ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ: ಕೊಡಗು ಶೇ 82.52 ಫಲಿತಾಂಶ

Last Updated 18 ಮೇ 2012, 8:25 IST
ಅಕ್ಷರ ಗಾತ್ರ

ಮಡಿಕೇರಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆಯು ಶೇ 82.52ರಷ್ಟು ಫಲಿತಾಂಶ ತೋರಿದ್ದು, ರಾಜ್ಯದ ಪಟ್ಟಿಯಲ್ಲಿ 13ನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 2.43ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಪ್ರತಿವರ್ಷದ ಸಂಪ್ರದಾಯದಂತೆ ಈ ವರ್ಷವೂ ವಿದ್ಯಾರ್ಥಿನಿಯರೇ (ಶೇ 86.25) ಮೇಲುಗೈ ಸಾಧಿಸಿದ್ದಾರೆ.

ಕಳೆದ ಏಪ್ರಿಲ್ ತಿಂಗಳಿನಲ್ಲಿ ಜರುಗಿದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳು, ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ ಖಾಸಗಿ ವಿದ್ಯಾರ್ಥಿಗಳು ಸೇರಿದಂತೆ 7,490 ವಿದ್ಯಾರ್ಥಿಗಳು ಹಾಜರಾಗಿದ್ದರು.

ಇವರಲ್ಲಿ ಪ್ರಸಕ್ತ ಸಾಲಿನ 7,295 ವಿದ್ಯಾರ್ಥಿಗಳ ಪೈಕಿ 6,199 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಇದು ಶೇ 84.56 ಫಲಿತಾಂಶವಾಗಿದೆ.ಇವರಲ್ಲಿ 245 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 2,161 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 1,414 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಹಾಗೂ 2,349 ಸಾಮಾನ್ಯ ದರ್ಜೆಯಲ್ಲಿ ಪಾಸಾಗಿದ್ದಾರೆ.

ಜಿಲ್ಲೆಯಲ್ಲಿ 47 ಸರ್ಕಾರಿ ಶಾಲೆಗಳು, 48 ಅನುದಾನಿತ ಹಾಗೂ 53 ಖಾಸಗಿ ಶಾಲೆಗಳು ಸೇರಿದಂತೆ ಒಟ್ಟು 148 ಶಾಲೆಗಳಿವೆ. ಇವುಗಳಲ್ಲಿ 2 ಸರ್ಕಾರಿ ಶಾಲೆ ಹಾಗೂ 18 ಖಾಸಗಿ ಶಾಲೆಗಳು ಸೇರಿದಂತೆ ಒಟ್ಟು 20 ಶಾಲೆಗಳು ನೂರಕ್ಕೆ ನೂರರಷ್ಟು ಫಲಿತಾಂಶ ಸಾಧಿಸಿವೆ ಎನ್ನುವುದು ಗಮನಾರ್ಹ.

ಮಕ್ಕಂದೂರು ಸರ್ಕಾರಿ ಪ್ರೌಢಶಾಲೆ, ಕಾನಬೈಲು ಸರ್ಕಾರಿ ಪ್ರೌಢಶಾಲೆ, ಚೇರಂಬಾಣೆ ಅರುಣ್ ಪ.ಪೂ ಕಾಲೇಜು, ಕೊಡಗರಹಳ್ಳಿ ಶಾಂತಿನಿಕೇತನ ಶಾಲೆಗಳು ಶೇ 100ರಷ್ಟು ಫಲಿತಾಂಶ ಸಾಧಿಸಿವೆ ಎಂದು ತಿಳಿದು ಬಂದಿದೆ.

ಬಾಲಕಿಯರದ್ದೇ ಮೇಲುಗೈ:
ಒಟ್ಟಾರೆಯಾಗಿ 3,656 ಬಾಲಕರ ಪೈಕಿ 2,892 (ಶೇ 79.08 ) ಬಾಲಕರು ಪಾಸಾಗಿದ್ದರೆ, 3,834 ಬಾಲಕಿಯರ ಪೈಕಿ 3,289 (ಶೇ 86.25) ಬಾಲಕಿಯರು ಪಾಸಾಗಿದ್ದಾರೆ.ಬಾಲಕಿಯರು- ಪರಿಶಿಷ್ಟ ಜಾತಿ (ಎಸ್.ಸಿ) 571 ವಿದ್ಯಾರ್ಥಿನಿಯರಲ್ಲಿ 448 ವಿದ್ಯಾರ್ಥಿನಿಯರು (ಶೇ 78.46) ಪಾಸಾಗಿದ್ದಾರೆ. ಪರಿಶಿಷ್ಟ ಪಂಗಡ (ಎಸ್.ಟಿ) 183 ವಿದ್ಯಾರ್ಥಿನಿಯರ ಪೈಕಿ 135 ವಿದ್ಯಾರ್ಥಿನಿಯರು (ಶೇ 73.7) ಪಾಸಾಗಿದ್ದಾರೆ.

ಪ್ರವರ್ಗ 1(ಕ್ಯಾಟಗರಿ-1)ರಲ್ಲಿ 21 ವಿದ್ಯಾರ್ಥಿನಿಯರ ಪೈಕಿ 19 ವಿದ್ಯಾರ್ಥಿನಿಯರು (ಶೇ 90.48) ಪಾಸಾಗಿದ್ದಾರೆ. ಇತರೆ ವರ್ಗದ 3,059 ವಿದ್ಯಾರ್ಥಿನಿಯರ ಪೈಕಿ 2,687 (ಶೇ 87) ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿದ್ದಾರೆ.

ಬಾಲಕರು- ಪರಿಶಿಷ್ಟ ಜಾತಿ    (ಎಸ್.ಸಿ) 470 ವಿದ್ಯಾರ್ಥಿಗಳಲ್ಲಿ 321 ವಿದ್ಯಾರ್ಥಿಗಳು (ಶೇ 68.30) ಪಾಸಾಗಿದ್ದಾರೆ. ಪರಿಶಿಷ್ಟ ಪಂಗಡ (ಎಸ್.ಟಿ) 129 ವಿದ್ಯಾರ್ಥಿ ಪೈಕಿ 94 ವಿದ್ಯಾರ್ಥಿಗಳು (ಶೇ 72.87) ಪಾಸಾಗಿದ್ದಾರೆ. ಪ್ರವರ್ಗ 1(ಕ್ಯಾಟಗರಿ-1)ರಲ್ಲಿ 20 ವಿದ್ಯಾರ್ಥಿಗಳ ಪೈಕಿ 16 ವಿದ್ಯಾರ್ಥಿಗಳು (ಶೇ 80) ಪಾಸಾಗಿದ್ದಾರೆ. ಇತರೆ ವರ್ಗದ 3,037 ವಿದ್ಯಾರ್ಥಿಗಳ ಪೈಕಿ 2,461 (ಶೇ 81.03) ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಸಮಬಲ:
ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಬಹುತೇಕ ಸಮಬಲ ಫಲಿತಾಂಶ ಬಂದಿದೆ. ಆದಾಗ್ಯೂ, ಪಟ್ಟಣ ಪ್ರದೇಶ ವಿದ್ಯಾರ್ಥಿಗಳು ಶೇ 0.53ರಷ್ಟು ಮೇಲುಗೈ ಸಾಧಿಸಿದ್ದಾರೆ.ಗ್ರಾಮೀಣ ಭಾಗದಲ್ಲಿ ಬಾಲಕರು (3174) ಹಾಗೂ ಬಾಲಕಿಯರು (3,096) ಸೇರಿದಂತೆ ಒಟ್ಟು 6,270 ವಿದ್ಯಾರ್ಥಿಗಳು ಹಾಜರಾಗಿದ್ದರು. ಇವರಲ್ಲಿ ಬಾಲಕರು (2511- ಶೇ 79.11) ಹಾಗೂ ಬಾಲಕಿಯರು (2653- ಶೇ 85.69) ಸೇರಿದಂತೆ ಒಟ್ಟು 5,164 ವಿದ್ಯಾರ್ಥಿಗಳು (ಶೇ 82.4) ಪಾಸಾಗಿದ್ದಾರೆ.

ಪಟ್ಟಣ ಪ್ರದೇಶದಲ್ಲಿ ಬಾಲಕರು (482) ಹಾಗೂ ಬಾಲಕಿಯರು (738) ಸೇರಿದಂತೆ ಒಟ್ಟು 1,220 ವಿದ್ಯಾರ್ಥಿಗಳು ಹಾಜರಾಗಿದ್ದರು. ಇವರಲ್ಲಿ ಬಾಲಕರು (381- ಶೇ 79.05) ಹಾಗೂ ಬಾಲಕಿಯರು (636- ಶೇ 86.81) ಸೇರಿದಂತೆ ಒಟ್ಟು 1,017 ವಿದ್ಯಾರ್ಥಿಗಳು (ಶೇ 82.93) ಪಾಸಾಗಿದ್ದಾರೆ.
 
ಶಾಲೆಗಳ ಫಲಿತಾಂಶ:
ಜಿಲ್ಲೆಯ 148 ಶಾಲೆಗಳ ಪೈಕಿ 97 ಶಾಲೆಗಳಲ್ಲಿ ಶೇ 80ಕ್ಕಿಂತಲೂ ಹೆಚ್ಚು ಫಲಿತಾಂಶ ಬಂದಿದೆ. 43 ಶಾಲೆಗಳಲ್ಲಿ ಶೇ 60ರಿಂದ 80ರಷ್ಟು ಫಲಿತಾಂಶ ಬಂದಿದೆ. 7 ಶಾಲೆಗಳಲ್ಲಿ ಶೇ 40ರಿಂದ 60ರಷ್ಟು ಫಲಿತಾಂಶ ಬಂದಿದೆ. ಶೇ 40ಕ್ಕಿಂತಲೂ ಕಡಿಮೆ ಫಲಿತಾಂಶ ಕೇವಲ ಒಂದೇ ಶಾಲೆಯಲ್ಲಿ ಬಂದಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT