ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಎಪಿ ಕಾಯ್ದೆ ಜಾರಿವರೆಗೆ ಕಬ್ಬು ಕಳಿಸಲ್ಲ

Last Updated 9 ಅಕ್ಟೋಬರ್ 2012, 10:40 IST
ಅಕ್ಷರ ಗಾತ್ರ

ಮುಧೋಳ: `ರಿಕವರಿ ಆಧಾರದ ಮೇಲೆ ದರ ನಿಗದಿಗೊಳಿಸುವ ಎಸ್.ಎ.ಪಿ ಕಾಯ್ದೆಯನ್ನು ತಕ್ಷಣವೇ ರಾಜ್ಯ ಸರ್ಕಾರ ಜಾರಿ ತರಬೇಕು. ಈ ಬಾರಿ ಕನಿಷ್ಠ ಮುಂಗಡ ಹಣವಾಗಿ ರೂ. 3 ಸಾವಿರ ಕೊಡಬೇಕು ಅಲ್ಲಿಯವರೆಗೆ ಕಾರ್ಖಾನೆಗಳಿಗೆ ಕಬ್ಬು ಕಳಿಸಬೇಡಿ~ ಎಂದು ರೈತ ಸಂಘದ ಮುಖಂಡ ರಮೇಶ ಗಡದಣ್ಣವರ ರೈತರಿಗೆ ಕರೆ ನೀಡಿದರು.

ಸೋಮವಾರ ಇಲ್ಲಿನ ತಹಶೀಲ್ದಾರ ಕಚೇರಿ ಎದುರು ಸೇರಿದ ರೈತರನ್ನುದ್ದೇ ಶಿಸಿ ಮಾತನಾಡಿದ ಅವರು, 9ರಷ್ಟು ರಿಕವರಿ ಇದ್ದ ಪ್ರಿ ಟನ್ ಕಬ್ಬಿಗೆ ಸರ್ಕಾರ ರೂ. 1700 ಕೊಡಲು ಸೂಚಿಸಿತ್ತು, ಆದರೆ ಎಲ್ಲ ಕಾರ್ಖಾನೆಗಳ ಸರಾಸರಿ ರಿಕವರಿ 12 ರಷ್ಟಿದ್ದು, ಅದನ್ನು ಲೆಕ್ಕ ಹಾಕಿದರೆ ರೂ.3 ಸಾವಿರಕ್ಕೂ ಹೆಚ್ಚಾಗುತ್ತದೆ. ಮತ್ತು ಸಕ್ಕರೆ ಮಾರಾಟವಾದ ದರದ ಪ್ರತಿಶತ 70ರಷ್ಟನ್ನು ಪ್ರಥಮ ಕಂತಿನ ಹಣವಾಗಿ ಪಾವತಿಸಬೇಕು ಎಂಬ ನೀತಿ ಇದೆ.

ಇದೆಲ್ಲವನ್ನು ಗಾಳಿಗೆ ತೂರಿದ ಕಾರ್ಖಾನೆಗಳು, ತಮಗೆ ತೋಚಿದಷ್ಟು ದರವನ್ನು ತಾವೇ ನಿಗದಿಪಡಿಸುವುದು ಯಾವ ನ್ಯಾಯ? ಇದಕ್ಕೆಲ್ಲ ಮುಖ್ಯ ಕಾರಣ ಅವರಿಗೆ ಸರ್ಕಾರದಿಂದ ಯಾವುದೇ ನೀತಿ ನಿಯಮಗಳಿಲ್ಲ ಮತ್ತು ಸರ್ಕಾರ ರೈತ ಪರವಾಗಿರದೆ ಕಾರ್ಖಾನೆಗಳ ಮಾಲೀಕರ ಪರವಾಗಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ದೂರಿದರು.

2010-11ನೇ ಸಾಲಿನಲ್ಲಿ ಹಾಗೂ 2001-12 ನೇ ಸಾಲಿನಲ್ಲಿ ರೈತರಿಗೆ ಕೊಡಬೇಕಾದ ಹಣ ಬಾಕಿ ಇದ್ದು, ತಕ್ಷಣವೇ ಬ್ಯಾಂಕಿನ ಬಡ್ಡಿ ಸೇರಿಸಿ ಪಾವತಿಸಬೇಕು ಎಂದು ಒತ್ತಾಯಿಸಿದರು.

ರೈತರು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಭೆ ಸೇರಿ ಅಲ್ಲಿಂದ ತಹಶೀಲ್ದಾರ ಕಚೇರಿಗೆ ತೆರಳಿ ಜಮಖಂಡಿ ಉಪವಿಭಾಗಾಧಿಕಾರಿ ಅಶೋಕ ದುಡಗುಂಟಿ ಅವರಿಗೆ ಮನವಿ ಸಲ್ಲಿಸಿದರು.

ಉಪವಿಭಾಗಾಧಿಕಾರಿ ದುಡಗುಂಟಿ ಮಾತನಾಡಿ,  `ಅಧಿಕಾರಿಯಾಗುವುದ ಕ್ಕಿಂತ ಮೊದಲು ನಾನೂ ಒಬ್ಬ ರೈತನ ಮಗ. ನಂತರ ಅಧಿಕಾರಿ ನಿಮ್ಮ ಸಮಸ್ಯೆ ನನಗೆ ಅರ್ಥವಾಗುತ್ತದೆ ಎಂದು ಹೇಳಿ ಜಿಲ್ಲಾಧಿಕಾರಿಗಳು ಕಳಿಸಿದ ಸಂದೇಶವನ್ನು ರೈತರಿಗೆ ಓದಿ ಹೇಳಿ  ಇದೇ 17ರಂದು ಮಧ್ಯಾಹ್ನ 12ಕ್ಕೆ ಮುಧೋಳ ಪುರಸಭೆಯಲ್ಲಿ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಕಾರ್ಖಾ ನೆಯ ಆಡಳಿತ ಮಂಡಳಿಯವರಿಗೆ, ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿ ಗಳೊಂದಿಗೆ ಚರ್ಚಿಸಲಾಗುವುದು ಎಂದರು.

ಈ ಸಭೆಯಲ್ಲಿ 2012-13ನೇ ಸಾಲಿನಲ್ಲಿ ಕಬ್ಬು ನುರಿಸುವ ಬಗ್ಗೆ ಮತ್ತು ದರದ ಬಗ್ಗೆ, 2009-10, 2010-11 ಹಾಗೂ 2011-12ನೇ ಹಂಗಾಮಿ ನಲ್ಲಿ ಬಾಕಿ ಉಳಿದ ಹಣದ ಬಗ್ಗೆ ಮತ್ತು ಅಧ್ಯಕ್ಷರ ಅಪ್ಪಣೆಯ ಮೇರೆಗೆ ಇನ್ನೂ ಹಲವಾರು ವಿಷಯಗಳನ್ನು ಚರ್ಚಿಸಲಾಗುವುದು ಮತ್ತು ಈ ಸಭೆಗೆ ಕಾರ್ಖಾನೆಗಳ ಮಾಲೀಕರು ಅಥವಾ ವ್ಯವಸ್ಥಾಪಕ ನಿರ್ದೇಶಕರು ಆಗಮಿಸಬೇಕು ಅವರ ಪ್ರತಿನಿಧಿಗಳನ್ನು ಕಳಿಸಬಾರದು ಎಂದು ಸೂಚಿಸಿ, ಜಿಲ್ಲಾಧಿಕಾರಿಗಳ ಪತ್ರದಲ್ಲಿ ಅಡಕವಾದ ವಿಷಯಗಳನ್ನು ತಿಳಿಸಿದರು.


ಸಭೆಯಲ್ಲಿ ನಾಗೇಶ ಸೋರಗಾಂವಿ, ಸುಭಾಷ ಶಿರಬೂರ, ವುಜಾಪುರ ಜಿಲ್ಲೆಯ ರೈತ ನಾಯಕ ಬಸವರಾಜ ಕುಂಬಾರ, ಮಾಜಿ ಶಾಸಕ ಬಿ.ಜಿ. ಜಮಖಂಡಿ, ಶಂಕರ ನಾಯಕ, ರೈತ ಮುಖಂಡ ರಾದ ಗಣಪತರಾವ ದೇಶಪಾಂಡೆ, ಎಸ್.ಆರ್. ಪಾಟೀಲ, ಮುತ್ತಪ್ಪ ಕೋಮಾರ, ಪ್ರಕಾಶ ಲಿಂಬಿಕಾಯಿ,ರವಿ ಪಾಟೀಲ (ಚಿಂಚಖಂಡಿ), ಭಂಡು ಘಾಟಗೆ, ಆನಂದ ಪಾಟೀಲ, ಮಹಾಂತೇಶ ಕಬ್ಬೂರ, ಶ್ರಿಶೈಲ ತೇಲಿ, ಸದಾಶಿವ ಕುಂಚನೂರ, ಮುತ್ತು ಹೊಸಕೋಟಿ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಇದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT