡ್ಡಾಯವಲ್ಲ-:ಮೊಯಿಲಿ

Last Updated 7 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಗ್ಯಾಸ್ ಏಜೆನ್ಸಿಗಳು ಆಧಾರ್ ಕಾರ್ಡ್ ಇಲ್ಲದ ಗ್ರಾಹಕರಿಗೂ  ಅಡುಗೆ ಅನಿಲ  ಪೂರೈಸಬೇಕು’ ಎಂದು ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ತಾಕೀತು ಮಾಡಿದರು. ಭಾರತೀಯ ವಾಣಿಜ್ಯ ಒಕ್ಕೂಟಗಳು ಸೆಂಟ್ರಲ್ ಕಾಲೇ ಜಿನಲ್ಲಿ ಶನಿವಾರ ಆಯೋಜಿ­ಸಿದ್ದ ಅಖಿಲ ಭಾರತ ವಾಣಿಜ್ಯ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿ, ‘ಸಾರ್ವಜ ನಿಕರ ಹಿತದೃಷ್ಟಿಯಿಂದ ಆಧಾರ್  ಕಾರ್ಡ್ ಕಡ್ಡಾಯ ಮಾಡ­ಲಾಗಿತ್ತು. ಸುಪ್ರೀಂಕೋರ್ಟ್ ಆದೇಶದ ನಂತರ ಇದನ್ನು ಬದ ಲಾಯಿಸಲಾಗಿದೆ. ಹಾಗಾಗಿ ಎಲ್‌ಪಿಜಿ ಪೂರೈಕೆಗೆ ಆಧಾರ್‌ ಕಾರ್ಡ್ ಅವಶ್ಯಕತೆ ಇಲ್ಲ’ ಎಂದರು.

‘ದೇಶದಲ್ಲಿ 14 ಕೋಟಿಗೂ ಹೆಚ್ಚು ಮಂದಿ ಎಲ್‌ಪಿಜಿ ಸಂಪರ್ಕ ಪಡೆ­ದಿದ್ದಾ­ರೆ.  3  ಕೋಟಿಗಿಂತ ಹೆಚ್ಚು ಮಂದಿ ನಕಲಿ ದಾಖಲೆ ಸೃಷ್ಟಿಸಿ ಸಂಪರ್ಕ ಪಡೆದಿದ್ದಾರೆ. ಆಧಾರ್ ಕಾರ್ಡ್ ಇದ್ದರೆ, ಅರ್ಹ ಗ್ರಾಹಕರಿಗೆ ಹೆಚ್ಚಿನ ಸಬ್ಸಿಡಿ ದೊರೆಯುತ್ತದೆ. ಗ್ರಾಹಕ­ರ ಹಿತದೃಷ್ಟಿ­ಯಿಂದ ಆಧಾರ್ ಕಾರ್ಡ್ ಇರುವುದು ಒಳಿತು’ ಎಂದು ಪ್ರತಿಪಾದಿಸಿದರು. ‘ದೇಶದ ಇಂಧನ ವ್ಯವಸ್ಥೆ ಯಲ್ಲಿ ಸುಧಾರಣೆಗಳಾಗುತ್ತಿದ್ದು, 2030ರ ವೇಳೆಗೆ ಈ ಕ್ಷೇತ್ರ ದಲ್ಲಿ ಭಾರತ  ಸ್ವಾವ­ಲಂಬನೆ­ಯನ್ನು ಸಾಧಿಸಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT