ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಬಿಐ ಬ್ಯಾಂಕ್‌ನಿಂದ ಫ್ಯಾನ್ ವಿತರಣೆ

Last Updated 17 ಡಿಸೆಂಬರ್ 2012, 7:24 IST
ಅಕ್ಷರ ಗಾತ್ರ

ರಾಣೆಬೆನ್ನೂರು:ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.7 ಮತ್ತು 8ಕ್ಕೆ 2012ನೇ ಸಾಲಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ದೇಣಿಗೆಯಾಗಿ ಶುದ್ಧ ಕುಡಿಯುವ ನೀರಿನ ಯಂತ್ರ ಹಾಗೂ ಫ್ಯಾನುಗಳನ್ನು ವಿತರಿಸಲಾಯಿತು.

ಎಸ್‌ಬಿಐ ಶಾಖೆಯ ವ್ಯವಸ್ಥಾಪಕ ಐ.ಸಿ. ಅಣ್ಣಿಗೇರಿ ಅವರು ಶಾಲೆ ಮುಖ್ಯ ಶಿಕ್ಷಕರಿಗೆ ಶುದ್ಧ ಕುಡಿಯುವ ನೀರಿನ ಯಂತ್ರ ಹಾಗೂ ಫ್ಯಾನುಗಳನ್ನು ವಿತರಿಸಿ ಮಾತನಾಡಿ, ನಮ್ಮ ಬ್ಯಾಂಕ್‌ವಯಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತದೆ. ವಿದ್ಯಾರ್ಥಿಗಳು ಈ ಸಲಕರಣೆಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕೆಂದರು.

ಕ್ಷೇತ್ರಶಿಕ್ಷಣಾಧಿಕಾರಿ ಕೆ. ಲಕ್ಷ್ಮಣ ಮಾತನಾಡಿ, ದಾನ ಮಾಡುವುದರಿಂದ ಗೌರವ ಬರುತ್ತದೆ. ಹಣ ಗಳಿಕೆಯಿಂದ ಏನು ಸಾಧ್ಯವಿಲ್ಲ. ದಾನ ಮಾಡುವುದರಿಂದ ಅವರ ಮಕ್ಕಳಿಗೆ ಪುಣ್ಯ ಬರುತ್ತದೆ ಎಂದರು.  ಇದೇ ಸಂದರ್ಭದಲ್ಲಿ ಈ ಶಾಲೆಯ ಹಳೇ ವಿದ್ಯಾರ್ಥಿನಿ ಲಲಿತಾ ಸುರೇಶ ಅವರು ಎರಡು ಫ್ಯಾನುಗಳನ್ನು ದೇಣಿಗೆಯಾಗಿ ನೀಡಿದರು.

ನಗರಸಭೆ ಸದಸ್ಯೆ ಶಾರದಾ ಆನ್ವೇರಿ, ಸಿ.ಟಿ. ಸುರೇಶ, ಎಸ್.ಬಿ. ಸಣ್ಣಕ್ಕಿ ಹಾಗೂ ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ಕುಬೇರಪ್ಪ ಕೊಂಡಜ್ಜಿ ಅಧ್ಯಕ್ಷತೆ ವಸಿದ್ದರು. ಜೆ.ಜಿ. ಗವ್ವೇನವರ ಸ್ವಾಗತಿಸಿದರು. ಶಿವಾನಂದ ಮೇಟಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ವೈ.ಎಸ್. ಪಾಟೀಲ ನಿರೂಸಿದರು. ಪಿ.ಎ. ಹವಳದ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT