ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಡಿಎಂ ವೈದ್ಯಕೀಯ ಕಾಲೇಜು ಪ್ರಥಮ

ಬಿವಿಬಿ: ಅಂತರಕಾಲೇಜು ಅಣಕು ಸಂಸತ್ ಚರ್ಚಾಸ್ಪರ್ಧೆ
Last Updated 3 ಏಪ್ರಿಲ್ 2013, 6:01 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ನಡೆದ ಅಂತರಕಾಲೇಜು `ಅಣುಕು ಸಂಸತ್' ಎಂಬ ಚರ್ಚಾಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಧಾರವಾಡದ ಎಸ್‌ಡಿಎಂ ವೈದ್ಯಕೀಯ ಕಾಲೇಜು ಪ್ರಥಮ ಬಹುಮಾನ ಪಡೆಯಿತು. ಬಿವಿಬಿ ಎಂಜಿನಿಯರಿಂಗ್ ಕಾಲೇಜು ರನ್ನರ್ಸ್‌ಅಪ್ ಪುರಸ್ಕೃತವಾಯಿತು.

ಪ್ರಥಮ ಬಹುಮಾನ ಪಡೆದ ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ತಂಡಕ್ಕೆ ಪಾರಿತೋಷಕ ಹಾಗೂ ರೂ 6,000 ನಗದು ಬಹುಮಾನ ನೀಡಲಾಯಿತು. ಈ ತಂಡದಲ್ಲಿ ಚೇತನ್ ದೇಶಪಾಂಡೆ, ಗವಿಸಿದ್ಧೇಶ ರೋಣದ, ಕಾರ್ತಿಕ್ ಶ್ರೀನಿವಾಸ, ದೀಪಕ್ ಬೆಟ್ಟದೂರ, ದೈವಿಕ್ ಶೆಟ್ಟಿ, ಕಾರ್ತಿಕ್ ಶೆಟ್ಟಿ, ಕಾರ್ತಿಕ್ ಅಯ್ಯರ್ ಹಾಗೂ ಸುಹಾಸ ಶೆಟ್ಟಿ ಭಾಗವಹಿಸಿದ್ದರು.

ರನ್ನರ್ಸ್‌ಅಪ್ ಪಡೆದ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ತಂಡಕ್ಕೆ ರೂ 4,000 ನಗದು ಬಹುಮಾನ ವಿತರಿಸಲಾಯಿತು. ಸ್ಪರ್ಧೆಯಲ್ಲಿ ಅತ್ಯುತ್ತಮವಾಗಿ ಮಾತನಾಡಿದರೆಂದು ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಎನ್.ಎಸ್. ಮಿರಜಕರ ಅವರಿಗೆ ಪಾರಿತೋಷಕ ನೀಡಲಾಯಿತು. ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ಎಸ್.ಬಿ. ಬುರ್ಲಿ ಬಹುಮಾನಗಳನ್ನು ವಿತರಿಸಿದರು.

ದಕ್ಷಿಣ ಏಷ್ಯಾದಲ್ಲೇ ಭಾರತ ಬಿಗ್ ಬ್ರದರ್ ಹಾಗೂ ಭಾರತದಲ್ಲಿ ಶ್ರೀಮಂತರಿಗೆ ಕಾನೂನು ವ್ಯವಸ್ಥೆ ಸುಲಭವಾಗಿದೆಯೇ ಕುರಿತು ಚರ್ಚೆಗೆ ವಿಷಯಗಳನ್ನು ನೀಡಲಾಗಿತ್ತು. ಮಂಜುನಾಥ ಹಿರೇಮಠ ಹಾಗೂ ವಿಶ್ವನಾಥ ಪಾಟೀಲ ನಿರ್ಣಾಯಕರಾಗಿ ಭಾಗವಹಿಸಿದ್ದರು.

ಎಲೆಕ್ಟ್ರಾನಿಕ್ಸ್ ಅಂಡ್ ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥ ಎ.ಬಿ. ರಾಜು ಹಾಜರಿದ್ದರು. ಉಪನ್ಯಾಸಕಿ ಅನುಪಮಾ ಇಟಗಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಪಂಚಾಕ್ಷರಿ ಹೆಬ್ಬಳ್ಳಿ, ರಮ್ಯಾ ಸಾನು, ಲಕ್ಷ್ಮಿ ಬಸನಗೌಡ ಹಾಗೂ ಹನುಮಂತಗೌಡ ಪಾಟೀಲ ಸ್ಪರ್ಧೆಯ ಸಂಯೋಜಕರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT