ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಜಿಲ್ಲೆಯಲ್ಲಿ ಶೇ 72.95 ಫಲಿತಾಂಶ:31ನೇ ಸ್ಥಾನಕ್ಕೆ ಕುಸಿದ ಜಿಲ್ಲೆ

Last Updated 18 ಮೇ 2012, 7:40 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 25ನೇ ಸ್ಥಾನದಲ್ಲಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯು ಪ್ರಸಕ್ತ ಸಾಲಿನಲ್ಲಿ 31ನೇ ಸ್ಥಾನಕ್ಕೆ ಕುಸಿದಿದೆ. ಒಟ್ಟು ಶೇ 72.95ರಷ್ಟು ಫಲಿತಾಂಶ ದಾಖಲಾಗಿದೆ. ಜಿಲ್ಲೆಯಲ್ಲಿರುವ 242 ಶಾಲೆಗಳ ಪೈಕಿ 47 ಶಾಲೆಗಳು ಶೇ.100ರಷ್ಟು ಫಲಿತಾಂಶ ಗಳಿಸಿವೆ. ಅವುಗಳಲ್ಲಿ 7 ಸರ್ಕಾರಿ, 1 ಅನುದಾನಿತ ಮತ್ತು 39 ಅನುದಾನರಹಿತ ಶಾಲೆಗಳು ಒಳಗೊಂಡಿವೆ.

ಒಟ್ಟು 707 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಗಳಿಸಿದ್ದಾರೆ. 4205 ಮಂದಿ ಪ್ರಥಮ ದರ್ಜೆ, 2594  ದ್ವಿತೀಯ ದರ್ಜೆ ಮತ್ತು 4291 ತೃತೀಯ ದರ್ಜೆ ಪಡೆದಿದ್ದಾರೆ. ಜಿಲ್ಲೆಯಾದ್ಯಂತ ಪರೀಕ್ಷೆಗೆ ಹಾಜರಾದ 16,268 ವಿದ್ಯಾರ್ಥಿಗಳ ಪೈಕಿ 11,868 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆದ 8492 ಬಾಲಕರಲ್ಲಿ 6019 ಮಂದಿ ಉತ್ತೀರ್ಣರಾಗಿದ್ದಾರೆ.

ಪರೀಕ್ಷೆಗೆ ಹಾಜರಾದ 7776 ಬಾಲಕಿಯರಲ್ಲಿ 5849 ಮಂದಿ ಉತ್ತೀರ್ಣರಾಗಿದ್ದಾರೆ. ಒಟ್ಟಾರೆ 2473 ಬಾಲಕರು ಮತ್ತು 1927 ಬಾಲಕಿಯರು ಅನುತ್ತೀರ್ಣರಾಗಿದ್ದಾರೆ.ಪರೀಕ್ಷೆ ಬರೆದ ನಗರ ಪ್ರದೇಶದ 2570 ಬಾಲಕರ ಪೈಕಿ 1800 ಮಂದಿ ಉತ್ತೀರ್ಣಗೊಂಡಿದ್ದರೆ, ಗ್ರಾಮೀಣ ಪ್ರದೇಶದ 5922 ಬಾಲಕರ ಪೈಕಿ 4219 ಮಂದಿ ಉತ್ತೀರ್ಣರಾಗಿದ್ದಾರೆ.

ಪರೀಕ್ಷೆ ಬರೆದ ನಗರ ಪ್ರದೇಶದ 2373 ಬಾಲಕಿಯರ ಪೈಕಿ 1776 ಮಂದಿ ಉತ್ತೀರ್ಣರಾಗಿದ್ದರೆ, ಗ್ರಾಮೀಣ ಪ್ರದೇಶದ 5403 ಬಾಲಕಿಯರ ಪೈಕಿ 4073 ಮಂದಿ ಉತ್ತೀರ್ಣರಾಗಿದ್ದಾರೆ.ಸರ್ಕಾರಿ ಶಾಲೆಗಳಿಂದ ಒಟ್ಟು 4004 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ 2708 ಮಂದಿ ಉತ್ತೀರ್ಣರಾಗಿದ್ದಾರೆ. ಒಟ್ಟು ಶೇ 67.63 ಫಲಿತಾಂಶ ದಾಖಲಾಗಿದೆ. ಅನುದಾನಿತ ಶಾಲೆಗಳಿಂದ ಒಟ್ಟು 2199 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ 1335 ಮಂದಿ ಉತ್ತೀರ್ಣರಾಗಿದ್ದಾರೆ. ಒಟ್ಟು ಶೇ 60.71 ಫಲಿತಾಂಶ ದಾಖಲಾಗಿದೆ.

ಅನುದಾನರಹಿತ ಶಾಲೆಗಳಿಂದ 2289 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ 1976 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು 86.33 ಫಲಿತಾಂಶ ದಾಖಲಾಗಿದೆ.ಜಿಲ್ಲೆಯಾದ್ಯಂತ ಇರುವ 242 ಶಾಲೆಗಳಲ್ಲಿ 47 ಸರ್ಕಾರಿ, 7 ಅನುದಾನಿತ ಮತ್ತು 83 ಅನುದಾನರಹಿತ ಶಾಲೆಗಳು ಶೇ 80ಕ್ಕೂ ಹೆಚ್ಚಿನ ಫಲಿತಾಂಶ ಗಳಿಸಿವೆ. 36 ಸರ್ಕಾರಿ, 10 ಅನುದಾನಿತ ಮತ್ತು 9 ಅನುದಾನರಹಿತ ಶಾಲೆಗಳು ಶೇ.60 ರಿಂದ 80ರಷ್ಟು ಫಲಿತಾಂಶ ದಾಖಲಿಸಿವೆ.
 
24 ಸರ್ಕಾರಿ, 8 ಅನುದಾನಿತ ಮತ್ತು 5 ಅನುದಾನರಹಿತ ಶಾಲೆಗಳು ಶೇ.40 ರಿಂದ 60ರಷ್ಟು ಫಲಿತಾಂಶ ಗಳಿಸಿವೆ. 3 ಸರ್ಕಾರಿ, 4 ಅನುದಾನಿತ ಮತ್ತು 6 ಅನುದಾನ ರಹಿತ ಶಾಲೆಗಳು ಶೇ.40ರ ಒಳಗೆ ಫಲಿತಾಂಶ ದಾಖಲಿಸಿವೆ. ಒಂದು ಅನುದಾನರಹಿತ ಶಾಲೆಯು ಶೂನ್ಯ ಫಲಿತಾಂಶ ದಾಖಲಿಸಿದೆ.

ಪರೀಕ್ಷೆ ಬರೆದ 1738 ಪುರುಷರ ಪುನರ್ ಪರೀಕ್ಷಾರ್ಥಿಗಳ ಪೈಕಿ 423 ಮಂದಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆದ 671 ಮಹಿಳಾ ಪುನರ್ ಪರೀಕ್ಷಾರ್ಥಿಗಳ ಪೈಕಿ 204 ಮಂದಿ ಉತ್ತೀರ್ಣರಾಗಿದ್ದಾರೆ. ಒಟ್ಟು ಶೇ .6.03ರಷ್ಟು ಫಲಿತಾಂಶ ದಾಖಲಾಗಿದೆ. ಪರೀಕ್ಷೆಗೆ ಹಾಜರಾದ 5 ಅಂಧ ಬಾಲಕರ ಪೈಕಿ 4 ಮಂದಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಹಾಜರಾದ 4 ಅಂಧ ಬಾಲಕಿಯರಲ್ಲಿ 3 ಮಂದಿ ಉತ್ತೀರ್ಣರಾಗಿದ್ದಾರೆ.
 

                                   ಶೈಕ್ಷಣಿಕ ಪ್ರಗತಿ ಹಿನ್ನೆಡೆ: ವಿಷಾದ

ಚಿಕ್ಕಬಳ್ಳಾಪುರ: ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ಜಿಲ್ಲೆಯು 31ನೇ ಸ್ಥಾನ ಗಳಿಸಿರುವುದು ಅಚ್ಚರಿ ತಂದಿದೆ. ವಿದ್ಯಾರ್ಥಿಗಳಿಗೆ ಪ್ರೇರೇಪಿಸುವುದರ ಜೊತೆಗೆ ತರಬೇತಿ ನೀಡಿದರೂ ಜಿಲ್ಲೆಯ ಸ್ಥಾನವು ಕುಸಿದಿರುವುದು ಆಘಾತ ಮೂಡಿಸಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಜಿತ್‌ಪ್ರಸಾದ್ ತಿಳಿಸಿದರು.

`ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಉತ್ತಮ ಫಲಿತಾಂಶ ಗಳಿಸಲು ಸರ್ವಪ್ರಯತ್ನ ಮಾಡಲಾಗುವುದು~ ಎಂದು ಅವರು `ಪ್ರಜಾವಾಣಿ~ಗೆ ತಿಳಿಸಿದರು.`ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪ್ರಶ್ನೆಪತ್ರಿಕೆಯು ಅಕ್ರಮವಾಗಿ ಬಹಿರಂಗಗೊಂಡಿವೆ ಎಂಬ ವದಂತಿಯು ವಿದ್ಯಾರ್ಥಿಗಳ ಮೇಲೆ ಗಂಭೀರ ಪರಿಣಾಮ ಬೀರಿತು~ ಎಂದು ಅವರು ತಿಳಿಸಿದರು.
 
`ಉಪನಿರ್ದೇಶಕನಾಗಿ ನಾನು ನವೆಂಬರ್‌ನಲ್ಲಿ ಅಧಿಕಾರ ವಹಿಸಿಕೊಂಡೆ. ಪರೀಕ್ಷೆಯ ಅಂತಿಮ ದಿನಗಳಲ್ಲಿ ವಿವಿಧ ಕ್ರಮಗಳನ್ನು ಕೈಗೊಂಡೆವು. ಆದರೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಜೂನ್‌ನಿಂದಲೇ ವಿಶೇಷ ತರಬೇತಿ ತರಗತಿಗಳನ್ನು ಆರಂಭಿಸುತ್ತೇವೆ ಎಂದು ತಿಳಿಸಿದರು.

ಕ್ಷಣಕ್ಷಣವೂ ಕುತೂಹಲ, ಹರ್ಷ, ಆತಂಕ
ಚಿಕ್ಕಬಳ್ಳಾಪುರ:  ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶವು 3 ಗಂಟೆ ಸುಮಾರಿಗೆ ವೆಬ್‌ಸೈಟ್‌ಗಳಲ್ಲಿ ಪ್ರಕಟಗೊಳ್ಳಲಿದೆ ಎಂಬ ವಿಷಯ ತಿಳಿದಿದ್ದರೂ ಉತ್ಸಾಹಭರಿತರಾಗಿದ್ದ ವಿದ್ಯಾರ್ಥಿಗಳು ಮತ್ತು ಅವರ ಸಂಬಂಧಿಕರು ಬೆಳಿಗ್ಗೆಯೇ ಸೈಬರ್‌ಸೆಂಟರ್‌ಗಳಲ್ಲಿ ಜಮಾಯಿಸಿದ್ದರು.

ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಪತ್ತೆ ಮಾಡುವುದನ್ನು ಅರಿತಿದ್ದ ಕೆಲವರು ನೇರವಾಗಿಯೇ ಕಂಪ್ಯೂಟರ್ ಬಳಿ ಹೋಗಿ ಫಲಿತಾಂಶವನ್ನು ಪರಿಶೀಲಿಸುತ್ತಿದ್ದರೆ, ಅದನ್ನು ಅರಿಯದಿದ್ದವರು ಸೈಬರ್‌ಸೆಂಟರ್ ಮಾಲೀಕರಿಗೆ ದುಂಬಾಲು ಬೀಳುತ್ತಿದ್ದರು.

`ಬೆಳಿಗ್ಗೆಯಿಂದ ಸುಮಾರು 300 ವಿದ್ಯಾರ್ಥಿಗಳು ಆಗಮಿಸಿದ್ದರು. ಶೇ 70ರಷ್ಟು ಮಂದಿ ವಿದ್ಯಾರ್ಥಿಗಳಾಗಿದ್ದರೆ, ಶೇ 30ರಷ್ಟು ಮಂದಿ ಪೋಷಕರು  ಎಂದು ಸೈಬರ್ ಮಾಲೀಕ ಆರ್.ಮನೋಹರ್ `ಪ್ರಜಾವಾಣಿ~ಗೆ ತಿಳಿಸಿದರು.

ಮೊಬೈಲ್‌ಫೋನ್‌ನಲ್ಲಿ ತಮ್ಮ ಪರೀಕ್ಷಾ ನೋಂದಣಿ ಸಂಖ್ಯೆಯನ್ನು ದಾಖಲಿಸಿ, ತಮ್ಮ ಫಲಿತಾಂಶ ಪಡೆದುಕೊಳ್ಳುತ್ತಿದ್ದರು~ ಎಂದು ಶಿಕ್ಷಕ ಕೃಷ್ಣಮೂರ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT