ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸಿಲಾರ್‌ನಿಂದ ವಿಶ್ವ ದೃಷ್ಟಿದಿನ ಆಚರಣೆ

Last Updated 14 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ವಿಶ್ವ ದೃಷ್ಟಿದಿನದ ಅಂಗವಾಗಿ ದೃಷ್ಟಿಯ ಪ್ರಾಮುಖ್ಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಕನ್ನಡಕ ತಯಾರಿಕಾ ಕಂಪೆನಿ ಎಸ್ಸಿಲಾರ್ `ವಾಕಥಾನ್~ ಹಮ್ಮಿಕೊಂಡಿತ್ತು.

ಆನಂದರಾವ್ ವೃತ್ತದಲ್ಲಿರುವ ಎಸ್ಸಿಲಾರ್ ಕಚೇರಿಯಿಂದ ಪ್ರಾರಂಭಗೊಂಡ ವಾಕಥಾನ್ ಫ್ರೀಡಮ್ ಪಾರ್ಕ್‌ನಲ್ಲಿ ಕೊನೆಗೊಂಡಿತು.

ಮಾಸ್ಕಾಟ್ ಮಿಸ್ಟರ್ ಐ-ಡೀ ಎಂಬ ದೊಡ್ಡ ಗಾತ್ರದ ಐ ಬಾಲ್ ನಡಿಗೆಯ ಪ್ರಮುಖ ಆಕರ್ಷಣೆಯಾಗಿತ್ತು. ಇದು ಅತ್ಯುತ್ಸಾಹದೊಂದಿಗೆ ಸಾರ್ವಜನಿಕರ ಜತೆ ಸಂವಾದ ನಡೆಸಿತು. ಎಸ್ಸಿಲಾರ್‌ನ ಉದ್ಯೋಗಿಗಳು ಈ ನಡಿಗೆಯಲ್ಲಿ ಪಾಲ್ಗೊಂಡು,  ದೃಷ್ಟಿ ಸಂರಕ್ಷಿಸುವುದರ ಪ್ರಾಮುಖ್ಯ ಕುರಿತ ಬ್ಯಾನರ್ ಹಾಗೂ ಪೋಸ್ಟರ್‌ಗಳನ್ನು ಪ್ರದರ್ಶಿಸಿ ಜಾಗೃತಿ ಮೂಡಿಸಿದರು.

ಈ ಅಭಿಯಾನದ ಜತೆಗೆ ಎಸ್ಸಿಲಾರ್ ನಗರದಲ್ಲಿರುವ ಸಂಚಾರ ಪೊಲೀಸರಿಗಾಗಿ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನೂ ಆಯೋಜಿಸಲಾಗಿತ್ತು. ಸಪ್ತಾಹದ ಅಂಗವಾಗಿ ರೇಡಿಯೊ ಸಿಟಿ ಸಹಯೋಗದೊಂದಿಗೆ ಎಸ್ಸಿಲಾರ್ ಇತರೆ ಚಟುವಟಿಕೆಗಳನ್ನು ನಡೆಸುತ್ತಿದೆ. ಜತೆಗೆ ಕಳೆದ ಒಂದು ವಾರದಿಂದ ನಗರದಲ್ಲಿ ಸಂಚಾರಿ ಘಟಕವೊಂದು ಚಲಿಸುತ್ತಿದ್ದು, ಈ ಮುಖೇನ ಅನೇಕ ಸ್ಪರ್ಧೆ ಹಾಗೂ ಆಟಗಳನ್ನು ಆಯೋಜಿಸಿದೆ.

`ವಿಶ್ವ ದೃಷ್ಟಿ ದಿನದಂದು ಸಾಮಾನ್ಯ ಜನರಲ್ಲಿ ಅಗತ್ಯ ಕಣ್ಣಿನ ಆರೈಕೆ ಕುರಿತಂತೆ ಮಾಹಿತಿ ಮತ್ತು ಶಿಕ್ಷಣ ನೀಡುವುದು ನಮ್ಮ ಉದ್ದೇಶ~ ಎನ್ನುತ್ತಾರೆ ಎಸ್ಸಿಲಾರ್ ಇಂಡಿಯಾದ ಪ್ರೈವೇಟ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಾಮಚಂದ್ರನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT