ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಬಿಐ ಗೃಹಸಾಲ ತುಸು ಅಗ್ಗ

Last Updated 19 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಭಾರತೀಯ ಸ್ಟೇಟ್‌ ಬ್ಯಾಂಕ್‌(ಎಸ್‌ಬಿಐ) ಗೃಹ ಸಾಲದ ಬಡ್ಡಿದರವನ್ನು ಗರಿಷ್ಠ ಶೇ 0.40ರವರೆಗೂ ತಗ್ಗಿಸಿ ಗುರುವಾರ ಪ್ರಕಟಣೆ ಹೊರಡಿಸಿದೆ. ಅಲ್ಲದೆ, ಮಹಿಳೆಯರು ಗೃಹ ಸಾಲ ಪಡೆದಲ್ಲಿ ಬಡ್ಡಿದರ ಹೆಚ್ಚುವರಿಯಾಗಿ ಶೇ 0.05ರಷ್ಟು (ಶೇ 0.45ರಷ್ಟು) ಕಡಿಮೆ ಆಗಲಿದೆ.

ಹೊಸದಾಗಿ ಗೃಹ ಸಾಲ ಪಡೆಯುವವರಿಗಷ್ಟೆ ಇದರ ಪ್ರಯೋಜನ ಲಭ್ಯವಾಗಲಿದೆ ಎಂದು ತಿಳಿಸಿದೆ. ಸದ್ಯ ‘ಎಸ್‌ಬಿಐ’, ₨75 ಲಕ್ಷಕ್ಕಿಂತ ಕಡಿಮೆ ಮತ್ತು ₨ 75 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ್ದು ಎಂಬ ಎರಡು ಶ್ರೇಣಿಗಳಲ್ಲಿ ಗೃಹ ಸಾಲವನ್ನು ವಿತರಿಸುತ್ತಿದೆ. ಗುರುವಾರ ಪ್ರಕಟಿಸಿದ ಹೊಸ ಬಡ್ಡಿದರ ಪ್ರಕಾರ ₨75 ಲಕ್ಷಕ್ಕಿಂತ ಕಡಿಮೆ ಮೊತ್ತದ ಗೃಹ ಸಾಲ ಪಡೆಯು ವವರಿಗೆ ಶೇ 10.15ರಷ್ಟು ಬಡ್ಡಿ (ಈವರೆಗೆ ಶೇ 10.50ರಷ್ಟಿತ್ತು) ಇರ ಲಿದೆ. ಮಹಿಳೆಯರಿಗಾದರೆ ಶೇ 10.10ರಷ್ಟು ಬಡ್ಡಿದರವಿರಲಿದೆ.

₨75 ಲಕ್ಷಕ್ಕಿಂತ ಅಧಿಕ ಸಾಲ ಪಡೆ ಯುವವರಿಗೆ ಶೇ 10.30ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಮಹಿಳೆಯರಿಗೆ ಶೇ 10.25ರಷ್ಟು ಬಡ್ಡಿ ಇರಲಿದೆ. 30 ವರ್ಷಗಳ ಅವಧಿಗೆ ₨1 ಲಕ್ಷ  ಗೃಹಸಾಲಕ್ಕೆ ಈವರೆಗೆ ಇದ್ದ ₨900 ಗೃಹ ಸಾಲದ ಸಮಾನ ಮಾಸಿಕ ಕಂತು, ಹೊಸ ಬಡ್ಡಿದರ ಪ್ರಕಾರ ₨889ಕ್ಕೆ (ಮಹಿಳೆಯರಿಗಾದರೆ ಶೇ 885ಕ್ಕೆ) ತಗ್ಗಲಿದೆ ಎಂದು ಬ್ಯಾಂಕ್‌ ಪ್ರಕಟಣೆ ಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT