ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಎಐ ‘ಎ’ ಚಾಂಪಿಯನ್‌

ಮಹಿಳಾ ಹಾಕಿ ಲೀಗ್‌ ಚಾಂಪಿಯನ್‌ಷಿಪ್‌
Last Updated 13 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕೊನೆಯ ಲೀಗ್‌ ಪಂದ್ಯದಲ್ಲಿ  ಡ್ರಾ ಸಾಧಿಸಿ ಅಗ್ರಸ್ಥಾನ ಪಡೆದ ಭಾರತ ಕ್ರೀಡಾ ಪ್ರಾಧಿಕಾರ ‘ಎ’ ತಂಡ ಮಹಿಳಾ ಹಾಕಿ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿತು.

ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆಯ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಕ್ರೀಡಾ ಪ್ರಾಧಿಕಾರ 1–1 ಗೋಲುಗಳಿಂದ ಡಿವೈಇಎಸ್‌ ‘ಎ’ ಎದುರು ಡ್ರಾ ಸಾಧಿಸಿತು. ಕ್ರೀಡಾ ಪ್ರಾಧಿಕಾರದ ಎಂ.ಎಸ್. ನಿಶ್ಚಿತಾ 15ನೇ ನಿಮಿಷದಲ್ಲಿ ಗೋಲು ಗಳಿಸಿದರು. ಇದೇ ನಿಮಿಷದಲ್ಲಿ ಬಿ.ಪಿ. ನಂದಿನಿ ಗೋಲು ತಂದಿತ್ತು ಸಮಬಲ ಸಾಧಿಸಿದರು. ಹಿಂದಿನ ಪಂದ್ಯಗಳಲ್ಲಿ ಕ್ರೀಡಾ ಪ್ರಾಧಿಕಾರ ಗೆಲುವು ಸಾಧಿಸಿದ್ದ ಕಾರಣ ಪ್ರಶಸ್ತಿ ಈ ತಂಡದ ಪಾಲಾಯಿತು.

ದಿನದ ಇನ್ನೊಂದು ಪಂದ್ಯದಲ್ಲಿ ಕ್ರೀಡಾ ಪ್ರಾಧಿಕಾರ ‘ಬಿ’ ತಂಡ 2–1 ಗೋಲುಗಳಿಂದ ಹುಬ್ಬಳ್ಳಿ ಹಾಕಿ ಕ್ಲಬ್‌ ಎದುರು ಜಯ ಸಾಧಿಸಿತು. ವಿಜಯೀ ತಂಡದ ಕೀರ್ತನಾ 23ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರೆ, ಎ.ಎ. ವಿಷ್ಮಾ 30ನೇ ನಿಮಿಷದಲ್ಲಿ ಎರಡನೇ ಗೋಲು ತಂದಿತ್ತರು.

ವೈಯಕ್ತಿಕ ಪ್ರಶಸ್ತಿಗಳು: ಅತ್ಯುತ್ತಮ ಗೋಲ್‌ ಕೀಪರ್: ನವನೀತಾ (ಆರ್‌ಡಿಟಿ ಹಾಕಿ ಕ್ಲಬ್‌್), ಡಿಫೆಂಡರ್‌: ಭಾಗ್ಯಶ್ರೀ (ಕ್ರೀಡಾ ಪ್ರಾಧಿಕಾರ ‘ಎ‘). ಹಾಫ್‌: ಕಾವ್ಯಶ್ರೀ (ಡಿವೈಇಎಸ್‌ ಮೈಸೂರು), ಫಾರ್ವರ್ಡ್‌: ಚೈತ್ರಾ (ವಾಸು ಕ್ಲಬ್‌) ಮತ್ತು ಟೂರ್ನಿಯ ಆಟಗಾರ್ತಿ: ಸುಷ್ಮಾ (ಕ್ರೀಡಾ ಪ್ರಾಧಿಕಾರ ‘ಎ’).

ಬೆಂಗಳೂರು ಯುನೈಟೆಡ್‌ಗೆ ಗೆಲುವು: ‍ಪುರುಷರ ‘ಸಿ’ ಡಿವಿಷನ್ ಹಾಕಿ ಲೀಗ್‌ ಚಾಂಪಿಯನ್‌ಷಿಪ್‌ನ ಶುಕ್ರವಾರದ ಪಂದ್ಯದಲ್ಲಿ ಬೆಂಗಳೂರು ಯುನೈಟೆಡ್‌ ಕ್ಲಬ್‌ ತಂಡ 10–0 ಗೋಲುಗಳಿಂದ ಜೋಸ್‌ ಕ್ಲಬ್‌ ಮೇಲೆ ಜಯ ಸಾಧಿಸಿತು. ಇನ್ನೊಂದು ಪಂದ್ಯದಲ್ಲಿ ಬಿಸಿವೈಎ ಕ್ಲಬ್‌ 10–0ರಲ್ಲಿ ಹಂಪಿನಗರ ಕ್ಲಬ್‌ ವಿರುದ್ಧ ಗೆಲುವು ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT