ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಐಎ–ಟಾಟಾ ‘ವಿಮಾನಯಾನ’ ಮೈತ್ರಿ

Last Updated 19 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹದಿನೆಂಟು ವರ್ಷಗಳ ಹಿಂದೆ ವಿಮಾನಯಾನ ಸಂಸ್ಥೆ ಆರಂಭಿಸಲು ಯತ್ನಿಸಿ ವಿಫಲವಾಗಿದ್ದ ಟಾಟಾ ಸಮೂಹ, ಆ ಕನಸನ್ನು ಕಡೆಗೂ ನನಸು ಮಾಡಿಕೊಳ್ಳಲು ಸಿದ್ಧವಾಗಿದೆ. ಭಾರತದಲ್ಲಿ ವಿಮಾನಯಾನ ಸಂಸ್ಥೆ ಸ್ಥಾಪನೆಗಾಗಿ ಟಾಟಾ ಸಮೂಹ ಸಿಂಗಪುರ ಏರ್‌ಲೈನ್ಸ್‌ ಕಂಪೆನಿ (ಎಸ್‌ಐಎ) ಜತೆ ಕೈಜೋಡಿಸಿದ್ದು, 10 ಕೋಟಿ ಅಮೆರಿಕನ್‌ ಡಾಲರ್‌ (ಈಗಿನ ಲೆಕ್ಕದಲ್ಲಿ ರೂ.618 ಕೋಟಿ) ಬಂಡವಾಳ ತೊಡಗಿ ಸಲು ಸಜ್ಜಾಗಿದೆ.

ಉಪ್ಪು–ಉಕ್ಕು ತಯಾರಿಕೆಯಿಂದ ಹಿಡಿದು ಸಾಫ್ಟ್‌ವೇರ್‌ ಕಂಪೆನಿವರೆಗೂ ತೊಡಗಿಸಿಕೊಂಡಿರುವ ಟಾಟಾ ಸಮೂಹ, ಇದೀಗ ವಿಮಾನಯಾನ ಉದ್ಯಮಕ್ಕೂ ಕಾಲಿಡಲಿದೆ. ನೂತನ ವಿಮಾನಯಾನ ಕಂಪೆನಿಯಲ್ಲಿ ಟಾಟಾ ಸಮೂಹ ಶೇ 51ರಷ್ಟು ಮತ್ತು ಸಿಂಗಪುರ ಏರ್‌ಲೈನ್ಸ್‌ ಶೇ 49ರಷ್ಟು ಷೇರುಪಾಲು ಹೊಂದಿರಲಿವೆ. ಎರಡೂ ಸಂಸ್ಥೆಗಳು ಆರಂಭಿಕ ಬಂಡವಾಳವಾಗಿ 10 ಕೋಟಿ ಡಾಲರ್‌ ತೊಡಗಿಸುತ್ತಿದ್ದು, ಮುಂದಿನ ವರ್ಷ ಕಂಪೆನಿಯ ವಿಮಾನ ಹಾರಾಟ ಆರಂಬಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT