ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್.ತಿಪ್ಪೇಸ್ವಾಮಿ ಅವರಿಗೆ ಅಂತರರಾಷ್ಟ್ರೀಯ ಮನ್ನಣೆ

Last Updated 9 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮೈಸೂರು: ಹೆಸರಾಂತ ಛಾಯಾಗ್ರಾಹಕ ಎಸ್.ತಿಪ್ಪೇಸ್ವಾಮಿ ಅವರಿಗೆ ಫೋಟೋಗ್ರಫಿ  ಸೊಸೈಟಿ ಆಫ್ ಅಮೆರಿಕ ನೀಡುವ ಅಂತರರಾಷ್ಟ್ರೀಯ  ಮಟ್ಟದ ಎಫ್‌ಪಿಎಸ್‌ಎ (ಫೆಲೋಶಿಪ್) ದೊರೆತಿದೆ. ಈ ಮನ್ನಣೆಯು ವನ್ಯಜೀವಿ ವಿಭಾಗಕ್ಕೆ ಲಭಿಸಿದೆ.

ತಿಪ್ಪೇಸ್ವಾಮಿ ಅವರು ಛಾಯಾಗ್ರಾಹಕ, ಉಪನ್ಯಾಸಕ ಹಾಗೂ ವಿವಿಧ ಛಾಯಾಚಿತ್ರ ಪ್ರದರ್ಶನಗಳ ತೀರ್ಪುಗಾರರಾಗಿ ಕೆಲಸ ಮಾಡಿದ್ದಾರೆ. 

ಇವರು ಛಾಯಾಗ್ರಾಹಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆಗೆ ಈ ಮನ್ನಣೆ ಲಭಿಸಿದೆ. ಇವರಿಗೆ ಶೇ 75ರಷ್ಟು ಮತಗಳು ದೊರೆತು, ಅತ್ಯುನ್ನತ ಗೌರವಕ್ಕೆ ಪಾತ್ರರಾಗಿದ್ದಾರೆ. ತಿಪ್ಪೇಸ್ವಾಮಿ ಸೆ.24ರಂದು ಅಮೆರಿಕದ ಕೊಲರಾಡೊ ಸ್ಪ್ರಿಂಗ್ಸ್‌ನಲ್ಲಿ ಫೆಲೋಶಿಪ್ ಸ್ವೀಕರಿಸಲಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT