ಮುಂಬೈ (ಪಿಟಿಐ): ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ಗೆ 6000 ಕೋಟಿಗಳಷ್ಟು ಬಂಡವಾಳ ನೆರವನ್ನು ಇದೇ ಮಾರ್ಚ್ ಅಂತ್ಯದ ಹೊತ್ತಿಗೆ ಒದಗಿಸಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.
ಆದ್ಯತಾ ಷೇರುಗಳ ಮೂಲಕ ನಮಗೆ ಬೇಕಾದ ಬಂಡವಾಳ ಪಡೆಯುತ್ತೇವೆ ಎಂದು `ಎಸ್ಬಿಐ~ ಅಧ್ಯಕ್ಷ ಪ್ರತೀಪ್ ಚೌಧರಿ ಅವರು ಹೇಳಿದ್ದಾರೆ.