ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕತಾ ಓಟಕ್ಕೆ ನೂರಾರು ಮಂದಿ

Last Updated 16 ಡಿಸೆಂಬರ್ 2013, 6:40 IST
ಅಕ್ಷರ ಗಾತ್ರ

ಕೋಲಾರ: ಸರ್ದಾರ್ ವಲ್ಲಭಭಾಯಿ ಪಟೇಲ್ ಪುಣ್ಯತಿಥಿ ಪ್ರಯುಕ್ತ ನಗರ­ದಲ್ಲಿ ಭಾನುವಾರ ಏರ್ಪಡಿಸಿದ್ದ ಏಕತಾ ಓಟದಲ್ಲಿ ಎಲ್ಲಾ ವಯಸ್ಸಿನವರೂ ಉತ್ಸಾಹದಿಂದ ಪಾಲ್ಗೊಂಡರು.

ಮಹಿಳೆಯರು, ಮಕ್ಕಳು ಸೇರಿದಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳು, ಬಿಜೆಪಿ ಮುಖಂಡರು, ಕಾರ್ಯಕರ್ತ­ರೆಲ್ಲರೂ ಏಕತಾ ಓಟದ ಮೂಲಕ ನಗರದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ವಿಶೇಷವಾಗಿ ಸ್ಮರಿಸಿದರು.

‘ಏಕ್ ಭಾರತ್ -ಶ್ರೇಷ್ಠ್‌ ಭಾರತ್, ಜೈ ಜವಾನ್, -ಜೈ ಕಿಸಾನ್, ರೈತ ನಾಯಕ- ಲೋಹ ಪುರುಷ ಸರ್ದಾರ್ ವಲ್ಲಭಭಾಯಿ ಪಟೇಲ್ ಕಿ  ಜೈ, ವಂದೇ ಮಾತರಂ,- ಭಾರತ್ ಮಾತಾಕಿ ಜೈ-, ಏಕತೆಗಾಗಿ ಓಟ’ ಘೋಷಣೆಗಳು ಓಟದುದ್ದಕ್ಕೂ ಮೊಳಗಿದವು. ಓಟಗಾ­ರರು ಇವೇ ಘೋಷಣಾ ಬರಹಗಳುಳ್ಳ ಟೀ ಶರ್ಟ್ ತೊಟ್ಟು ಗಮನ ಸೆಳೆದರು.

ಓಟವು ಪೆಟ್ರೋಲ್ ಬಂಕ್ ವೃತ್ತ, ಶಾರದಾ ಟಾಕೀಸ್ ರಸ್ತೆ, ಬಸ್ ನಿಲ್ದಾಣ ವೃತ್ತ, ಕಾಳಮ್ಮ ಗುಡಿ ಬೀದಿ, ಪ್ರಭಾ ಟಾಕೀಸ್ ರಸ್ತೆ, ಎಂ.ಜಿ.ರಸ್ತೆ, ಕಠಾರಿಪಾಳ್ಯ ರಸ್ತೆ ಮೂಲಕ ಗಾಂಧಿ­ವನದಲ್ಲಿ ಕೊನೆಗೊಂಡಿತು. ನಂತರ ಅಲ್ಲಿಯೇ ಬಹಿರಂಗ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಮುಖಂ­ಡರು, ಏಕತಾ ಓಟದ ನಂತರದ ದಿನ­ಗಳಲ್ಲಿ ಪಟೇಲರ ಕುರಿತು ಪ್ರೌಢಶಾಲೆ, ಕಾಲೇಜಿನಲ್ಲಿ ಭಾಷಣ, ಪ್ರಬಂಧ, ಚಿತ್ರ ರಚನೆ ಸ್ಪರ್ಧೆಗಳನ್ನೂ ಆಯೋಜಿಸ­ಲಾಗು­ವುದು ಎಂದು ಹೇಳಿದರು.

ನಗರದ ಡೂಂಲೈಟ್ ವೃತ್ತದಲ್ಲಿ ಓಟಕ್ಕೆ ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ ಚಾಲನೆ ನೀಡಿದರು. ಮಾಜಿ ಶಾಸಕರಾದ ವೈ.ಸಂಪಂಗಿ, ಎಂ.ನಾರಾಯಣಸ್ವಾಮಿ, ಎಟ್ಟಕೋಡಿ ಕೃಷ್ಣಾರೆಡ್ಡಿ, ಡಾ.ಶಿವಣ್ಣ, ಶಂಕರ ನಾರಾಯಣ ರೆಡ್ಡಿ, ಯಶ್ವಂತ್ ರಾವ್, ಜೆ.ಎಸ್.­ಪಾರ್ಥಸಾರಥಿ, ಓಂಶಕ್ತಿ ಚಲಪತಿ, ಪ್ರಮೋದ್, ಶಿಳ್ಳಂಗೆರೆ ಮಹೇಶ್, ಮಾಗೇರಿ ನಾರಾಯಣ­ಸ್ವಾಮಿ, ಗೂಟ್ಲೂರು ಮಂಜುನಾಥ್, ಚಲಪತಿ ಇತರರು ಮೊದಲಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT